ಆಳ್ವಾಸ್ ನಲ್ಲಿ ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರ ಆರಂಭ

ಮಂಗಳೂರು, ಅಕ್ಟೋಬರ್ 06 : ಇಲ್ಲಿನ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ಈ ಪರೀಕ್ಷಾ ಕೇಂದ್ರವನ್ನು ಯುಕೆಯ ಕೇಂಬ್ರಿಡ್ಜ್ ಇಂಗ್ಲೀಷ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾದ ಸ್ಥಳೀಯ ನಿರ್ದೇಶಕ ಟಿ.ಕೆ. ಅರುಣಾಚಲಂ ಇಂದು (ಶುಕ್ರವಾರ) ಉದ್ಘಾಟಿಸಿದರು.

The Cambridge English exam Center begun in Alvas Education Foundation Moodbidri

ಆಳ್ವಾಸ್ ಶಿಕ್ಷಣ ಸಂಸ್ಥೆಯು ಯುಕೆಯ ಕೇಂಬ್ರಿಡ್ಜ್ ಇಂಗ್ಲೀಷ್ ಅಸೆಸ್ ಮೆಂಟ್ ಸಂಸ್ಥೆಯ ಅತ್ಯುತ್ತಮ 50 ತರಬೇತಿ ಕೇಂದ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಆಳ್ವಾಸ್ ನ 162 ವಿದ್ಯಾರ್ಥಿಗಳು ಕೇಂಬ್ರಿಡ್ಜ್ ಇಂಗ್ಲೀಷ್ ತರಬೇತಿಯ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಇಂಜಿನಿರಿಂಗ್, ಪದವಿ ಹಾಗೂ ಎಂ.ಬಿ.ಎ ವಿದ್ಯಾರ್ಥಿಗಳಿಗಾಗಿ ಬ್ಯುಸಿನೆಸ್ ಇಂಗ್ಲಿಷ್ ಸರ್ಟಿಫಿಕೇಟ್ ಕೋರ್ಸ್ ಗಳ ಮೂಲಕ ಉತ್ತಮ ತರಬೇತಿ ನೀಡುತ್ತಿದೆ.

ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಕೇಂಬ್ರಿಡ್ಜ್ ಇಂಗ್ಲೀಷ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾದ ಸ್ಥಳೀಯ ನಿರ್ದೇಶಕ ಟಿ.ಕೆ. ಅರುಣಾಚಲಂ, "ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರ ಹೊಂದಿರುವ ಕರಾವಳಿ ಭಾಗದ ಪ್ರಥಮ ಸಂಸ್ಥೆಯಾಗಿದೆ.

ಇದರಿಂದ ಈ ಭಾಗದ ವಿದ್ಯಾರ್ಥಿಗಳ ಇಂಗ್ಲೀಷ್ ಕೌಶಲ ವೃದ್ಧಿಸುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಮಾಣ ಪತ್ರ ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.

ಇಂಗ್ಲೀಷ್ ಭಾಷೆ ಕಲಿತಂತೆ ಪಾಶ್ಚತ್ಯ ಸಂಸ್ಕೃತಿ ಅನುಸರಿಸಬೇಕೆಂದೇನಿಲ್ಲ. ಬದಲಾಗಿ ಆಂಗ್ಲ ಭಾಷೆಯ ಪ್ರವೃತ್ತಿ ಬೆಳೆದಂತೆ, ಅದು ನಿರಂತರ ಕೌಶಲ್ಯವಾಗಿ ಮಾರ್ಪಾಡಾಗುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+