ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಇನ್ನೂ ಕಡಲಿಗಿಳಿಯದ ನಾಡದೋಣಿಗಳು

|
Google Oneindia Kannada News

ಮಂಗಳೂರು, ಜೂನ್ 18: ಕರಾವಳಿಯಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಇನ್ನೂ ಆರಂಭಗೊಂಡಿಲ್ಲ. ಮುಂಗಾರು ದುರ್ಬಲಗೊಂಡ ಕಾರಣ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕಾಣದಾಗಿದೆ. ಕಳೆದ ನಾಲ್ಕು ದಿನಗಳಿಂದ ಬೇಸಿಗೆಯ ವಾತಾವರಣವಿದೆ.

ಇಡೀ ದಿನ ಬಿಸಿಲು ನೆರಳಿನಾಟ ಮುಂದುವರೆದಿದ್ದು, ಕೆಲವೊಮ್ಮೆ ಮೋಡ ಕವಿದ ವಾತಾವರಣವಿದ್ದರೆ, ಅರೆಗಳಿಗೆಯಲ್ಲೇ ಬಿಸಿಲು ಪ್ರತ್ಯಕ್ಷವಾಗುತ್ತಿದೆ. ಮುಂಗಾರು ಮಳೆಯನ್ನು ಕಡಲಿನಲ್ಲಿ ಮೀನುಗಳ ಸಂತಾನೋತ್ಪತ್ತಿ ಕಾಲ ಎಂದು ಹೇಳಲಾಗುತ್ತದೆ. ಈ ಮಳೆಗಾಗಿ ಮೀನುಗಾರರು ಕಾಯುತ್ತಿದ್ದು, ನಾಡದೋಣಿ ಮೀನುಗಾರರು ಇನ್ನೂ ಕಡಲಿಗಿಳಿದಿಲ್ಲ.

ನಾಳೆಯಿಂದ ಜುಲೈವರೆಗೆ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧನಾಳೆಯಿಂದ ಜುಲೈವರೆಗೆ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

ಪ್ರತಿ ವರ್ಷದಂತೆ ಯಾಂತ್ರೀಕೃತ ಮೀನುಗಾರಿಕೆ ಮೇ 31ಕ್ಕೆ ಕೊನೆಗೊಂಡಿದ್ದು, ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತದೆ. ಆದರೆ ಅವು ಸಮುದ್ರಕ್ಕೆ ಇಳಿಯಬೇಕಾದರೆ ಮಳೆ ಉತ್ತಮವಾಗಿ ಬಂದು, ದೊಡ್ಡ ಮಟ್ಟದ ತೂಫಾನ್‌ ಉಂಟಾಗಿ, ಆ ಬಳಿಕ ಕಡಲು ಶಾಂತವಾಗಬೇಕು. ಆದರೆ ಈ ಬಾರಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮುಂಗಾರು ತುಸು ವಿಳಂಬವಾಗಿ ಆರಂಭವಾಗಿದೆ. ಇದರ ಪ್ರತಿಕೂಲ ಪರಿಣಾಮ ನಾಡದೋಣಿ ಮೀನುಗಾರಿಕೆಗೂ ತಟ್ಟಿದೆ.

Traditional fishing not yet started in coastal district

ಕರಾವಳಿಯಲ್ಲಿ ಜೂನ್ 1ರಿಂದ ಮೀನುಗಾರಿಕಾ ರಜೆ ಆರಂಭಕರಾವಳಿಯಲ್ಲಿ ಜೂನ್ 1ರಿಂದ ಮೀನುಗಾರಿಕಾ ರಜೆ ಆರಂಭ

ಮುಂಗಾರಿನಲ್ಲಿ ನಡೆಯುವ ನಾಡದೋಣಿ ಮೀನುಗಾರಿಕೆಯಲ್ಲಿ ಸಿಗಡಿ ಸಹಿತ ಇನ್ನಿತರ ಮೀನುಗಳು ಸಿಕ್ಕಿದಲ್ಲಿ ದಿನವೊಂದರ ವಹಿವಾಟು ಕೋಟಿ ರೂಪಾಯಿಗೆ ಏರುತ್ತದೆ. ಈ ಸೀಸನ್ ‌ನಲ್ಲಿ ನಾಡದೋಣಿಗಳಲ್ಲಿ ವಹಿವಾಟು ಜೋರಿರುತ್ತದೆ. ಆದರೆ ಮುಂಗಾರು ವಿಳಂಬವಾದಷ್ಟು ಮೀನುಗಾರರಿಗೆ ನಷ್ಟವೇ ಹೆಚ್ಚು.

English summary
61 days, fishing ban is imposed because of monsoon in Coastal districts. In Monsoon season, traditional fishing boats are allowed to sea. But this time traditional fishing is not yet started
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X