ಮಂಗಳೂರಿನಲ್ಲಿ ಶೈಕ್ಷಣಿಕ ಒತ್ತಡಕ್ಕೆ ಬೇಸತ್ತು ಬಾಲಕ ಆತ್ಮಹತ್ಯೆ ಯತ್ನ

ಮಂಗಳೂರು, ಅಕ್ಟೋಬರ್ 8: ಶೈಕ್ಷಣಿಕ ಒತ್ತಡಗಳಿಂದ ಬೇಸತ್ತು ಶಾಲಾ ಬಾಲಕನೋರ್ವ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಹೊರವಲಯದ ಆಡುಮರೋಳಿ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ನಾಲ್ಕು ಅಂತಸ್ತಿನ ಕಟ್ಟಡದಿಂದ ಬಾಲಕ ಕೆಳಗೆ ಜಿಗಿದಿದ್ದಾನೆ .

ಆತ್ಮಹತ್ಯೆ ಗೆ ಯತ್ನಿಸಿದ ಬಾಲಕ ನಗರದ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿಯಾಗಿದ್ದು, 10ನೇ ತರಗತಿಯಲ್ಲಿ ಕಲಿಯುತ್ತಿದ್ದ . ಆತ್ಮಹತ್ಯೆಗೆ ಮೊದಲು ಸೂಸೈಡ್ ನೋಟ್ ಬರೆದಿರುವ ಬಾಲಕ ಶಿಕ್ಷಣದ ಒತ್ತಡಗಳಿಂದ ಬೇಸತ್ತಿರುವುದು ಸ್ಪಷ್ಟವಾಗಿದೆ. ಸೂಸೈಡ್ ನೋಟ್ ನಲ್ಲಿ "ನೋ ಮೋರ್ ಸ್ಟಡಿ " ಎಂದು ಬರೆದಿರುವುದಾಗಿ ತಿಳಿದು ಬಂದಿದೆ .

Teenager attempt to suicide due to educational stress in Mangaluru

ಘಟನೆಯಲ್ಲಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಘಟನೆ ಕುರಿತು ಕಂಕನಾಡಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+