ಮೋದಿ ಮಾತನ್ನು ಚಿಕ್ಕ ಮಕ್ಕಳೂ ಸಂಶಯದಿಂದ ನೋಡುತ್ತಿದ್ದಾರೆ: ಯು ಟಿ ಖಾದರ್
ಮಂಗಳೂರು ಮಾರ್ಚ್ 02: ಪಾಕಿಸ್ತಾನದ ಉಗ್ರರ ತರಬೇತಿನ ಶಿಬಿರಗಳ ಮೇಲೆ ಭಾರತದ ವಾಯು ಸೇನೆ ನಡೆಸಿದ ಏರ್ ಸ್ಟ್ರೈಕನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಯಡಿಯೂರಪ್ಪ ವಿರುದ್ಧ ಈಗ ಬಿಜೆಪಿಯವರು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಕಿಡಿಕಾರಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಏರ್ ಸ್ಟ್ರೈಕ್ ದಾಳಿಯನ್ನು ರಾಜಕೀಯ ಲಾಭದ ಬಗ್ಗೆ ಯಡಿಯೂರಪ್ಪ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಎಂದಿಗೂ ದೇಶದ ಸೈನಿಕರ ಚಿಂತೆ ಮಾಡುತ್ತದೆ. ಆದರೆ ಬಿಜೆಪಿ ಗೆ ಮಾತ್ರ ಅಧಿಕಾರ ಮತ್ತು ಸೀಟಿನ ಚಿಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂಬೈ ಮೇಲೆ ಉಗ್ರರ ದಾಳಿ ನಡೆಸಿದ್ದ ಘಟನೆ ಗೆ ಕಾಂಗ್ರೆಸ್ ಮೇಲೆ ಬಿಜೆಪಿ ಗೂಬೆಕೂರಿಸಲಾಗಿತ್ತು.

ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಯವರನ್ನು ಕೆಳಗಿಳಿಸಲಾಗಿತ್ತು. ಈಗ ಯಡಿಯೂರಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್ ಏನು ಕ್ರಮ ಕೈಗೊಳ್ಳುತ್ತೆ ಎಂದು ಅವರು ಪ್ರಶ್ನಿಸಿದರು.
ಈ ಹಿಂದಿನ ಪ್ರಧಾನಮಂತ್ರಿಗಳ ಮಾತಿಯ ಬಗ್ಗೆ ಗೌರವ ಇತ್ತು. ಆದರೆ ಈಗಿನ ಪ್ರಧಾನಮಂತ್ರಿ ಮಾತಿಗೆ ಬೆಲೆನೇ ಇಲ್ಲ. ಪ್ರಧಾನಿ ಮಾತು ಜನರಿಗೆ ಸತ್ಯವಾ ಸುಳ್ಳಾ ಅನ್ನೋದೇ ಗೊಂದಲಾಗುತ್ತಿದೆ.
ಈ ಹಿಂದಿನ ಪ್ರದಾನಿ ಮನಮೋಹನ್ ಸಿಂಗ್ ಅವರ ಮಾತಿಗೆ ಇಡೀ ವಿಶ್ವದಲ್ಲಿ ಗೌರವ ಇತ್ತು. ಮೋದಿ ಅವರ ಮಾತನ್ನು ಚಿಕ್ಕ ಮಕ್ಕಳೂ ಸಂಶಯದಿಂದ ಚರ್ಚೆ ಮಾಡುವಂತೆ ಆಗಿದೆ ಎಂದು ಅವರು ಹೇಳಿದರು.












Click it and Unblock the Notifications