ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಕಾಶ್ ರೈಗೆ ಬೆದರಿಕೆ
Recommended Video

ಮಂಗಳೂರು, ಮಾರ್ಚ್ 14: ಯಾರೋ ಅನಾಮಿಕರು ನನಗೆ ಹೆದರಿಸುವ ಪ್ರಯತ್ನ ಮಾಡಿದ್ದಾರೆ, ನನ್ನ ಕಾರು ಚಾಲಕನಿಗೆ ಬೆದರಿಕೆ ಹಾಕಲಾಗಿದೆ ಎಂದು ಚಿತ್ರನಟ ಪ್ರಕಾಶ್ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಯಾರೋ ನಾಲ್ಕು ಜನ ಬಂದು ನನ್ನ ಕಾರು ಚಾಲಕನ ಬಳಿ ನನ್ನ ಬಗ್ಗೆ ಪ್ರಶ್ನಿಸಿದ್ದಾರೆ, ನಾನು ಎಲ್ಲಿ ಉಳಿದುಕೊಳ್ಳುತ್ತೇ ಎಂದು ಕೇಳಿದ್ದಾರೆ, ಪೊಲೀಸರು ಬಂದ ಕೂಡಲೇ ಸ್ಥಳದಿಂದ ಪೇರಿ ಕಿತ್ತಿದ್ದಾರೆ ಎಂದು ಅವರು ಹೇಳಿದರು.
ಬಲಪಂಥೀಯರ ವಿರುದ್ಧ ಜಸ್ಟ್ ಆಸ್ಕಿಂಗ್ (#JustAsking) ಅಭಿಯಾನ ನಡೆಸುತ್ತಿರುವ ಚಿತ್ರನಟ ಪ್ರಕಾಶ್ ರೈ ಅವರು 'ನನಗೆ ಇಲ್ಲಿ ಆತಂಕದ ವಾತಾವರಣ ನಿರ್ಮಿಸಲಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ಈ ರೀತಿಯ ಹೆದರಿಕೆಗಳಿಗೆ ಬಗ್ಗುವುದಿಲ್ಲ ಎಂದ ಅವರು ಜಸ್ಟ್ ಆಸ್ಕಿಂಗ್ ಅಭಿಯಾನ ಮುಂದುವರೆಯಲಿದೆ ಎಂದರು. ರಾಜಕಾರಣದ ಬಗ್ಗೆಯೂ ಮಾತನಾಡಿದ ಅವರು 'ರಾಜಕೀಯದಲ್ಲಿ ಆತಂಕದ ವಾತಾವರಣ ಇದೆ, ನಾನು ಆಳುವ ಪಕ್ಷದ ವಿರೋಧಿಯಾಗಿದ್ದೇನೆ, ಒಬ್ಬ ಪ್ರಜೆ, ಪ್ರಜೆಯಾಗಿರೋದಕ್ಕೆ ಇಂದಿನ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ, ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪಬ್ ದಾಳಿ ತೀರ್ಪು: ಸರ್ಕಾರ ಮೇಲ್ಮನವಿ ಸಲ್ಲಿಸಲಿ
ಪಬ್ ದಾಳಿ ಆರೋಪಿಗಳಿಗೆ ಕೋರ್ಟ್ ಖುಲಾಸೆ ವಿಚಾರದ ಪ್ರತಿಕ್ರಿಯಿಸಿದ ಪ್ರಕಾಶ್ ರೈ ಅವರು 'ಕೋರ್ಟ್ ಸಾಕ್ಷಧಾರ ಕೊರತೆ ಕಾರಣ ಆರೋಪಿಗಳನ್ನು ವಜಾ ಮಾಡಿದೆ ಆದರೆ ಕಾರ್ಯಕರ್ತರು ಯುವತಿಯರಿಗೆ ಹೊಡೆದಿರುವ ವಿಡಿಯೋ ಕಣ್ಣ ಮುಂದೆಯೇ ಇದೆ' ಎಂದರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನ್ಯಾಯಾಲಯದ ತೀರ್ಪು ಜನಸಾಮಾನ್ಯರನ್ನು ಗೊಂದಲಗೊಳಿಸಿದೆ ಎಂದ ಅವರು 'ಆಡಳಿತರೂಢ ಕಾಂಗ್ರೆಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು, ಆದರೆ ಪ್ರಶ್ನೆ ಮಾಡಿದರೆ ವಿರೋಧಿಯಾಗುತ್ತೀವಿ ಎಂಬ ಭಯ ಕಾಂಗ್ರೆಸ್‌ಗೆ ಇದ್ದಂತಿದೆ. ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಪ್ರದರ್ಶನ ಮಾಡುತ್ತಿದೆ' ಎಂದು ಅವರು ದೂರಿದರು.












Click it and Unblock the Notifications