ಆಸ್ತಿಯಲ್ಲಿ ಪಾಲು ಕೊಡದ್ದಕ್ಕೆ ತಂದೆಯನ್ನೇ ಹತ್ಯೆಗೈದಿದ್ದ ಮಗನ ಬಂಧನ
ಮಂಗಳೂರು, ಎಪ್ರಿಲ್ 16 : ಮೂಡಬಿದ್ರೆಯ ಹೊಸಬೆಟ್ಟು ಕರಂಗನದ ಪೌಲ್ ಗೋವಿಯಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಆರೋಪಿ ಡಾಲ್ಪಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ತಿ ವಿಚಾರವಾಗಿ ಆರೋಪಿ ಡಾಲ್ಪಿ ತನ್ನ ಅಣ್ಣ ಸ್ಟ್ಯಾ ನಿಗೆ ಹಿಗ್ಗಾ-ಮುಗ್ಗಾ ಬೈದಿದ್ದಾನೆ. ಅಲ್ಲದೇ ತಮ್ಮ ಡಾಲ್ಫಿ ಅಣ್ಣನ ಮೇಲೆ ಹಲ್ಲೆ ಮಾಡಿ ಕೊಲ್ಲಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಅಣ್ಣ ಸ್ಟ್ಯಾನಿ ಸಣ್ಣ ಪುಟ್ಟ ಗಾಯಗಳೊಂದಿಗೆ ಎಸ್ಕೇಪ್ ಆಗಿದ್ದರು. ಇದಾದ ನಂತರ ಮನೆಗೆ ಬಂದ ಡಾಲ್ಫಿ ತಂದೆಯ ಜೊತೆ ಜಗಳವಾಡಿ ಶುಕ್ರವಾರ ರಾತ್ರಿ ಗುಡ್ ಫ್ರೈಡೆ ದಿನದಂದು ಕೊಲೆ ಮಾಡಿದ್ದ.

'ತಾಯಿ ಲಿಲ್ಲಿ ಸಾವಿನ ನಂತರ ತಂದೆ ಅಣ್ಣನಿಗೆ ಮಾತ್ರ ಆಸ್ತಿಯಲ್ಲಿ ಪಾಲು ನೀಡಿದ್ದಾರೆ. ನಾನು ಪಾಲು ಕೇಳಿದ್ದರೂ ನನಗೆ ಕೊಟ್ಟಿರಲಿಲ್ಲ. ಈ ಬೇಸರ ನನ್ನಲ್ಲಿತ್ತು' ಎಂದು ವಿಚಾರಣೆ ವೇಳೆ ಆರೋಪಿ ಡಾಲ್ಪಿ ಹೇಳಿದ್ದಾನೆ.
ಕೊಲೆಗೀಡಾದ ಪೌಲ್ ಪತ್ನಿ ಲಿಲ್ಲಿ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂಬ ಆರೋಪವಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.












Click it and Unblock the Notifications