ನೈಋತ್ಯ ರೈಲ್ವೆ ಪ್ರಕಟಣೆ; ಮಾರ್ಚ್ 17ರಿಂದ ಈ ರೈಲುಗಳು ರದ್ದು
ಬೆಂಗಳೂರು, ಮಾರ್ಚ್ 17; ನೈಋತ್ಯ ರೈಲ್ವೆ ಮಾರ್ಚ್ 17ರ ಗುರುವಾರದಿಂದ ಜಾರಿಗೆ ಬರುವಂತೆ 18 ರೈಲುಗಳ ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಬೆಂಗಳೂರು- ಮಂಗಳೂರು ನಡುವಿನ ರೈಲು ಸಹ ರದ್ದುಗೊಂಡಿದೆ.
ಪಡೀಲ್ ಮತ್ತು ಕುಲಶೇಖರ ನಿಲ್ದಾಣಗಳ ನಡುವಿನ ಜೋಡಿ ಮಾರ್ಗದ ಕಾಮಗಾರಿ ಹಿನ್ನಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ತನಕ ತಾತ್ಕಾಲಿಕವಾಗಿ ರೈಲುಗಳ ಸಂಚಾರ ಇರುವುದಿಲ್ಲ.
ಗುರುವಾರವೇ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಬುಧವಾರ ಸಂಜೆ ಈ ಕುರಿತು ರೈಲ್ವೆ ಇಲಾಖೆ ಮಾಹಿತಿ ನೀಡಿತ್ತು. ಇದರಿಂದಾಗಿ ಮುಂಗಡ ಟಿಕೆಟ್ ಬುಕ್ ಮಾಡಿದವರು ರೈಲ್ವೆ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ತಾಂತ್ರಿಕ ತೊಂದರೆ ಹಿನ್ನಲೆ ರೈಲುಗಳ ಸಂಚಾರ ದಿಢೀರ್ ರದ್ದುಗೊಳಿಸಲಾಗುತ್ತದೆ. ಆದರೆ ಜೋಡಿ ಹಳಿ ಕಾಮಗಾರಿ ಬಗ್ಗೆ ಮೊದಲೇ ಮಾಹಿತಿ ಇರುತ್ತದೆ. ಆದರೂ ರೈಲು ಇಲಾಖೆ ಕೊನೆ ಕ್ಷಣದಲ್ಲಿ ಮಾಹಿತಿ ನೀಡಿದ್ದು ಏಕೆ? ಎಂದು ಪ್ರಯಾಣಿಕರು ಪ್ರಶ್ನಿಸಿದರು.
ರದ್ದುಗೊಂಡಿರುವ ರೈಲುಗಳು
* ರೈಲು ನಂಬರ್ 16595/16596 (ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್), ರೈಲು ನಂಬರ್ 16511/16512 (ಯಶವಂತಪುರ-ಕಣ್ಣೂರು), ಕೆಎಸ್ಆರ್ ಬೆಂಗಳೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (16585/16586) ರೈಲುಗಳು ಮಾರ್ಚ್ 19 ಮತ್ತು 20ರಂದು ಸಂಚಾರ ನಡೆಸುವುದಿಲ್ಲ.
* ಸುಬ್ರಮಣ್ಯ ರಸ್ತೆ-ಮಂಗಳೂರು ಸೆಂಟ್ರಲ್ (ಗಾಡಿ ಸಂಖ್ಯೆ 06488/06489) ಮಧ್ಯದ ಪ್ರಯಾಣಿಕರ ವಿಶೇಷ ರೈಲು, ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ರಯಾಣಿಕ ರೈಲುಗಳು (06487/06486) ಮಾರ್ಚ್ 17 ರಿಂದ 20ರ ತನಕ ಸಂಚಾರ ನಡೆಸುವುದಿಲ್ಲ.
Passengers kindly note the Cancellation of train services & Temporary stoppage of trains at Birur Station.
— South Western Railway (@SWRRLY) March 16, 2022
ಪ್ರಯಾಣಿಕರ ವಿಶೇಷ ಗಮನಕ್ಕೆ :
ರೈಲುಗಳ ಸೇವೆಯ ರದ್ದತಿ ಹಾಗೂ ಬೀರೂರು ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಗಮನಿಸಿ.#swrupdates @DDChandanaNews @Central_Railway pic.twitter.com/pHnwyrFuEY
* ರೈಲು ನಂಬರ್11097/11098 ಪುಣೆ-ಎರ್ನಾಕುಲಂ ಎಕ್ಸಪ್ರೆಸ್ ರೈಲು ಮಾರ್ಚ್ 19 ಮತ್ತು 21ರಂದು ಸಂಚಾರ ನಡೆಸುವುದಿಲ್ಲ. ಯಶವಂತಪುರ-ಕಾರವಾರ (16515/16516) ರೈಲು ಮಾರ್ಚ್ 18 ಮತ್ತು 19ರಂದು ಇರುವುದಿಲ್ಲ.
* ರೈಲು ಸಂಖ್ಯೆ 16575/ 16576 ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಮಾರ್ಚ್ 17 ಮತ್ತು 18ರಂದು ಇರುವುದಿಲ್ಲ. ರೈಲು ಸಂಖ್ಯೆ 16539/16540 ಮಂಗಳೂರು-ಯಶವಂತಪುರ ರೈಲು ಮಾರ್ಚ್ 19 ಮತ್ತು 20ರಂದು ಸಂಚಾರ ನಡೆಸುವುದಿಲ್ಲ.
ಬೀರೂರು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ
* ರೈಲು ಸಂಖ್ಯೆ 16587/16588 ಯಶವಂತಪುರ-ಬಿಕಾನೇರ್ ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು ಮಾರ್ಚ್ 20 ರಿಂದ 19/4/2022ರ ತನಕ ಪ್ರಾಯೋಗಿಕ ಆಧಾರದ ಮೇಲೆ ಬೀರೂರು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕವಾಗಿ ನಿಲುಗಡೆ ನೀಡಲಾಗುತ್ತದೆ.
* ರೈಲು ಸಂಖ್ಯೆ 16587 ಯಶವಂತಪುರ-ಬಿಕಾನೇರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಬೀರೂರು ರೈಲು ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆಗೊಳ್ಳಲಿದೆ. ಈ ರೈಲು ಬೀರೂರು ರೈಲು ನಿಲ್ದಾಣಕ್ಕೆ 2.19ಕ್ಕೆ ಆಗಮಿಸಿ 2.20ಕ್ಕೆ ನಿರ್ಗಮಿಸಲಿದೆ.
* ರೈಲು ಸಂಖ್ಯೆ 16588 ಬಿಕಾನೇರ್ ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಬೀರೂರು ರೈಲು ನಿಲ್ದಾಣದಲ್ಲಿ 1 ನಿಮಿಷ ನಿಲುಗಡೆಗೊಳ್ಳಲಿದೆ. ಬೀರೂರು ರೈಲು ನಿಲ್ದಾಣಕ್ಕೆ 11.34ಕ್ಕೆ ಆಗಮಿಸುವ ರೈಲು 11.35ಕ್ಕೆ ನಿರ್ಗಮಿಸಲಿದೆ.












Click it and Unblock the Notifications