ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ಆಗಬಾರದೆಂದರೆ ಸರಿಯಾಗಿ ಕೆಲಸ ಮಾಡಿ; ಬಸವರಾಜ ಬೊಮ್ಮಾಯಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 12; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಸಭೆ ನಡೆಸಿದರು.

Recommended Video

ಕೋಪಗೊಂಡ ಸಿಎಂ - ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಜೊತೆ ಸಭೆ | Oneindia

ಮಂಗಳೂರು ನಗರದ ಜಿಲ್ಲಾ ಪಂಚಾಯತ್‍ ಸಭಾಂಗಣದಲ್ಲಿ ಬಸವರಾಜ ಬೊಮ್ಮಾಯಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಸಚಿವರು, ಶಾಸಕರು, ಇತರೆ ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು; ಅದ್ಧೂರಿ ಕಾರ್ಯಕ್ರಮ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಂಗಳೂರು; ಅದ್ಧೂರಿ ಕಾರ್ಯಕ್ರಮ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ

ದಕ್ಷಿಣ ಕನ್ನಡ ಜಿಲ್ಲೆಯ ಪಾಸಿಟಿವ್ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸದ್ದಕ್ಕೆ ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದರು. ‌ಜಿಲ್ಲೆಯ ಶೇ 80ರಷ್ಟು ಸೋಂಕಿತರು ಮನೆಗಳಲ್ಲೇ ಇರುವ ಬಗ್ಗೆ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಪ್ರಶ್ನಿಸಿದ ಸುಧಾಕರ್, ಕಳೆದ ಬಾರಿಯೂ ನಿಮ್ಮಲ್ಲಿ ಸೋಂಕಿತರು ಮನೆಯಲ್ಲೇ ಇದ್ದರು ಎಂದರು.

ದಕ್ಷಿಣ ಕನ್ನಡ-ಕೇರಳ ಗಡಿ ಚೆಕ್‌ಪೋಸ್ಟ್‌ಗೆ ಎಡಿಜಿಪಿ ಭೇಟಿ ದಕ್ಷಿಣ ಕನ್ನಡ-ಕೇರಳ ಗಡಿ ಚೆಕ್‌ಪೋಸ್ಟ್‌ಗೆ ಎಡಿಜಿಪಿ ಭೇಟಿ

ಆದಷ್ಟು ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಎಂದು ಸೂಚನೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಸವರಾಜ ಬೊಮ್ಮಾಯಿ ಕೋವಿಡ್ ಕೇರ್ ಸೆಂಟರ್‌ಗೆ ಬನ್ನಿ ಅಂದರೆ ಜನ ಬರಲ್ಲ. ಮೊದಲು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವ್ಯವಸ್ಥೆ ಹೆಚ್ಚಿಸಿ ಎಂದು ನಿರ್ದೇಶನ ನೀಡಿದರು.

 ದಕ್ಷಿಣ ಕನ್ನಡ ಜಿಲ್ಲಾಡಳಿತದ ಬೇಜವಾಬ್ದಾರಿ ವರ್ತನೆ; ರಸ್ತೆಯಲ್ಲೇ ಮಲಗಿದ ಧರ್ಮಸ್ಥಳದ ಭಕ್ತರು! ದಕ್ಷಿಣ ಕನ್ನಡ ಜಿಲ್ಲಾಡಳಿತದ ಬೇಜವಾಬ್ದಾರಿ ವರ್ತನೆ; ರಸ್ತೆಯಲ್ಲೇ ಮಲಗಿದ ಧರ್ಮಸ್ಥಳದ ಭಕ್ತರು!

ಕೋವಿಡ್ ಸೋಂಕಿತರ ಮನವೊಲಿಸಿ

ಕೋವಿಡ್ ಸೋಂಕಿತರ ಮನವೊಲಿಸಿ

ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಆಕ್ಸಿಜನ್, ವೆಂಟಿಲೇಟರ್ ಸೇರಿ ಎಲ್ಲಾ ಸೌಕರ್ಯ ಮಾಡಿ ಕೊಡಿ. ಆ ಬಳಿಕ ಸೋಂಕಿತ ವ್ಯಕ್ತಿಯ ಮನೆಯ ಸುತ್ತ ಟೆಸ್ಟಿಂಗ್ ಹೆಚ್ಚಿಸಿ. ಆ ಬಳಿಕ ವೈದ್ಯರ ತಂಡ ನೇಮಿಸಿ ಸೋಂಕಿತನ ರೋಗಲಕ್ಷಣ ಗಮನಿಸಿ ಮನವೊಲಿಸಿ. ಆದಷ್ಟು ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಸಿಬ್ಬಂದಿ ಕೊರತೆ ಇದೆ

ಸಿಬ್ಬಂದಿ ಕೊರತೆ ಇದೆ

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂಬುದಾಗಿ ಆರೋಪ ಮಾಡಿದ್ದಾರೆ. ನೀವು ಮನೆಯ ಬದಲು ಕೋವಿಡ್ ಕೇರ್ ಸೆಂಟರ್ ಸೇರಿಸೋಕೆ ಹೇಳ್ತೀರಾ. ಆದರೆ ಇಲ್ಲಿ 36 ಕೋವಿಡ್ ಸೆಂಟರ್‌ಗೆ 120 ಜನ ಇದ್ದಾರೆ. ಹೀಗಿರುವಾಗ ಜನ ಹೇಗೆ ಕೋವಿಡ್ ಸೆಂಟರ್‌ಗೆ ಬರ್ತಾರೆ?.

