ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರಗಜ್ಜನಿಗೆ ಅಗೇಲು ಸೇವೆಯ ಹರಕೆ ತೀರಿಸಿದ ಉಕ್ರೇನ್ ಕುಟುಂಬ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 12: ತುಳುನಾಡಿನ ಕಾರಣಿಕ ದೈವ ಕೊರಗಜ್ಜ ಮತ್ತೆ ಪವಾಡ ಮೆರೆದಿದೆ. ಕಾಂತಾರ ಸಿನಿಮಾದ ನಂತರ ತುಳುನಾಡಿನ ದೈವಗಳ ಮಹತ್ವ ವಿಶ್ವದಾದ್ಯಂತ ಪಸರಿಸಿದೆ. ಇದೀಗ ತಮ್ಮ ಕುಟುಂದ ಕಷ್ಟವನ್ನು ನೀಗಿಸಿದ್ದಕ್ಕೆ ಉಕ್ರೇನ್ ದೇಶದ ಕುಟುಂಬವೊಂದು ದಕ್ಷಿಣ ಕನ್ನಡಕ್ಕೆ ಬಂದು ಹರಕೆಯನ್ನು ಪೂರೈಸಿದೆ.

ಕೆಲವು ತಿಂಗಳ ಹಿಂದೆ ಉಕ್ರೇನ್ ಪ್ರಜೆ ಆ್ಯಂಡ್ರೋ, ಪತ್ನಿ ಎಲೆನಾ ಮತ್ತು ಮಗ ಮ್ಯಾಕ್ಸಿಂ ಭಾರತಕ್ಕೆ ಪ್ರವಾಸ ಬಂದಿದ್ದರು. ಉಕ್ರೇನ್ ದಂಪತಿ ತನ್ನ ಮಗನ ಮ್ಯಾಕ್ಸಿಂ ನರದ ಸಮಸ್ಯೆಯ ಚಿಕಿತ್ಸೆಗಾಗಿ ನಾಡಿ ನೋಡಿ ಔಷದಿ ಕೊಡುವ ಭಕ್ತಿಭೂಷಣ್ ಪ್ರಭೂಜಿ ಅವರನ್ನು ಭೇಟಿ ಮಾಡಿದ್ದರು.

ಕುವೈತ್‌ನಲ್ಲಿ ಪುತ್ತೂರಿನ ಮಹಿಳೆಗೆ ಹಿಂಸೆ ಆರೋಪ: ಸಹಾಯಕ್ಕಾಗಿ ಮನವಿಕುವೈತ್‌ನಲ್ಲಿ ಪುತ್ತೂರಿನ ಮಹಿಳೆಗೆ ಹಿಂಸೆ ಆರೋಪ: ಸಹಾಯಕ್ಕಾಗಿ ಮನವಿ

ಮಾಕ್ಸಿಂಗೆ ಚಿಕಿತ್ಸೆಯ ಭಾಗವಾಗಿ ದೇಸಿ ದನದ ವಿಹಾರದ ಜೊತೆಗೆ ನಾಟಿ ಚಿಕಿತ್ಸೆಯನ್ನು ಪ್ರಭೂಜಿ ಆರಂಭಿಸಿದ್ದರು. ಈ ಚಿಕಿತ್ಸೆಗಾಗಿ ಕಳೆದ ಮೂರು ತಿಂಗಳಿಂದ ಬಂಟ್ವಾಳದ ಕುಮ್ಡೇಲುವಿನ ಶ್ರೀ ರಾಧಾ ಸುರಭೀ ಗೋ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು.

Ukraine Family offers Agelu Seve to Koragakka in Bantwal

ಜನ್ಮಾಷ್ಠಮಿಯ ಸಂದರ್ಭದಲ್ಲಿ ನಡೆದ ಕೊರಗಜ್ಜನ ಕೋಲವೊಂದರಲ್ಲಿ ಮಗನ ಆನಾರೋಗ್ಯ ಸಮಸ್ಯೆ ಪರಿಹಾರವಾಗಲಿ ಎಂದು ಕೋರಿಕೊಂಡಿದ್ದಾರೆ. ಮಗ ಹುಷಾರದಾರೆ ಕೊರಗಜ್ಜನಿಗೆ ಅಗೇಲು ಸೇವೆ ನೀಡೋದಾಗಿ ಹರಕೆ ಹೊತ್ತಿದ್ದಾರೆ. ಇದೀಗ ಮಗ ಮಾಕ್ಸಿಂ ಗುಣಮುಖನಾಗಿದ್ದು, ಉಕ್ರೇನ್ ದಂಪತಿ ಪುದು ಗ್ರಾಮದ ಕೊಡ್ಮಣ್ಣು ಎಂಬಲ್ಲಿ ಕೊರಗಜ್ಜನಿಗೆ ಅಗೇಲು ಸೇವೆಯನ್ನು ಅರ್ಪಿಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಕುಟುಂಬ ಮತ್ತೆ ಉಕ್ರೇನ್‌ಗೆ ಮರಳಲಿದೆ. ಕೊರಗಜ್ಜನ ದಯೆಯಿಂದ ಮಗ ಹುಷಾರಾದ ಸಂತೃಪ್ತ ಭಾವ ವಿದೇಶೀ ಕುಟುಂಬದಲ್ಲಿ ಮೂಡಿದೆ.

ವೈದ್ಯರೆ ಬದುಕಲ್ಲ ಎಂದಿದ್ದ ಮಗುವನ್ನು ಬದುಕಿಸಿದ್ದ ಕೊರಗಜ್ಜ

ಕೊರಗಜ್ಜನ ವವಾಡಕ್ಕೆ ಹಲವು ನಿದರ್ಶನಗಳಿವೆ. ಉಡುಪಿಯಲ್ಲಿ ವೈದ್ಯರೇ ಪೋಷಕರಿಗೆ ನಿಮ್ಮ ಬದುಕುವುದು ಕಷ್ಟ ಎಂದು ತಿಳಿಸಿದ್ದರು. ನಾಲ್ಕು ತಿಂಗಳ ಅಸುಳೆಯನ್ನು ಕೊರಗಜ್ಜನ ಗಂಧ ಪ್ರಸಾದವನ್ನು ಪಡೆದು ಮಗುವಿಗೆ ಹಚ್ಚಿದ್ದರು. ನಂತರ ವೈದ್ಯರ ಪ್ರಯತ್ನ ಕೊರಗಜ್ಜನ ಕೃಪೆಯಿಂದ ಎರಡೂ ವಾರಗಳಲ್ಲಿ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಪಡೆದುಕೊಂಡಿದೆ.

ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಜನಪ್ರಿಯ ದೈವವಾಗಿದ್ದು, ಯಾವುದೇ ಬೆಲೆಬಾಳುವ ವಸ್ತು ಕಳೆದು ಹೋದರೆ, ಆರೋಗ್ಯ ಸಮಸ್ಯೆ ಎದುರಾದರೆ ಅಲ್ಲಿನ ಜನರು ಕೊರಗಜ್ಜನಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಬಹುಪಾಲು ಬೇಡಿಕೆಗಳು ಈಡೇರಿವೆ ಎನ್ನುತ್ತಾರೆ ತುಳುನಾಡಿ ಕೊರಗಜ್ಜನ ನಂಬಿರುವ ಭಕ್ತರು.

English summary
A family for Ukraine offered agelu seve to Koragajja after their son sickness cured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X