• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಧ್ಯಾಪಕರಿಲ್ಲದ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳೇ ಟೀಚರ್ಸ್

By ಐಸಾಕ್ ರಿಚರ್ಡ್, ಮಂಗಳೂರು
|

ಮಂಜೇಶ್ವರ, ಡಿ.15:ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಆಶ್ರಯದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳು ಅಧ್ಯಾಪಕರ ಕೊರತೆಯಿಂದ ಬಳಲುವಂತಾಗಿದೆ. ಸ್ವತಃ ವಿದ್ಯಾರ್ಥಿಗಳೇ ಅಧ್ಯಾಪಕರ ಪಾತ್ರ ನಿರ್ವಹಿಸುತ್ತಿರುವುದು ಕಡಂಬಾರ್ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಆರು ತಿಂಗಳಿನಿಂದ ನಡೆಯುತ್ತಾ ಇರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಶಾಲೆಯಲ್ಲಿ ಎಂಟರಿಂದ ಹತ್ತನೇ ತರಗತಿ ತನಕ ಕೇಂದ್ರ ಸರಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಪದ್ದತಿಯಂತೆ ವಿದ್ಯಾಭ್ಯಾಸವನ್ನು ನೀಡಲಾಗುತ್ತದೆ. ಆದರೆ ಈ ತರಗತಿಗಳಿಗೆ ಬೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವ ಶಾಸ್ತ್ರ ಹಾಗೂ ಗಣಿತ ವಿಷಯಗಳಿಗೆ ಅಧ್ಯಾಪಕರ ಕೊರತೆ ಇರುವುದರಿಂದ ಈ ತರಗತಿಯ ವಿದ್ಯಾರ್ಥಿಗಳಿಗೆ ಸಹಪಾಠಿಗಳೇ ಅಧ್ಯಾಪಕರಾಗಿ ಕಲಿಸುವ ದೃಶ್ಯ ಕಂಡು ಬಂದಿದೆ.

ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ: ಕಳೆದ ಆರು ತಿಂಗಳಿನಿಂದ ಇಲ್ಲಿ ವಿದ್ಯಾರ್ಥಿಗಳೇ ಅಧ್ಯಾಪಕರಾಗಿದ್ದಾರೆ. 2011 ರಲ್ಲಿ ಇಲ್ಲಿ ಪ್ರೌಢ ಶಾಲೆಯನ್ನು ಅರಂಭಿಸಲಾಗಿದೆ. ಇಲ್ಲಿ 243 ವಿದ್ಯಾರ್ಥಿಗಳಿದ್ದು, ಅದರಲ್ಲಿ ಮಲಯಾಳ ಮಾಧ್ಯಮದಲ್ಲಿ 62 ಹಾಗೂ ಕನ್ನಡ ಮಾದ್ಯಮದಲ್ಲಿ 181 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದಾರೆ. ಕೇಂದ್ರ ಸರಕಾರದ ಆರ್ ಎಂ ಎಸ್ ಎ ಪದ್ದತಿಯಲ್ಲಿ ಒಂದೇ ಮಾಧ್ಯಮದ ವಿದ್ಯಾರ್ಥಿಗಳನ್ನು ಮಾತ್ರ ಕಲಿಸ ಬಹುದಾಗಿದೆ.

ಅದರೆ ವರ್ಕಾಡಿ ಹಾಗೂ ಮೀಂಜ ಗ್ರಾ. ಪಂ. ನ ವ್ಯಾಪ್ತಿಯಲ್ಲಿರುವ ಕಡಂಬಾರು ಶಾಲೆಯಲ್ಲಿ ಕನ್ನಡ ಹಾಗೂ ಮಲಯಾಳಂ ವಿದ್ಯಾರ್ಥಿಗಳಿರುವ ಕಾರಣ ಕಿರಿಯ ಪ್ರಾಥಮಿಕ ಶಾಲೆಯಿಂದ ಕಲಿತ ವಿದ್ಯಾರ್ಥಿಗಳು ಮುಂದಿನ ವಿದ್ಯಾಬ್ಯಾಸಕ್ಕಾಗಿ ಇದೇ ಶಾಲೆಯನ್ನೇ ಅವಲಂಭಿಸಬೇಕಾಗಿದೆ. ಈ ಶಾಲೆಯಲ್ಲಿ ಅಧ್ಯಾಪಕರ ಕೊರತೆಯಿಂದಾಗಿ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ.

ಪ್ರತಿಭಟನೆಗೆ ಬೆಲೆಯಿಲ್ಲ: ಈ ಬಗ್ಗೆ ಮಕ್ಕಳ ರಕ್ಷಕರು ಹಾಗೂ ಅಧ್ಯಾಪಕರು ಸೇರಿ ಹಲವು ಸಲ ಪ್ರತಿಭಟನೆಗಳನ್ನು ನಡೆಸಿ ಅಧಿಕೃತರ ಗಮನಕ್ಕೆ ತಂದಿದ್ದರೂ ಯಾವುದೇ ಫಲ ಕಾಣಲಿಲ್ಲ. ಕಳೆದ ಎರಡು ವರ್ಷಗಳಿಂದ ಈ ಶಾಲೆಯಲ್ಲಿ ಅಧ್ಯಾಪಕರ ಕೊರತೆ ಇದೆ.

ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷಾ ಅಧ್ಯಾಪಕರುಗಳಾಗಿ ಕೇವಲ ಮೂರು ಅಧ್ಯಾಪಕರುಗಳು ಮಾತ್ರ ಇದ್ದಾರೆ. ಆದೇ ರೀತಿ ಸಮಾಜ ವಿಜ್ಞಾನ,ಗಣಿತ, ಬೌತ ಶಾಸ್ತ್ರ, ಜೀವ ಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಭಾಗಕ್ಕೂ ಮೂರೇ ಅಧ್ಯಾಪಕರುಗಳಿದ್ದಾರೆ. ಇಲ್ಲಿ ಇನ್ನು ನಾಲ್ಕು ಅಧ್ಯಾಪಕರುಗಳು ಬಂದರೆ ವಿದ್ಯಾಬ್ಯಾಸಕ್ಕೆ ಮಕ್ಕಳಿಗೆ ಸಮಸ್ಯೆ ಇರಲಿಕ್ಕಿಲ್ಲವೆಂಬುದು ಇಲ್ಲಿಯ ಮುಖ್ಯೋಪಧ್ಯಾಯರ ಹೇಳಿಕೆ.

ಹತ್ತನೇ ತರಗತಿಯಲ್ಲಿರುವ ಮಕ್ಕಳು ಅದ್ಯಾಪಕರ ಕೊರತೆಯಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಶಾಲೆಯ ಮಕ್ಕಳು ಈ ಸಲದ ಉಪ ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲೂ ಚಾಂಪಿಯನ್ ಗಳಾಗಿದ್ದಾರೆ. ಕಲಿಕೆ ಸಹಿತ ಎಲ್ಲಾ ಚಟುವಟಿಕೆಗಳಲ್ಲೂ ಉತ್ತಮ ಆಸಕ್ತಿ ಇರುವ ಈ ಶಾಲೆಯ ವಿದ್ಯಾರ್ಥಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಂಬಂಧಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸಲು ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Students suffer as Government High School lacks teaching staff Kadambar, Majeshwar, Kasaragod. Senior students themselves taken up the challenge and teaching other pupils. School has 181 students in Kannada medium and 62 in Malayalam medium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more