ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಂಡಾ ವರ್ತನೆಗೆ ಮುಗ್ಧ ಉಳ್ಳಾಲದ ವಿದ್ಯಾರ್ಥಿ ಬಲಿ, ಖಾಸಗಿ ಬಸ್ ಸಿಬ್ಬಂದಿ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್‌, 19: ಮಂಗಳೂರಿನ‌ ಖಾಸಗಿ ಬಸ್‌ಗಳ ಗೂಂಡಾ ವರ್ತನೆಗೆ ಮುಗ್ಧ ವಿದ್ಯಾರ್ಥಿಯೋರ್ವ ಬಲಿ ಆಗಿದ್ದಾರೆ. ನಾವೇನು ಮಾಡಿದರೂ ಏನೂ ಆಗಲ್ಲ ಅಂದುಕೊಂಡಿದ್ದ ಖಾಸಗಿ ಬಸ್‌ನವರು ಇದೀಗ ಪೊಲೀಸರ ಅತಿಥಿ ಆಗಿದ್ದಾರೆ.

ಮಂಗಳೂರಿನ ಉಳ್ಳಾಲದ ತ್ಯಾಗರಾಜ್, ಮಮತಾ ಕರ್ಕೇರ ಅವರ ಪುತ್ರ, 16 ವರ್ಷದ ಯಶರಾಜ್ ಸೆಪ್ಟೆಂಬರ್ 7ರಂದು ಖಾಸಗಿ ಸಿಟಿ ಬಸ್‌ನಲ್ಲಿ ಬರುತ್ತಿದ್ದ. ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿ ಹೆದ್ದಾರಿಯಲ್ಲಿ ಬಾಲಕ ಯಶರಾಜ್‌ ಬಸ್‌ನಿಂದ ಕೆಳಗಡೆ ಬಿದ್ದಿದ್ದ. ಬಸ್‌ ತುಂಬಿದ್ದರಿಂದ ಬಾಲಕ ಫುಟ್ ಬೋರ್ಡ್ ಮೇಲೆ ನಿಂತಿದ್ದು, ಆಗ ಹೊರಗೆ ಬಿದ್ದಿದ್ದಾನೆ. ಪರಿಣಾಮ ಬಾಲಕ ಯಶರಾಜ್ ತಲೆಯ ಭಾಗಕ್ಕೆ ತೀವ್ರ ಗಾಯವಾಗಿದ್ದು, ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಯಶರಾಜ್‌ನನ್ನು ಬದುಕಿಸಲು ವೈದ್ಯರು ಶತ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಕಳೆದ ಮಂಗಳವಾರ ಸಂಜೆ ಮೆದುಳು ನಿಷ್ಕ್ರಿಯ ಆಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಖಾಸಗಿ ಬಸ್‌ ಚಾಲಕ, ನಿರ್ವಾಹಕ ಅಂದರ್

ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಹೆತ್ತವರು ಅಂಗಾಂಗ ದಾನ ಮಾಡಿದ್ದಾರೆ. ಮಗನ ಸಾವಿಗೆ ಕಾರಣವಾದ ಖಾಸಗಿ ಬಸ್‌ನವರ ವಿರುದ್ದ ಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಮೃತ ಬಾಲಕನ ಪೋಷಕರ ದೂರಿನ ಮೇರೆಗೆ ಇಂದು ಬಸ್‌ನ ಚಾಲಕ, ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.

Ullal Student death: Private Bus Driver, conductor arrested

KA 19 AA 0833 ನಂಬರ್‌ ಖಾಸಗಿ ಬಸ್‌ನ ಚಾಲಕ ಕಾರ್ತಿಕ್ ಶೆಟ್ಟಿ, ನಿರ್ವಾಹಕ ದಂಶೀರ್‌ನನ್ನು ಬಂಧಿಸಿದ್ದು, ಬಸ್ಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಾಸಗಿ ಬಸ್‌ಗಳ ನಿರ್ಲಕ್ಷ್ಯ ಮತ್ತು ಅತೀ ವೇಗದಿಂದ ಯಶ್‌ರಾಜ್ ಸಾವನ್ನಪ್ಪಿದ್ದಾನೆ. ಪುಟ್ ಬೋರ್ಡ್‌ನಲ್ಲಿ ಪ್ರಯಾಣಿಕರನ್ನು ತುಂಬಿಸಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಯಶ್‌ರಾಜ್ ಪೋಷಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಸೌತ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಮುಗಿಲು ಮುಟ್ಟಿದ್ದ ಮೃತನ ಕುಟುಂಬಸ್ಥರ ಆಕ್ರಂದನ

ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಹೆತ್ತವರು ಅಂಗಾಂಗ ದಾನಕ್ಕೆ ಒಪ್ಪಿದ್ದು, ಅದರಂತೆ ರಾಜ್ಯ ಸರ್ಕಾರದ ಜೀವ ಸಾರ್ಥಕತೆ ತಂಡದವರು ಅಂಗಾಂಗ ಕಸಿ ಮಾಡಿದ್ದಾರೆ. ಕಿಡ್ನಿ, ಲಿವರ್‌ ಅನ್ನು ಕಸಿ ಮಾಡಲಾಗಿದೆ ಎಂದು ವೈದ್ಯರ ಮೂಲಗಳು ತಿಳಿಸಿವೆ. ಯಶರಾಜ್ ಒಬ್ಬನೇ ಮಗನಾಗಿದ್ದು, ಇನ್ನೊಬ್ಬಳು ತಂಗಿ 5ನೇ ತರಗತಿ ಓದುತ್ತಿದ್ದಾಳೆ. ಯಶರಾಜ್‌ನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿದೆ. ಅಂಗಾಂಗ ಕಸಿ ಮಾಡುವ ಸಂದರ್ಭದಲ್ಲಿಯೂ ಸ್ನೇಹಿತರು, ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿದ್ದರು. ಮಂಗಳೂರಿನಲ್ಲಿ ಖಾಸಗಿ ಬಸ್‌ಗಳ ಹಾವಳಿ ಹಿಂದಿನಿಂದಲೂ ನಡೆಯುತ್ತಲೇ ಇದೆ. ಅದೇ ರೀತಿ ರಸ್ತೆ ಕೂಡ ಹಾಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

English summary
A 16 year old student Yashraj become victim of hooligan behavior of private bus in Mangaluru. Private Bus Driver, conductor arrested, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X