ಮತಾಂತರ ಯತ್ನ ಆರೋಪ, ಯುವತಿಯರು ಪೊಲೀಸರ ವಶಕ್ಕೆ
ಮಂಗಳೂರು, ಸೆಪ್ಟೆಂಬರ್ 6 : ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಬ್ಬರು ಯುವತಿಯರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ ವಿಚಾರ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಪಡ್ನೂರು ಗ್ರಾಮದ ಉಗ್ಗಬೆಟ್ಟು ಎಂಬಲ್ಲಿ ಇರುವ ಮನೆಗಳಿಗೆ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕವನ್ನು ನೀಡುತ್ತಿದ್ದರು ಎಂದು ಆರೋಪಿಸಲಾಗಿತ್ತು.

ಮನೆ ಮಂದಿಯನ್ನು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎನ್ನುವ ಆರೋಪದಡಿ ಸ್ಥಳೀಯ ಗ್ರಾಮಸ್ಥರು ಇಬ್ಬರು ಯುವತಿಯರನ್ನು ಸುತ್ತುವರಿದು, ವಿಚಾರಿಸಿದ್ದರು. ಅಲ್ಲದೆ, ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಡ ಹಾಗೂ ಕೃಷಿ ಚಟುವಟಿಕೆಗಳಲ್ಲೇ ತೊಡಗಿಕೊಂಡಿರುವ ಕುಟುಂಬಗಳು ಹೆಚ್ಚಾಗಿ ಇಲ್ಲಿದ್ದು, ಮಹಿಳೆಯರು ಇರುವ ಸಂದರ್ಭ ನೋಡಿ ಈ ಯುವತಿಯರು ಮನೆಗೆ ಪ್ರವೇಶಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕ್ರೈಸ್ತ ಧರ್ಮಕ್ಕೆ ಸೇರಿದ ಪುಸ್ತಕಗಳನ್ನು ಮನೆ ಮಂದಿಗೆ ನೀಡಿ, ಆ ಧರ್ಮದ ಬಗ್ಗೆ ಪ್ರಚಾರ ನಡೆಸುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.












Click it and Unblock the Notifications