ಜನಾರ್ಧನ ಪೂಜಾರಿಯನ್ನು ಎನ್ ಕೌಂಟರ್ ನಲ್ಲಿ ಕೊಲ್ಲಬೇಕು, ವೈರಲ್ ಆದ ವಾಯ್ಸ್ ಮೆಸೇಜ್
Recommended Video

ಮಂಗಳೂರು, ಡಿಸೆಂಬರ್. 03: ಶ್ರೀರಾಮ ಮಂದಿರ ನಿರ್ಮಾಣದ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿ ನೀಡಿದ ಹೇಳಿಕೆ ಬಗ್ಗೆ ಕಾಂಗ್ರೆಸ್ ಪಾಳಯದಲ್ಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಭಾನುವಾರ (ಡಿ.02) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಜನಾರ್ಧನ ಪೂಜಾರಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಆಗಿಯೇ ಆಗುತ್ತದೆ ಎಂದು ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡನೊಬ್ಬ ಜನಾರ್ಧನ ಪೂಜಾರಿಯನ್ನು ಎನ್ ಕೌಂಟರ್ ಮಾಡಿ ಕೊಲ್ಲಬೇಕೆಂದು ಹೇಳಿರುವ ವಾಯ್ಸ್ ಮೆಸೇಜ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಜನಾರ್ಧನ ಪೂಜಾರಿ ಆರ್ ಎಸ್ ಎಸ್ ಜೊತೆಗೆ ನಂಟು ಹೊಂದಿದ್ದಾರೆ. ಅವರು ಕಾಂಗ್ರೆಸ್ಸಿನಲ್ಲಿ ಸೋಲಲು ಇದೇ ವರ್ತನೆ ಕಾರಣ. ರಾಮ ಮಂದಿರದ ಪರವಾಗಿ ಮಾತನಾಡಿ ಬಿಜೆಪಿ ಮತ್ತು ಆರ್ ಎಸ್ ಎಸ್ ಜೊತೆಗಿನ ನಂಟನ್ನು ಬಹಿರಂಗಪಡಿಸಿದ್ದಾರೆ.
ಇಂಥ ವ್ಯಕ್ತಿಯನ್ನು ದೇಶದಲ್ಲಿ ಬದುಕಲು ಬಿಡಬಾರದು. ಎನ್ ಕೌಂಟರ್ ನಡೆಸಿ ಸಾಯಿಸಬೇಕು. ಜೊತೆಗೆ ರಾಮ ಮಂದಿರದ ಪರವಾಗಿ ಮಾತನಾಡುವವರನ್ನು ಕೊಲ್ಲಬೇಕು. ಜನಾರ್ಧನ ಪೂಜಾರಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಹೇಳಿಕೊಂಡಿದ್ದಾನೆ.
ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನಾರ್ಧನ ಪೂಜಾರಿ ವಿರುದ್ಧ ಮಾತನಾಡಿದ ವ್ಯಕ್ತಿಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಈ ವಾಯ್ಸ್ ಮೆಸೇಜ್ ನಲ್ಲಿ ಮಾತನಾಡಿರುವ ವ್ಯಕ್ತಿ ಯಾರು ಎಂಬುದು ಈವರೆಗೂ ತಿಳಿದು ಬಂದಿಲ್ಲ.












Click it and Unblock the Notifications