• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಪ್ಪಿನಂಗಡಿಯಲ್ಲಿ ಬರ್ತ್ ಡೇ ಪಾರ್ಟಿ ಮಾಡಲು ಹೋದವರು ನೀರು ಪಾಲಾದರು

|

ಮಂಗಳೂರು, ಜನವರಿ 01: 2019ರ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆ ವಿಷಾದದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹುಟ್ಟು ಹಬ್ಬದ ಸಂಭ್ರಮ ಆಚರಿಸುತ್ತಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲದ ಘಟನೆ ನಡೆದಿದೆ.

ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಈ ಘಟನೆ ನಡೆದಿದ್ದು, ಬರ್ತ್ ಡೇ ಪಾರ್ಟಿ ಮಾಡಲೆಂದು ನದಿ ಕಿನಾರೆಗೆ ತೆರಳಿದ ಮೂರು ಜನ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಉಪ್ಪಿನಂಗಡಿ ಸಮೀಪದ ನಿವಾಸಿಗಳಾದ ಮಹಮ್ಮದ್ ಸುಹೈಲ್, ಸಹೀರ್, ಮತ್ತು ಫಿರ್ಝಾನ್ ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ.

ತುಳುಭಾಷೆ, ಸಂಸ್ಕೃತಿಯ ಸಂಶೋಧಕ ಪ್ರೊ.ಪೀಟರ್ ಜೆ ಕ್ಲಾಸ್ ಇನ್ನಿಲ್ಲ

ಮೃತ ವಿದ್ಯಾರ್ಥಿಗಳಲ್ಲಿ ಸುಹೈಲ್ ಎಂಬಾತನ ಹುಟ್ಟು ಹಬ್ಬವಾಗಿದ್ದು, ಇದನ್ನು ಆಚರಿಸುವ ಸಲುವಾಗಿ ಉಪ್ಪಿನಂಗಡಿಯ ನೇತ್ರಾವತಿ ನದಿ ಕಿನಾರೆಗೆ ವಿದ್ಯಾರ್ಥಿಗಳು ನಿನ್ನೆ ಸಂಜೆ ತೆರಳಿದ್ದರು. ಈ ಸಂದರ್ಭದಲ್ಲಿ ನದಿಗೆ ಇಳಿದ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ ಎಂದು ಹೇಳಲಾಗಿದೆ.

ದಂಪತಿಗೆ ದುಃಸ್ವಪ್ನವಾದ ಹೊಸ ವರ್ಷಾಚರಣೆ! ಪತಿ ಎದುರಲ್ಲೇ ಪತ್ನಿ ಮೇಲೆ ದೌರ್ಜನ್ಯ!

ಇಂದು ಮಂಗಳವಾರ ಮುಂಜಾನೆ ಮೂವರ ಮೃತದೇಹ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ. ಪೋಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದು, ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Three students were drowned in the Nethravathi river and died. This incident took place at Uppinangady in Puttur taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X