ಮಂಗಳೂರಿನ ಇಬ್ಬರು ಯುವಕರು ನೀರು ಪಾಲು
ಮಂಗಳೂರು, ನವೆಂಬರ್, 24 : ನದಿಗೆ ಈಜಲು ಹೋದ ಇಬ್ಬರು ಅಪ್ರಾಪ್ತ ಯುವಕರು ನೀರು ಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಅಗ್ರಹಾರ ಸಮೀಪ ಮಂಗಳವಾರ ನಡೆದಿದ್ದು, ಇವರ ಮೃತದೇಹ ಸಿಗದ ಕಾರಣ ಸಾವಿನ ಬಗ್ಗೆ ಸಂಶಯ ಮೂಡಿದೆ.
ನೀರು ಪಾಲಾದ ಇಬ್ಬರು ಯುವಕರು ಸ್ಟೀಫನ್ ರಾಜ್ (17) ಜಿತೇಶ್(17) ಎಂದು ತಿಳಿದು ಬಂದಿದ್ದು, ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಇವರು ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.[ಕಾವೇರಿ ನದಿಯನ್ನು ಮಾಲಿನ್ಯ ಮುಕ್ತಗೊಳಿಸಿ, ಸ್ವಚ್ಛತೆ ಕಾಪಾಡಿ]

ಈಜಲು ಹೋಗಿ ಪ್ರಾಣಕಳೆದುಕೊಂಡ ಈ ಯುವಕರ ದೇಹಕ್ಕಾಗಿ ಸ್ಥಳೀಯ ಮುಳುಗು ತಜ್ಞರಿಂದ ಹುಡುಕಾಟ ಮುಂದುವರೆದಿದೆ. ಸ್ಥಳಕ್ಕೆ ಆಗಮಿಸಿ ಘಟನೆಯ ಪರಿಶೀಲನೆ ನಡೆಸಿದ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿ ತಟದಲ್ಲಿ ಯುವಕರ ಬ್ಯಾಗ್ ಪತ್ತೆಯಾಗಿದೆ.[ಸಮಯಪ್ರಜ್ಞೆ ಮೆರೆದು ಪ್ರಾಣ ಉಳಿಸಿದ ಪೊಲೀಸ್ ಪೇದೆ!]
ಕಳೆದ ಒಂದು ತಿಂಗಳ ಹಿಂದೆ ಉಡುಪಿಯ ಕಟ್ಟಪಾಡಿಯ ಎಸ್ ವಿಎಸ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ಆಸ್ಟಿನ್, ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಶ್ವಿನ್ ಎಂಬ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದರು.












Click it and Unblock the Notifications