ಯಾವ ಶಾಸಕರೂ ಪಕ್ಷ ಬಿಟ್ಟುಹೋಗಲ್ಲ: ಸಿದ್ದರಾಮಯ್ಯ
ಮಂಗಳೂರು, ಡಿಸೆಂಬರ್ 03: ಬಿಜೆಪಿಯವರು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯೋಕೆ ಯತ್ನಿಸ್ತಿದಾರೆ. ಈಗಾಗಲೇ ಒಂದು ಬಾರಿ ಫೇಲ್ ಆಗಿದ್ದಾರೆ .ಈಗ ಮತ್ತೋಮ್ಮೆ ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಯ್ಯ ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ 104 ಸ್ಥಾನ ಇಟ್ಟುಕೊಂಡು ಮೆಜಾರಿಟಿ ಪ್ರೂವ್ ಮಾಡಕ್ಕಾಗಿಲ್ಲ. ಈಗ ಮತ್ತೆ ಪ್ರಯತ್ನ ಮಾಡ್ತಿದಾರೆ, ಜನ ಪಾಠ ಕಲಿಸ್ತಾರೆ . 25 ಕೋಟಿ ಕೊಡ್ತಾರಂತೆ, ಅಧಿಕಾರ ಕೊಡುತ್ತಾರಂತೆ ಎಲ್ಲಿಂದ ಬಂತು ಹಣ ಇವರಿಗೆ, ಭ್ರಷ್ಟಾಚಾರದ ಹಣವದು. ನಾಚಿಕೆಯಾಗಲ್ವೇ ಇವರಿಗೆ ಸರಕಾರ ಬೀಳಿಸ್ತೇನೆ ಅನ್ನೋದಕ್ಕೆ ಎಂದು ಕಿಡಿಕಾರಿದರು.
ಸತೀಶ್ ಜಾರಕಿಹೊಳಿ ರೆಸಾರ್ಟ್ ಗೆ ತೆರಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಜಾರಕಿಹೊಳಿಯವರು ರೆಸಾರ್ಟಿಗೆ ಹೋಗ್ಲೇ ಬಾರದೇ? ಎಂದು ಪ್ರಶ್ನಿಸಿದ ಅವರು ಬಿಜೆಪಿಯವರು ಯಾವ್ದೇ ರೆಸಾರ್ಟಿಗೆ ಹೋಗಲ್ವೇ ? ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗೋದಿಲ್ಲ. ನಮ್ಮಲ್ಲಿ ಯಾವುದೇ ಶಾಸಕರಿಗೆ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಿ ನಲ್ಲೇ ಇದ್ದೆವೆ. ಜಾರಕಿಹೊಳಿ ಹೇಳಿದ್ದು ಸುಳ್ಳು ಎಂದು ಅವರು ಹೇಳಿದರು.

ಸಿದ್ಧರಾಮಯ್ಯ ಅವಕಾಶವಾದಿ, ಬಿಜೆಪಿಗೆ ಬರ್ತಾರೆಂದು ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿದ ಅವರು ಈಶ್ವರಪ್ಪನಿಗೆ ಮೆದುಳಿಲ್ಲ, ಬ್ರೈನ್ ಲೆಸ್ ಮ್ಯಾನ್ ಎಂದು ಅವರು ವ್ಯಂಗ್ಯವಾಡಿದರು . ಅವರ ಬಗ್ಗೆ ಏನೂ ಮಾತನಾಡಲ್ಲ. ಈಶ್ವರಪ್ಪ ಒಬ್ಬ ಮಹಾಪೆದ್ದ ಎಂದು ಛೇಡಿಸಿದರು












Click it and Unblock the Notifications