ಮಂಗಳೂರು: ವಿದ್ಯಾರ್ಥಿಗಳ ಸ್ವಚ್ಛ ಭಾರತ ನಿರ್ಮಾಣ ಸಂಕಲ್ಪ
ಮಂಗಳೂರು, ಮಾ. 4: ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯುತ್ತ) ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮಂಗಳವಾರ ಸಮುದ್ರ ಕಿನಾರೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
Leaving a Positive Foot Print" ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳು ಪಣಂಬೂರು ಕಡಲ ತಟದಲ್ಲಿ ಶ್ರಮದಾನ ನಡೆಸಿದರು. ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಸಾರ್ವಜನಿಕರಲ್ಲಿ ಸ್ವಚ್ಛತೆ ಅರವು ಮೂಡಲಿಸಲಿದೆ ಎಂದು ವಿದ್ಯಾರ್ಥಿಗಳು ವಿಶ್ವಾಸ ವ್ಯಕ್ತಪಡಿಸಿದರು.[1 ರೂ. ಚೆಕ್ ಕಳುಹಿಸಿದ ಐಐಎಸ್ಸಿ ವಿದ್ಯಾರ್ಥಿಗಳು]
ವಿದ್ಯಾರ್ಥಿಗಳು ಭಿತ್ತಿ ಚಿತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಜಯಲಕ್ಷ್ಮಿ ಆಳ್ವ ಮತ್ತು ಭವ್ಯಾ ಶೆಟ್ಟಿ ಉಪಸ್ಥಿತರಿದ್ದರು. ಸ್ವಚ್ಛತಾ ಆಂದೋಲನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.

ನಾವೆಲ್ಲ ಒಂದು
Leaving a Positive Foot Print" ಎಂಬ ಹೆಸರಿನಲ್ಲಿ ಪಣಂಬೂರು ಕಡಲ ತಟದಲ್ಲಿ ಶ್ರಮದಾನ ನಡೆಸಿದ ವಿದ್ಯಾರ್ಥಿಗಳು.

ಸುಂದರ ಸಮುದ್ರ
ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿದರು.

ಪ್ಲಾಸ್ಟಿಕ್ ಮುಕ್ತ ಪರಿಸರ
ಪರಿಸರ ಮಾಲಿನ್ಯಕ್ಕೆ ಬಹುಮುಖ್ಯ ಕಾರಣವಾಗಿರುವ ಪ್ಲಾಸ್ಟಿಕ್ ಮತ್ತಿತರ ಅನುಪಯೋಗಿ ಕಸ ಸಂಗ್ರಹಿಸಿದ ವಿದ್ಯಾರ್ಥಿಗಳು.

ನಾಘರಿಕರ ಪಾಲ್ಗೊಳ್ಳುವಿಕೆ
ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೇ ಸ್ವಚ್ಛ ಭಾರತ ಅಭಿಯಾನದಲ್ಲಿ ನಾಗರಿಕರು ಸಹ ಭಾಗವಹಿಸಿದ್ದರು.












Click it and Unblock the Notifications