ಸಿದ್ಧಾರ್ಥ್ ಮೃತದೇಹದ ಕುರಿತು ವ್ಯಕ್ತವಾಗಿದೆ ಹಲವು ಅನುಮಾನ

ಮಂಗಳೂರು, ಜುಲೈ 31: ಮಂಗಳೂರಿನ ನೇತ್ರಾವತಿ ನದಿ ಸೇತುವೆ ಮೇಲಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಮೃತದೇಹ ಮಂಗಳೂರು ಹೊರವಲಯದ ಹೊಯಿಗೆ ಬಜಾರ್ ಎಂಬಲ್ಲಿ ಇಂದು ಮುಂಜಾನೆ ಪತ್ತೆ ಆಗಿದೆ. ಇದೀಗ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡರೆ? ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಲಾಗುತ್ತಿದೆ.

ಈ ನಡುವೆ ಸಿದ್ಧಾರ್ಥ್ ಅವರ ಮೃತ ದೇಹದ ಬಗ್ಗೆಯೂ ಅನುಮಾನ ಮೂಡಲಾರಂಭಿಸಿದೆ. ಸಿದ್ಧಾರ್ಥ್ ಅವರ ದುರಂತ ಅಂತ್ಯ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಸಿದ್ದಾರ್ಥ್ ಅವರ ಮೃತದೇಹ ದೊರೆತ ಸಂದರ್ಭದಲ್ಲಿ ಪ್ಯಾಂಟ್ ಮಾತ್ರ ಇದೆ. ಸಿದ್ಧಾರ್ಥ್ ಧರಿಸಿದ್ದ ಟೀ ಶರ್ಟ್ ನಾಪತ್ತೆಯಾಗಿದೆ. ನದಿಗೆ ಹಾರಿದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಅದು ಜಾರಿ ಹೋಗಿರಬಹುದೇ? ಆದರೆ ಸಾಧ್ಯತೆ ಕಡಿಮೆ ಎನ್ನುತ್ತಿವೆ ಮೂಲಗಳು. ಪ್ಯಾಂಟಿನ ಕಿಸೆಯಲ್ಲಿ ಮೊಬೈಲ್ ಸಿಕ್ಕಿದೆ. ಅವರ ಪ್ಯಾಂಟ್, ಶೂಗಳು ಮಾತ್ರ ಹಾಗೇ ಇವೆ. ಇದು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿವೆ.

Suspects About Siddhartha Dead Body

ಸಿದ್ಧಾರ್ಥ್ ನದಿಗೆ ಹಾರುವ ಮೊದಲು ಅಂಗಿ ಕಳಚಿ ನದಿಗೆ ಹಾರಿದ್ದರಾ? ಸಾಧ್ಯತೆಗಳು ಇಲ್ಲ. ಒಂದು ವೇಳೆ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದೇ ಆದರೆ, ಅಷ್ಟು ಸಿದ್ಧತೆ ಮಾಡಿಕೊಂಡಿದ್ದರಾ? ಹೀಗೆ ಹಲವು ಅನುಮಾನಗಳು ಮೂಡಲಾರಂಭಿಸಿವೆ.

ಸದ್ಯ ಮೃತದೇಹದಲ್ಲಿನ ಗಾಯಗಳ ಬಗ್ಗೆ ಪೊಲೀಸರು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು 36 ಗಂಟೆಗಳು ಕಳೆದರೂ ಮುಖದಲ್ಲಿ ರಕ್ತ ಸೋರಿಕೆ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಮಧ್ಯೆ ಸಿದ್ಧಾರ್ಥ್ ಅವರು ಧರಿಸಿದ್ದ ಕಪ್ಪು ಬಣ್ಣದ ಟೀ ಶರ್ಟ್ ಇನ್ನೂ ಪತ್ತೆಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+