ಉಲ್ಲಾಳದಲ್ಲಿ ಬಸ್ ಅಪಘಾತ, ತಪ್ಪಿದ ಭಾರೀ ಅನಾಹುತ

ಮಂಗಳೂರು, ಜುಲೈ 22 : ಆ್ಯಕ್ಸಿಲ್ ತುಂಡಾಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಮನೆಯ ಕಾಪೌಂಡ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.

ಬುಧವಾರ ಬೆಳಗ್ಗೆ ಕುಂಪಲದ ಚಿತ್ರಾಂಜಲಿನಗರ ಸಮೀಪದ ವಿಜಯನಗರ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಪಘಾತಕ್ಕೀಡಾದ 44 ನಂಬರ್‌ನ ಗಣೇಶ ಬಸ್ ಮಂಗಳೂರಿನಿಂದ ಬಗಂಬಿಲ ಕಡೆಗೆ ತೆರಳುತ್ತಿತ್ತು. [ಬಸ್ ಟಿಕೆಟ್ ನಲ್ಲಿಯೇ ಪ್ರೇಮ ಪತ್ರ ಬರೆದ ಕಂಡಕ್ಟರ್!]

Ullal

ವಿಜಯನಗರ ಪ್ರದೇಶದಲ್ಲಿ ಬಸ್ಸಿನ ಆ್ಯಕ್ಸಿಲ್ ತುಂಡಾಗಿದ್ದು, ಅದು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಎತ್ತರದ ಪ್ರದೇಶವಾದ್ದರಿಂದ ಹಿಮ್ಮುಖವಾಗಿ ಚಲಿಸಿದ ಬಸ್ ರಸ್ತೆ ಪಕ್ಕದಲ್ಲಿದ್ದ ನಾರಾಯಣ ಎಂಬವರ ಮನೆ ಕಾಪೌಂಡಿಗೆ ಡಿಕ್ಕಿ ಹೊಡೆದಿದೆ. [ಮಂಗಳೂರು-ಮುಂಬೈ ಐರಾವತ ಬಸ್ ಸೇವೆ ಸ್ಥಗಿತ]

mangaluru

ಬೆಳಗಿನ ಸಮಯವಾಗಿದ್ದರಿಂದಾಗಿ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದರು. ಆದರೆ, ಮೂವರು ಮಹಿಳೆಯರು ಮಾತ್ರ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಬಸ್ ಅಪಘಾತವಾದ ಪ್ರದೇಶದಲ್ಲಿ ಸೇತುವೆ ಇತ್ತು, ಮತ್ತೊಂದು ಕಡೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇತ್ತು.

bus

ಆದರೆ, ಬಸ್ ಕಾಪೌಂಡಿಗೆ ಗುದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಈ ಪ್ರದೇಶದಲ್ಲಿ ನಡೆದ ಮೂರನೇ ಅಪಘಾತವಿದಾಗಿದೆ. ಇದೇ ಜಾಗದಲ್ಲಿ ಹಿಂದೆ ಲಾರಿ, ಬಸ್ ಅಪಘಾತವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+