ಎತ್ತಿನಹೊಳೆ ಯೋಜನೆ ನಿಲ್ಲಿಸಿ, ನೇತ್ರಾವತಿ ಉಳಿಸಿ

ಮಂಗಳೂರು, ಅಕ್ಟೋಬರ್ 16 : 'ನಮಗೂ ಕುಡಿಯಲು ನೀರು ಬೇಕು', 'ಎತ್ತಿನಹೊಳೆ ನಿಲ್ಲಿಸಿ ನೇತ್ರಾವತಿ ಉಳಿಸಿ', 'ಸಚಿವರೇ ಜಿಲ್ಲೆಯ ಮೌನದ ಗುಣ ಎತ್ತಿನಹೊಳೆ ವಿಚಾರದಲ್ಲಿ ಬೇಡ' ಮುಂತಾದ ಘೋಷಣೆಗಳು ಗುರುವಾರ ಮಂಗಳೂರಿನಲ್ಲಿ ಕೇಳಿಬಂದವು. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು.

ಎತ್ತಿನಹೊಳೆ ಯೋಜನೆಯ ಅನುಷ್ಠಾನ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪಂಪ್‌ವೆಲ್‌ ವೃತ್ತದ ಬಳಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. [ಎತ್ತಿನಹೊಳೆ ಯೋಜನೆ ವಿರೋಧಿಸಿ ಬೃಹತ್ ಪಾದಯಾತ್ರೆ]

ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಉಳಿಸಲು ಹೋರಾಟ ಮುಂದುವರೆಸುತ್ತೇವೆ ಎಂದು ವಿವಿಧ ಸಂಘಟನೆಗಳ ಮುಖಂಡರು ಘೋಷಿಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಎತ್ತಿನಹೊಳೆ ವಿಚಾರದಲ್ಲಿ ಮೌನ ಮುರಿದು ಜನರೊಂದಿಗೆ ಸೇರಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]

ಈ ರಸ್ತೆ ತಡೆ ಚಳುವಳಿಗೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ, ಪುತ್ತೂರಿನ ಜನಸಾಮಾನ್ಯರ ಹಿತರಕ್ಷಣಾ ವೇದಿಕೆ, ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕ, ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರು ಘಟಕ, ಬಂಟರ ಯಾನೆ ನಾಡವರ ಮಾತ್ರ ಸಂಘದ ಯುವ ಘಟಕ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ನೀಡಿದ್ದವು. ಪ್ರತಿಭಟನೆಯ ಚಿತ್ರಗಳನ್ನು ನೋಡಿ...

ದಕ್ಷಿಣ ಕನ್ನಡದಲ್ಲಿ ತೀವ್ರಗೊಳ್ಳುತ್ತಿದೆ ಪ್ರತಿಭಟನೆ

ದಕ್ಷಿಣ ಕನ್ನಡದಲ್ಲಿ ತೀವ್ರಗೊಳ್ಳುತ್ತಿದೆ ಪ್ರತಿಭಟನೆ

ಎತ್ತಿನಹೊಳೆ ಯೋಜನೆಯ ಅನುಷ್ಠಾನ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪಂಪ್‌ವೆಲ್‌ ವೃತ್ತದ ಬಳಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ಸಂಘಟನೆಗಳು

ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ಸಂಘಟನೆಗಳು

ಪಂಪ್ ವೆಲ್‍ ವೃತ್ತದಲ್ಲಿ 4 ರಸ್ತೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಎತ್ತಿನಹೊಳೆ ಯೋಜನೆಯ ಅನುಷ್ಠಾನ ವಿರೋಧಿಸುವ ಈ ಹೋರಾಟದಲ್ಲಿ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

ಯೋಜನೆಯನ್ನು ಕೈ ಬಿಡಿ

ಯೋಜನೆಯನ್ನು ಕೈ ಬಿಡಿ

ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ಮುಖಂಡ ದಿನೇಶ್ ಹೊಳ್ಳ ಅವರು ಮಾತನಾಡಿ, 'ಎತ್ತಿನಹೊಳೆ ಯೋಜನೆ ವಿರೋಧಿಸುವ ವಿವಿಧ ಸಂಘಟನೆಗಳು ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ಮೂಲಕ ಒಂದಾಗಿ ಹೋರಾಟ ಆರಂಭಿಸಿವೆ.ಈ ಯೋಜನೆಯನ್ನು ಕೈಬಿಡಿ' ಎಂದು ಸರ್ಕಾರವನ್ನು ಒತ್ತಾಯಿಸಿದರು.

'ಎಚ್ಚರಿಸುವ ಪ್ರಯತ್ನವಿದು'

'ಎಚ್ಚರಿಸುವ ಪ್ರಯತ್ನವಿದು'

'ಈ ಪ್ರತಿಭಟನೆ ಸರ್ಕಾರವನ್ನು ಮತ್ತೊಮ್ಮೆ ಎಚ್ಚರಿಸುವ ಪ್ರಯತ್ನ ಮಾತ್ರ. ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ರೀತಿಯ ಹೋರಾಟಗಳನ್ನು ನಡೆಸಲಾಗುವುದು' ಎಂದು ದಿನೇಶ್ ಹೊಳ್ಳ ಅವರು ಎಚ್ಚರಿಕೆ ನೀಡಿದರು.

'ಎತ್ತಿನಹೊಳೆ ನಿಲ್ಲಿಸಿ ನೇತ್ರಾವತಿ ಉಳಿಸಿ'

'ಎತ್ತಿನಹೊಳೆ ನಿಲ್ಲಿಸಿ ನೇತ್ರಾವತಿ ಉಳಿಸಿ'

'ನಮಗೂ ಕುಡಿಯಲು ನೀರು ಬೇಕು', 'ಎತ್ತಿನಹೊಳೆ ನಿಲ್ಲಿಸಿ ನೇತ್ರಾವತಿ ಉಳಿಸಿ', 'ಸಚಿವರೇ ಜಿಲ್ಲೆಯ ಮೌನದ ಗುಣ ಎತ್ತಿನಹೊಳೆ ವಿಚಾರದಲ್ಲಿ ಬೇಡ' ಮುಂತಾದ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.

'ಅವೈಜ್ಞಾನಿಕ ಯೋಜನೆ ಕೈ ಬಿಡಿ'

'ಅವೈಜ್ಞಾನಿಕ ಯೋಜನೆ ಕೈ ಬಿಡಿ'

ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ಸಂಚಾಲಕ ಡಾ. ನಿರಂಜನ್ ರೈ ಮಾತನಾಡಿ, 'ಯೋಜನೆ ವಿರೋಧಿಸಿ ಹಲವು ಹೋರಾಟಗಳು ನಡೆದಿವೆ. ಇದು ಸರ್ಕಾರದ ಮೇಲೆ ಪ್ರಭಾವವನ್ನೂ ಬೀರಿವೆ. ಅವೈಜ್ಞಾನಿಕವಾದ ಈ ಯೋಜನೆಯನ್ನು ಕೈ ಬಿಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ' ಎಂದು ಘೋಷಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+