ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

T Mohandas Pai : ಹಿರಿಯ ಪತ್ರಿಕೋದ್ಯಮಿ ಟಿ ಮೋಹನದಾಸ್ ಪೈ ವಿಧಿವಶ

|
Google Oneindia Kannada News

ಮಣಿಪಾಲ, ಜುಲೈ 31: ಪ್ರಖ್ಯಾತ ಪೈ ಕುಟುಂಬ ಸದಸ್ಯ ಹಾಗೂ ಹೆಸರಾಂತ ಪತ್ರಿಕೋದ್ಯಮಿಯಾಗಿದ್ದ ಟಿ ಮೋಹನದಾಸ್ ಪೈ ಭಾನುವಾರ ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ತೋನ್ಸೆ ಮೋಹನದಾಸ್ ಪೈ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ತಮ್ಮ ಕುಟುಂಬ ಸದಸ್ಯರಾದ ಡಾ. ಟಿ. ರಾಮದಾಸ್ ಪೈ, ಟಿ. ಅಶೋಕ್ ಪೈ, ನಾರಾಯಣ ಪೈ, ವಾಸಂತಿ ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ, ಸತೀಶ್ ಯು ಪೈ ಅವರನ್ನು ಟಿ ಮೋಹನದಾಸ್ ಪೈ ಅಗಲಿದ್ದಾರೆ.

ಡಾ. ಟಿಎಂಎಂ ಪೈ ಫೌಂಡೇಶನ್, ಮಣಿಪಾಲ್ ಮೀಡಿಯಾ ನೆಟ್ವರ್ಕ್, ಐಎಸ್‌ಡಿಎಸ್ (ಸಿಂಡಿಕೇಟ್ ಬ್ಯಾಂಕ್‌ನ ಹಿಂದಿನ ಅವತಾರ), ಎಂಜಿಎಂ ಕಾಲೇಜು ಟ್ರಸ್ ಇತ್ಯಾದಿಯನ್ನು ಟಿ ಮೋಹನ್ ದಾಸ್ ಸ್ಥಾಪಿಸಿ ನಿರ್ವಹಿಸಿದ್ದರು. ಉದಯವಾಣಿ ದಿನಪತ್ರಿಕೆ, ತರಂಗ ಮಾಸಪತ್ರಿಕೆ ಇವೆಲ್ಲವೂ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಸಂಸ್ಥೆಯಿಂದ ಮುದ್ರಿತವಾಗುತ್ತವೆ.

Udayavani Founder T Mohandas Pai Passes Away

ಸಿಎಂ ಸಂತಾಪ
ಟಿ ಮೋಹನದಾಸ್ ಪೈ ನಿಧನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

"ಮೋಹನದಾಸ್ ಪೈ ನಿಧನ ಹೊಂದಿದ್ದಾರೆ ಎನ್ನುವ ವಿಷಯ ನನಗೆ ಆಘಾತ ಉಂಟು ಮಾಡಿದೆ. ಹಿರಿಯ ಚೇತನರು, ಎಲ್ಲರ ಮಾರ್ಗದರ್ಶಕರಂತಿದ್ದ ಟಿ. ಮೋಹನ್ ದಾಸ್ ಪೈ ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ಪೈ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಕುಮಾರಸ್ವಾಮಿ ಕಂಬನಿ
ಟಿ ಮೋಹನದಾಸ್ ಪೈ ನಿಧನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅತೀವ ಆಘಾತ ವ್ಯಕ್ತಪಡಿಸಿದ್ದಾರೆ.

"ಅತ್ಯುತ್ತಮ ಆಡಳಿತ, ಕ್ರಮಬದ್ದ ಯೋಜನೆಗಳನ್ನು ರೂಪಿಸುವಲ್ಲಿ ನಿಪುಣರಾಗಿದ್ದ ಪೈ ಅವರು, ಪೈ ಪರಿವಾರದ ಕೀರ್ತಿಯನ್ನು ದಿಗಂತಕ್ಕೆ ಏರಿಸಿ, ಅಸಂಖ್ಯಾತ ಜನರಿಗೆ ಉದ್ಯೋಗದಾತರು ಆಗಿದ್ದರು.

"1970ರಲ್ಲಿ ಉದಯವಾಣಿ ಪತ್ರಿಕೆಯನ್ನು ಆರಂಭಿಸಿದ ಮೋಹನದಾಸ ಪೈ ಅವರು, ಅಲ್ಪ ಕಾಲದಲ್ಲಿಯೇ ಅದನ್ನು ರಾಜ್ಯದ ಪ್ರಮುಖ ಪತ್ರಿಕೆಯನ್ನಾಗಿ ಕಟ್ಟಿದರು. ಮುದ್ರಣ, ಪ್ರಕಾಶನ, ಮುದ್ರಣ ತಂತ್ರಜ್ಞಾನದಲ್ಲಿ ನವಶಕೆ ಆರಂಭಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

"ಮೋಹನದಾಸ ಪೈ ಅವರ ಅಗಲಿಕೆ ವೈಯಕ್ತಿಕವಾಗಿ ದುಃಖ ಉಂಟು ಮಾಡಿದೆ. ಅವರಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ ಹಾಗೂ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಇಡೀ ಪೈ ಪರಿವಾರಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸಂತಾಪ
ಇದೇ ವೇಳೆ ಮತ್ತೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಉದಯವಾಣಿ ಸಂಸ್ಥಾಪಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Renowned Businessman T Mohandas Pai has breathed his last on July 31st in Manipal. The 89 year old Pai was unwell from past few years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X