Get Updates
Get notified of breaking news, exclusive insights, and must-see stories!

ಬಾಲಕಿಗೆ ಬೆಲೆ ಬಾಳುವ ವಸ್ತುಗಳ ಆಮಿಷವೊಡ್ಡಿ ಪ್ರೀತಿಸಲು ಒತ್ತಡ

ಮಂಗಳೂರು, ಆಗಸ್ಟ್ 26 : ಪ್ರೀತಿಸುವಂತೆ ಬಾಲಕಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಅನ್ಯಕೋಮಿನ ಯುವಕರ ವಿರುದ್ಧ ಪೋಕ್ಸೊ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ನಗರ ಹೊರವಲಯದ ವಿದ್ಯಾರ್ಥಿನಿಗೆ ಚಾಕೊಲೇಟ್ ನೀಡಿ ಪ್ರೀತಿಸುವಂತೆ ಒತ್ತಡ ಹೇರಿ, ಮಾನಭಂಗಕ್ಕೆ ಯತ್ನಿಸಿದ್ದಾರೆ. ಆರೋಪಿಗಳನ್ನು ಪುತ್ತೂರು, ಜನತಾ ಕಾಲೋನಿ ನಿವಾಸಿಗಳಾದ ಕಲಂದರ್(19) ಹಾಗೂ ಶಾಬಿತ್ (21) ಎಂದು ಗುರುತಿಸಲಾಗಿದೆ.

Two arrested for sexually harassing a minor girl at Puttur

ಕಳೆದ ಮಂಗಳವಾರ ವಿದ್ಯಾರ್ಥಿನಿ ತನ್ನ ಮನೆಯ ಕಾಂಪೌಂಡ್ ಬಳಿ ನಿಂತಿದ್ದಾಗ ಕಲಂದರ್ ಹಾಗೂ ಶಾಬಿತ್ ಬಂದು ಪ್ರೀತಿಸುವಂತೆ ಈಕೆಯ ಬಳಿ ಅನುಚಿತವಾಗಿ ವರ್ತಿಸಿದ್ದಾರೆ. ಇದಕ್ಕೆ ವಿದ್ಯಾರ್ಥಿನಿಯು ಒಪ್ಪದಿದ್ದಾಗ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ. ಆಕೆ ತಪ್ಪಿಸಿಕೊಂಡು ಮನೆಯೊಳಗೆ ಓಡಿ ಹೋಗಿ ಹೆತ್ತವರಿಗೆ ತಿಳಿಸಿದ್ದಾಳೆ. ಆ ನಂತರ ಪೊಲೀಸರಿಗೆ ದೂರು ನೀಡಲಾಗಿದೆ.

ತಮ್ಮನ್ನು ಪ್ರೀತಿಸುವಂತೆ ಒತ್ತಡ ಹೇರಿದ ಆರೋಪಿಗಳು ಈಕೆಗೆ ಬೆಲೆಬಾಳುವ ವಸ್ತುಗಳನ್ನು ನೀಡುವ ಆಮಿಷ ಒಡ್ಡಿದ್ದಾರೆ. ಮೊಬೈಲ್, ಕರೆನ್ಸಿ, ಚಾಕೊಲೇಟ್ ಹಾಗೂ ವಾಚ್ ಮೊದಲಾದ ವಸ್ತುಗಳನ್ನು ನೀಡುವ ಬಗ್ಗೆ ತಿಳಿಸಿದ್ದು, ಈ ಬಗ್ಗೆ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.

ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+