ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಿಂದ 3 ಹೊಸ ರೈಲು; ಶೀಘ್ರದಲ್ಲೇ ಘೋಷಣೆ?

|
Google Oneindia Kannada News

ಮಂಗಳೂರು, ಜನವರಿ 24; ದಕ್ಷಿಣ ರೈಲ್ವೆ ಮೂರು ಹೊಸ ರೈಲುಗಳ ಸಂಚಾರ ಆರಂಭಿಸಲಿದೆ. 2022ರ ಐಆರ್‌ಟಿಟಿಸಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆ ಮಾಡಲಾಗುತ್ತಿದೆ. ಶೀಘ್ರವೇ ಈ ಕುರಿತು ಘೋಷಣೆಯಾಗಲಿದೆ.

ಮಂಗಳೂರು ಸೆಂಟ್ರಲ್‌ನಿಂದ ಈ ರೈಲುಗಳು ಸಂಚಾರ ನಡೆಸಲಿವೆ. ಇವುಗಳಲ್ಲಿ ಮಂಗಳೂರು ಮತ್ತು ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿಯ ರೈಲು ಸಹ ಸೇರಿದೆ. ಪಾಲಕ್ಕಾಡ್ ರೈಲು ವಿಭಾಗದ ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೊಸ ರೈಲುಗಳ ಬೇಡಿಕೆ ಇಟ್ಟಿದ್ದಾರೆ.

ಮಂಗಳೂರು ರೈಲಿನಲ್ಲಿ ಅನುಮಾನಸ್ಪದ ವ್ಯಕ್ತಿ ಬ್ಯಾಗ್‌ನಲ್ಲಿ 1.88 ಕೋಟಿ ಹಣ ಪತ್ತೆ ಮಂಗಳೂರು ರೈಲಿನಲ್ಲಿ ಅನುಮಾನಸ್ಪದ ವ್ಯಕ್ತಿ ಬ್ಯಾಗ್‌ನಲ್ಲಿ 1.88 ಕೋಟಿ ಹಣ ಪತ್ತೆ

ಮಂಗಳೂರು-ತಿರುಪತಿ (ವಯಾ ಹಾಸನ), ಮಂಗಳೂರು-ಅಹಮದಾಬಾದ್ (ವಯಾ ಮಡಗಾಂವ್), ಮಂಗಳೂರು-ಮೀರಜ್ (ವಯಾ ಹಾಸನ ಮತ್ತು ಅರಸೀಕೆರೆ) ರೈಲುಗಳ ಪ್ರಸ್ತಾವನೆಯನ್ನು ಸಭೆಯಲ್ಲಿ ಇಡಲಾಗಿದೆ. ಐಆರ್‌ಟಿಟಿಸಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.

ಬಜೆಟ್; ಬೆಂಗಳೂರು-ಕಣ್ಣೂರು ರೈಲು ಕೋಜಿಕ್ಕೋಡ್ ತನಕ ವಿಸ್ತರಣೆ ಬಜೆಟ್; ಬೆಂಗಳೂರು-ಕಣ್ಣೂರು ರೈಲು ಕೋಜಿಕ್ಕೋಡ್ ತನಕ ವಿಸ್ತರಣೆ

Southern Railway To Run 3 New Train From Mangaluru

ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಸಂಘಟನೆಗಳು, ರೈಲು ಬಳಕೆದಾರರ ಸಂಘ ಸಂಸದರನ್ನು ಮಂಗಳೂರು-ತಿರುಪತಿ ರೈಲು ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿದ್ದವು. ಪಸ್ತುತ ರೈಲು ಸೇವೆ ಇಲ್ಲದ ಕಾರಣ ಬೇರೆ ಮಾರ್ಗವಾಗಿ ಸಂಚಾರ ಮಾಡಬೇಕಾಗಿದೆ ಎಂದು ಜನರು ಹೇಳಿದ್ದರು.

