ಸಿದ್ದರಾಮಯ್ಯನವರದ್ದು ಕಳ್ಳಕಾಕರ ಸರಕಾರ: ಕಟೀಲ್ ಆರೋಪ

ಮಂಗಳೂರು, ಫೆಬ್ರವರಿ 18: ಸಿದ್ದರಾಮಯ್ಯರದ್ದು ಕಳ್ಳಕಾಕರ ಸರ್ಕಾರ. ಎತ್ತಿನಹೊಳೆ ಯೋಜನೆಯಲ್ಲಿ ಸಿಎಂ ಗುತ್ತಿಗೆದಾರರಿಂದಲೆ ಕಪ್ಪ ಕಾಣಿಕೆ ಪಡೆದಿದ್ದಾರೆಂದು ಸಂಸದ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರದಲ್ಲಿ ಎಂದೂ ಕಾಣದ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ನಂ.1 ಆಗಿದೆ. ಸರಕಾರದ ಲೋಪದ ವಿರುದ್ದ ಕಾನೂನು ಸಮರ ಮಾಡುವುದಾಗಿ ತಿಳಿಸಿದರು.[ಕಪ್ಪ ನೀಡಲು ಸಿದ್ದರಾಮಯ್ಯನವರಿಂದ ದುಷ್ಟಕೂಟ ರಚನೆ: ಶ್ರೀನಿವಾಸ್ ಪ್ರಸಾದ್ ಕಿಡಿ]

Siddaramaiah Government is a Thieves govt says MP Naleen Kumar kateel at Mangalore

ಸಿದ್ರಾಮಯ್ಯ ಹೈಕಮಾಂಡಿಗೆ ಸಾವಿರ ಕೋಟಿ ಕಪ್ಪ ಸಲ್ಲಿಸಿದ ಆರೋಪ ಎದುರಿಸುತ್ತಿದ್ದಾರೆ. ಜಾರಕಿಹೊಳಿ ಸೇರಿ ಭ್ರಷ್ಟ ಸಚಿವರನ್ನು ಸಿಎಂ ಪೋಷಿಸುತ್ತಿದ್ದಾರೆ. ಭ್ರಷ್ಟ ಸರಕಾರದ ವಿರುದ್ಧ ಫೆ. 20 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಧರಣಿ ನಡೆಸಲಾಗುವುದು ಎಂದು ದ.ಕ. ಸಂಸದ ನಳಿನ್ ಕುಮಾರ್ ಕಿಡಿ ಕಾರಿದರು.

ಅನ್ನಭಾಗ್ಯದ ಹೆಸರಲ್ಲಿ ಉಳಿದೆಲ್ಲ ಭಾಗ್ಯಗಳಿಗೆ ಕನ್ನ ಹಾಕಿದ್ದಾರೆ. ಸ್ಟೀಲ್ ಬ್ರಿಡ್ಜ್ , ಎತ್ತಿನಹೊಳೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಗುತ್ತಿಗೆದಾರರ ಪೋಷಣೆಗಾಗಿ ಮುಖ್ಯ ಮಂತ್ರಿಗಳು ಮಾತನಾಡುತ್ತಲೇ ಇಲ್ಲ ಎಂದು ಆಪಾದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+