ಈ ವೇಳೆ ಎಲ್ಲದಕ್ಕೂ ಪರಿಹಾರ ಕೊಡೋಣ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನನ್ನ ಪ್ರಗತಿ ಪರಿಶೀಲನೆ ಸ್ಟೈಲ್ ಸ್ವಲ್ಪ ಬೇರೆ ರೀತಿ. ನಾನು ಇಲ್ಲೇ ಅದಕ್ಕೆಲ್ಲಾ ಪರಿಹಾರ ಕಂಡುಕೊಂಡೇ ಹೋಗ್ತೀನಿ ಅಂತ ಹೇಳಿದರು.

ಜನ ಪರೀಕ್ಷೆ ಮಾಡಿಸಲು ಬರಲ್ಲ

ಜನ ಪರೀಕ್ಷೆ ಮಾಡಿಸಲು ಬರಲ್ಲ

ಸಭೆಯಲ್ಲಿ ಮಾಜಿ ಸಚಿವ ಯು. ಟಿ. ಖಾದರ್ ಮಾತನಾಡಿ, "ಪಾಸಿಟಿವ್ ಆದರೆ ಕೋವಿಡ್ ಕೇರ್ ಸೆಂಟರ್ ಸೇರಿಸಿ ಅಂತೀರಾ. ಆದರೆ ಇದು ಪ್ರಾಕ್ಟಿಕಲ್ ಆಗಿ ಮಾಡಲು ಅಸಾಧ್ಯವಾದ ಕೆಲಸ. ಈಗ ಹೋಮ್ ಐಸೋಲೇಶನ್ ಕಾರಣಕ್ಕೆ ಜನರು ಕೋವಿಡ್ ಟೆಸ್ಟ್ ‌ಮಾಡಿಸ್ತಾರೆ. ನೀವು ಪಾಸಿಟಿವ್ ಬಂದರೆ ಕೋವಿಡ್ ಕೇರ್ ಸೆಂಟರ್ ಸೇರಿಸ್ತೀನಿ ಅಂದರೆ ಜನ ಟೆಸ್ಟ್ ಮಾಡಿಸಲು ಬರಲ್ಲ. ನಾವು ಅವರನ್ನು ‌ಕರೆದು ಟೆಸ್ಟ್ ಮಾಡಿಸಿ ಜೈಲಿಗೆ ಹಾಕಿದ ಹಾಗೆ ಆಗುತ್ತೆ, ಅದಕ್ಕೆ ಭಯದಿಂದ ಬರಲ್ಲ ಎಂದರು.

ಮಾತಿನ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲವನ್ನೂ ನಾವು ನೆಗೆಟಿವ್ ಯೋಚಿಸಿದರೆ ಸಮಸ್ಯೆ ಬಗೆ ಹರಿಯಲ್ಲ. ಲಾಕ್ ಡೌನ್ ಪರಿಸ್ಥಿತಿ ಬರಬಾರದು ಅಂತ ನಾವು ಈ ಕೆಲಸ ಮಾಡುತ್ತಿದ್ದೇವೆ. ಪಾಸಿಟಿವ್ ಬಂದವರ ಜೊತೆ ಲಾಕ್ ಡೌನ್ ಆದರೆ ಸಾಮಾನ್ಯರಿಗೂ ಕಷ್ಟ ಬರುತ್ತೆ. ಹೀಗಾಗಿ ಸೋಂಕು ತಗುಲಿದಾಗಲೇ ಕಟ್ಟುನಿಟ್ಟು ಮಾಡೋದು ಸೂಕ್ತ ಎಂದರು.

ಅಧಿಕಾರಿಗಳಿಗೆ ಖಡಕ್ ಸೂಚನೆ

ಅಧಿಕಾರಿಗಳಿಗೆ ಖಡಕ್ ಸೂಚನೆ

ಹೋಂ ಐಸೋಲೇಶನ್ ಸಂಬಂಧ ವೈಜ್ಞಾನಿಕ ಕಾರಣ ನೋಡಿ ಮಾಡಿ‌‌. ವೈದ್ಯರ ಮೂಲಕ ಆದಷ್ಟು ಸೋಂಕಿತರ ಮನವೊಲಿಸುವ ಕೆಲಸ ಮಾಡಿ‌‌. ಗ್ರಾಮೀಣ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರೌಂಡ್ ಲೆವೆಲ್ ಪರಿಶೀಲನೆ ನಡೆಸಿ‌. ಹೋಂ ಐಸೋಲೇಶನ್ ಇದ್ದವರಿಗೆ ದಿನದಲ್ಲಿ ಎರಡು ಬಾರಿ ತಪಾಸಣೆ ನಡೆಸಿ. ಅವರ ಮನೆ, ಕೊಠಡಿ ಹಾಗೂ ಸುತ್ತಲಿನ ವ್ಯವಸ್ಥೆಯತ್ತ ಗಮನ ಹರಿಸಿ. ಇದರ ಜೊತೆಗೆ ಕೋವಿಡ್ ಕೇರ್ ಸೆಂಟರ್ ಕೂಡ ಸುವ್ಯವಸ್ಥಿತವಾಗಿರಲಿ. ಕೋವಿಡ್ ಉತ್ತುಂಗಕ್ಕೆ ಹೋದ ಸಮಯದಲ್ಲಿ ಯಾವ ರೀತಿ ಕೆಲಸ ಮಾಡಿದ್ರೋ ಹಾಗೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟರು.

English summary
Karnataka chief minister Basavaraj Bommai directed officials to work properly to avoid lockdown in the district during Covid situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X