ಮಂಗಳೂರಿಗೆ ಮೊದಲ ಮೆಮು ರೈಲು; ವೇಳಾಪಟ್ಟಿ ಮಂಗಳೂರಿಗೆ ಮೊದಲ ಮೆಮು ರೈಲು; ವೇಳಾಪಟ್ಟಿ

ಇದೇ ಮಾದರಿಯಲ್ಲಿ ಮೊದಲು ಮೀರಜ್‌ಗೆ ಸಂಚಾರ ನಡೆಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲನ್ನು ಪುನರ್ ಪರಿಚಯಿಸಬೇಕು ಎಂದು ಸಂಸದರು ಬೇಡಿಕೆ ಇಟ್ಟಿದ್ದಾರೆ. ಗೇಜ್ ಪರಿವರ್ತನೆಗಾಗಿ ಈ ರೈಲನ್ನು ನಿಲ್ಲಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಚಾರ ಪುನಃ ಆರಂಭಿಸಲಿಲ್ಲ.

ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್‌ ಕುಮಾರ್ ಕಟೀಲ್ ಕರಾವಳಿ ಭಾಗದಿಂದ ಉತ್ತರ ಕರ್ನಾಟಕ ಸಂಪರ್ಕಿಸಲು ರೈಲುಗಳನ್ನು ಓಡಿಸಬೇಕು ಎಂದು ಸಹ ಬೇಡಿಕೆ ಇಟ್ಟಿದ್ದಾರೆ. ಇದರ ಜೊತೆಗೆ ನಾಲ್ಕು ವರ್ಷದ ಹಿಂದೆ ಅನುಮತಿ ಸಿಕ್ಕಿರುವ ಮಂಗಳೂರು ಸೆಂಟ್ರಲ್- ರಾಮೇಶ್ವರಂ (ವಾರದಲ್ಲಿ ಎರಡು ದಿನ) ರೈಲು ವೇಳಾಪಟ್ಟಿಯನ್ನು ಅಂತಿಮಗೊಳಿಸಿ ರೈಲು ಓಡಿಸಬೇಕು ಎಂದು ಸಹ ಬೇಡಿಕೆ ಇಡಲಾಗಿದೆ.

ಪ್ಲಾಟ್‌ ಫಾರಂ ಕೆಲಸ ವೇಗಗೊಳಿಸಿ; ನಳೀನ್‌ ಕುಮಾರ್ ಕಟೀಲ್ ಸಭೆಯಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ಲಾಟ್‌ ಫಾರಂ ಕೆಲಸ ವಿಳಂಬವಾಗುತ್ತಿರುವ ಕುರಿತು ಸಹ ವಿಷಯ ಪ್ರಸ್ತಾಪ ಮಾಡಿದ್ದಾರೆ.

ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು 2020ರ ನವೆಂಬರ್ 19ರಂದು ಕೆಲಸಕ್ಕೆ ಚಾಲನೆ ಸಿಕ್ಕಿದೆ. 2021-22ರಲ್ಲಿ ಯಾವುದೇ ಅನುದಾನ ದೊರೆಯದ ಕಾರಣ ಕಾಮಗಾರಿ ವಿಳಂಬವಾಗಿದೆ ಎಂದು ವಿವರಣೆ ನೀಡಿದರು.

ಇದರ ಜೊತೆಗೆ ಪಿಟ್‌ಲೈನ್‌ ಕಾಮಗಾರಿಗೆ ಈಗ ಅನುದಾನ ಸಿಕ್ಕಿದೆ. ಮುಂದಿನ ತಿಂಗಳ ಅಂತ್ಯದೊಳಗೆ ಈ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಮಾಹಿತಿ ನೀಡಿದರು. 2022-23ನೇ ಅರ್ಥಿಕ ವರ್ಷದಲ್ಲಿ ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳಲಾಗುತ್ತದೆ ಎಂದರು.

English summary
Southern railway will examine proposals to operate new passenger trains from Mangaluru Central including Mangalur-Tirupati new train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X