Mangaluru Airport: ರನ್‌ವೇನಲ್ಲಿ ಇದ್ದಕ್ಕಿಂದ ಆಫ್ ಆದ ಲೈಟ್: ವಿಮಾನ ಸಂಚಾರದಲ್ಲಿ ವ್ಯತ್ಯಯ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಸಂಜೆ ಇದ್ದಕ್ಕಿದ್ದಂತೆ ರನ್‌ವೇ ನಲ್ಲಿ ಇರುವ ಲೈಟ್‌ಗಳು ಆಫ್ ಆದ ಕಾರಣ ಲ್ಯಾಂಡಿಂಗ್ ಆಗಬೇಕಿದ್ದ ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಯಿತು.
ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್ ಕಡಿತಗೊಂಡ ಕಾರಣ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ರನ್‌ವೇನಲ್ಲಿ ದೀಪಗಳು ಆರಿದ ಕಾರಣ ಮುಂಬೈನಿಂದ ಆಗಮಿಸಿದ್ದ ಇಂಡಿಗೋ ವಿಮಾನ ಲ್ಯಾಂಡ್ ಆಗದೆ ವಾಪಸ್ ಆಗಿದೆ. ಎಟಿಸಿ ಸೂಚನೆಯ ಪ್ರಕಾರ ಕೇರಳದ ಕಣ್ಣೂರಿನಲ್ಲಿ ಲ್ಯಾಂಡ್ ಆಗಿದೆ.

ತಾಂತ್ರಿಕ ಸಮಸ್ಯೆ ಸರಿ ಹೋಗುವವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಒಳ ಬರುವಿಕೆ ಮತ್ತು ಹೊರ ಹೋಗುವಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಸಮಸ್ಯೆಯನ್ನು ಸರಿಪಡಿಸಲು ಸಿಬ್ಬಂದಿ ಶ್ರಮಿಸಿದರು. ಚೆನ್ನೈ ಮತ್ತು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳು ತಡವಾಗಲಿವೆ. ಮಂಗಳೂರಿನಿಂದ ಬಹ್ರೈನ್‌ಗೆ ಹೋಗಬೇಕಿದ್ದ ಏರ್ ಇಂಡಿಯಾ ವಿಮಾನ ಕೂಡ ತಡವಾಗಿ ಹೊರಡಲಿವೆ.
ಸಂಜೆ 7.30 ರಿಂದ ರಾತ್ರಿ 9.30ರ ವರೆಗೆ ರನ್ ವೇನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಎರಡು ಗಂಟೆಗಳ ಕಾರ್ಯಾಚರಣೆ ಮಾಡಿದ ನಂತರ ಎಂಜಿನಿಯರ್ ಗಳ ತಂಡ ರನ್ ವೇ ಲೈಟಿಂಗ್ ಅನ್ನು ಸರಿಪಡಿಸಿದ್ದಾರೆ. ಸದ್ಯ ವಿಮಾನ ನಿಲ್ದಾಣದಲ್ಲಿ ಮತ್ತೆ ಕಾರ್ಯಾಚರಣೆ ಶುರುವಾಗಿದ್ದು. ವಿಮಾನಗಳ ಹಾರಾಟ ಶುರು ಮಾಡಿವೆ. ಚೆನ್ನೈ ಮತ್ತು ಬೆಂಗಳೂರಿನಿಂದ ಬರುವ ವಿಮಾನಗಳು ತಡವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿವೆ.











Click it and Unblock the Notifications