ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಆದೇಶ, ಜಿಲ್ಲಾದ್ಯಂತ ಫ್ಲೆಕ್ಸ್ ಗಳನ್ನು ತೆರವು ಗೊಳಿಸಿದ ಸತ್ಯಜೀತ್

|
Google Oneindia Kannada News

ಮಂಗಳೂರು ಮಾರ್ಚ್ 02:ದಕ್ಷಿಣ ಕನ್ನಡ ಜಿಲ್ಲೆಯ ಕಮಲ ಪಾಳಯದಲ್ಲಿ ಭುಗಿಲೆದ್ದಿದ್ದ ಅಸಮಾಧಾನ ವನ್ನು ಒಂದು ಹಂತದಲ್ಲಿ ಶಮನ ಮಾಡುವಲ್ಲಿ ಬಿಜೆಪಿ ಹಿರಿಯ ಮುಖಂಡರು ಯಶಸ್ವಿಯಾಗಿದ್ದಾರೆ .

ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಕ್ಷೇತ್ರ ದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ ಯಾಗಿದ್ದ ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ತಮ್ಮ ಪರವಾಗಿ ಜಿಲ್ಲೆಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ತಮ್ಮ ಅಭಿಮಾನಿಗಳಿಗೆ ಸೂಚಿಸಿದ್ದಾರೆ.

ಲೋಕಸಭಾ ಚುನಾವಣೆಗೆ ದ.ಕ.ದಲ್ಲಿ ಕೈ, ಬಿಜೆಪಿಯಿಂದ ಭಾರೀ ಸಿದ್ಧತೆಲೋಕಸಭಾ ಚುನಾವಣೆಗೆ ದ.ಕ.ದಲ್ಲಿ ಕೈ, ಬಿಜೆಪಿಯಿಂದ ಭಾರೀ ಸಿದ್ಧತೆ

ಭಾರೀ ಗೊಂದಲಕ್ಕೆ ಕಾರಣ ವಾಗಿದ್ದ ಈ ಫ್ಲೆಕ್ಸ್ ಗಳ ತೆರವಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಸತ್ಯಜಿತ್ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

Sathyajith surathkal removed his flex banner

ಜಿಲ್ಲೆಯ ಹಲವೆಡೆ ಸತ್ಯಜಿತ್ ಅವರು ನಮ್ಮ ಆಯ್ಕೆ ಎಂದು ಹಾಕಲಾದ ಪ್ಲೆಕ್ಸ್ ತೆರವುಗೊಳಿಸುವಂತೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೂಚಿಸಿದ್ದರು. ಇದಕ್ಕೆ ಸ್ಪಂದಿಸಿದ ಸತ್ಯಜಿತ್‌ ತಮ್ಮ ಅಭಿಮಾನಿಗಳಿಗೆ ಪ್ಲೆಕ್ಸ್ ತೆರವು ಮಾಡುವಂತೆ ಸೂಚಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ 'ಕೈ'ಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ!ಮುಂದಿನ ಲೋಕಸಭಾ ಚುನಾವಣೆಯಲ್ಲಿ 'ಕೈ'ಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ!

ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲ್ ಈ ಬಾರಿಯೂ ಲೋಕಸಭೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಈ ನಡುವೆ ಸತ್ಯಜಿತ್ ಸುರತ್ಕಲ್ ಟಿಕೆಟ್ ಗಾಗಿ ಪೈಪೋಟಿ ಆರಂಭಿಸಿದ್ದರು.

Sathyajith surathkal removed his flex banner

ಅವರ ಅಭಿಮಾನಿಗಳು ಜಿಲ್ಲೆಯಾದ್ಯಂತ ಹಾಕಿದ ಫ್ಲೆಕ್ಸ್ ಗಳು ಬಿಜೆಪಿ ಮುಂಖಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅದರಲ್ಲೂ ಸತ್ಯಜಿತ್ ಅಭಿಮಾನಿಗಳ ಹೆಸರಿನಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸತ್ಯಜಿತ್‌ ನಮ್ಮ ಆಯ್ಕೆ ಎಂಬ ಫ್ಲೆಕ್ಸ್ ಗಳು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಜೆಪಿ ಟಿಕೆಟ್ ಆಕಾಂಕ್ಷಿ ಸತ್ಯಜಿತ್ ಪರ ಅಭಿಮಾನಿಗಳು ಹಾಕಿರುವ ಪ್ಲೆಕ್ಸ್ ಇದೀಗ ರಾಜ್ಯ ನಾಯಕರ ಅಂಗಳಕ್ಕೆ ತಲುಪಿತ್ತು.

English summary
Dakshina Kannada Loka sabaha constituency BJP ticket aspirant Sathyajith Surathkal removed his flex banner .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X