• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು : ಅತ್ತಾವರದಲ್ಲಿ ಕಾಲೇಜು ವಿದ್ಯಾರ್ಥಿನಿ ಹತ್ಯೆ

|

ಮಂಗಳೂರು, ಜೂನ್ 07 : ಬಾಡಿಗೆ ಮನೆಯೊಂದರಲ್ಲಿ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ಇದ್ದು, ಜೊತೆಗೆ ಮನೆಗೆ ಬಂದಿದ್ದ ಪ್ರಿಯಕರ ನಾಪತ್ತೆಯಾಗಿದ್ದಾನೆ.

ಶುಕ್ರವಾರ ರಾತ್ರಿ ಮಂಗಳೂರಿನ ಅತ್ತಾವರದ ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿನಿ ಅಂಜನಾ ವಸಿಷ್ಠ (22) ಮೃತದೇಹ ಪತ್ತೆಯಾಗಿದೆ. ಮಂಚದ ಸರಳುಗಳ ನಡುವೆ ಕುತ್ತಿಗೆ ಸಿಕ್ಕಿಹಾಕಿಕೊಂಡಿದ್ದು, ಕೊಲೆ ಎಂದು ಶಂಕಿಸಲಾಗಿದೆ.

ಬೆಂಗಳೂರಿನ 'ಚಿಂದಿ' ಪ್ರೇಮ ಕೊಲೆಯಲ್ಲಿ ಅಂತ್ಯ, ಆಕೆಗ್ಯಾರು ದಿಕ್ಕು?

ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಅಂಜನಾ ವಸಿಷ್ಠ ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ಮೂಲದವರು. 5 ದಿನಗಳ ಹಿಂದೆ ಪ್ರಿಯಕರ ಜೊತೆ ಬಂದು ಮನೆಯನ್ನು ಬಾಡಿಗೆ ಪಡೆದಿದ್ದರು. ಇಂದು ಮೃತದೇಹ ಪತ್ತೆಯಾಗಿದೆ.

ಮೈಸೂರು; ಪ್ರಿಯಕರನ ಜೊತೆ ಸೇರಿ ಗಂಡನ ಕೊಂದ ಹೆಂಡತಿ

ಪ್ರಿಯಕರ ಜೊತೆ ಬಂದಿದ್ದ ವಿದ್ಯಾರ್ಥಿನಿ ನಾವು ದಂಪತಿಗಳು ಎಂದು ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಪ್ರಿಯಕರ ಈಗ ಪರಾರಿಯಾಗಿದ್ದಾನೆ. ಆಧಾರ್ ಕಾರ್ಡ್ ಸಹಾಯದಿಂದ ವಿದ್ಯಾರ್ಥಿನಿ ಗುರುತು ಪತ್ತೆ ಮಾಡಲಾಗಿದೆ.

ವಿಜಯಪುರ ಕಾಂಗ್ರೆಸ್ ನಾಯಕಿ ಕೊಲೆ: ಕೊನೆಗೂ ಆರೋಪಿ ಬಂಧನ

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಪ್ರಿಯಕರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ವಿದ್ಯಾರ್ಥಿನಿ ಕುಟುಂಬದವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

English summary
Ujire college student found murdered in Attavar, Mangaluru. Student identified as Anjana Vasista (22) from Tarikere Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X