ಏರ್‌ಪೋರ್ಟ್ ಸಮೀಪ ಸೈಟುಗಳ ಮಾರಾಟ, ಅರ್ಜಿ ಹಾಕಲು ಅರ್ಹತೆಗಳು

ಮಂಗಳೂರು, ಜನವರಿ 28: ಮಂಗಳೂರು ನಗರದಲ್ಲಿ ಸೈಟು ಕೊಳ್ಳಲು ಬಯಸುವ ಜನರಿಗೆ ಸಿಹಿಸುದ್ದಿಯೊಂದಿದೆ. ಏರ್‌ಪೋರ್ಟ್ ಸಮೀಪವೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿರುವ ವಸತಿ ಯೋಜನೆಯ ಸೈಟುಗಳ ಮಾರಾಟಕ್ಕೆ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಮಾರ್ಚ್‌ 10ರ ತನಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ, ಅರ್ಜಿ ಸಲ್ಲಿಕೆ ಮಾಡಲು ಬೇಕಾದ ಅರ್ಹತೆಗಳ ಕುರಿತು ಮಾಹಿತಿ ನೀಡಲಾಗಿದೆ.

ಸ್ವಂತ ಮನೆಯ ಕನಸು ನನಸು ಮಾಡಿಕೊಳ್ಳುವ ಜನರ ಅನುಕೂಲಕ್ಕಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿರುವ ವಸತಿ ಯೋಜನೆಯ ಸೈಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಸುಮಾರು 3 ಕಿ. ಮೀ. ದೂರದಲ್ಲಿರುವ ಕುಂಜತ್ತಬೈಲ್‌ನಲ್ಲಿ ಈ ವಸತಿ ಯೋಜನೆ ಇದೆ.

Residential Plots At Kunjathbail Near Mangaluru Airport Project Details

ವಿವಿಧ ಸಮಯದಾಯದ ಆರ್ಥಿಕ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೈಟುಗಳನ್ನು ನಿರ್ಮಾಣ ಮಾಡಲಾಗಿದೆ. ಹೆಚ್ಚಿನ ಆದಾಯ ಹೊಂದಿರುವ ಸಮಯದಾಯದಿಂದ ಹಿಡಿದು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ನೆರವಾಗುವ ಸೈಟುಗಳು ಮಾರಾಟಕ್ಕೆ ಲಭ್ಯವಿದೆ.

ಸಾಲ ಸೌಲಭ್ಯವಿದೆ: ಈ ವಸತಿ ಯೋಜನೆಯು ಡಾಂಬರು ರಸ್ತೆ, ಒಳಚರಂಡಿ ವ್ಯವಸ್ಥೆ, ಅಭಿವೃದ್ಧಿಗೊಳಿಸಿದ ಕೆರೆ, ವಾಕಿಂಗ್ ಪಾಥ್‌ಗಳನ್ನು ಒಳಗೊಂಡಿದೆ. ಅಲ್ಲದೇ ಸೈಟುಗಳನ್ನು ಕೊಳ್ಳುವ ಜನರ ಅನುಕೂಲಕ್ಕಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಾಲ ಸೌಲಭ್ಯವನ್ನು ನೀಡಲಿದೆ.

ಈ ಸೈಟುಗಳನ್ನು ಕರ್ನಾಟಕ ನಗಾರಭಿವೃದ್ಧಿ ನಿಯಮಗಳು 1991ರ ನಿಯಮದಂತೆ ಸೈಟುಗಳನ್ನು ಹಂಚಿಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆ ಮಾಡುವವರು ಕರ್ನಾಟಕದಲ್ಲಿ 10 ವರ್ಷಗಳಿಂದ ನೆಲೆಸಿರಬೇಕು. ಇದಕ್ಕಾಗಿ ಅರ್ಜಿ ಸಲ್ಲಿಸುವಾಗ ವಾಸ ದೃಢೀಕರಣ ಪತ್ರವನ್ನು ನೀಡಬೇಕಿದೆ.

ವಸತಿ ಯೋಜನೆ ಸುಮಾರು 17.49 ಎಕರೆ ಜಾಗದಲ್ಲಿದೆ. ಎಷ್ಟು ಸೈಟುಗಳನ್ನು ಮಾರಾಟ ಮಾಡಬೇಕು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಈ ವಸತಿ ಯೋಜನೆ ಮಂಗಳೂರು ವಿಮಾನ ನಿಲ್ದಾಣದಿಂದ 3 ಕಿ. ಮೀ. ದೂರದಲ್ಲಿದೆ. ಪಾರ್ಕ್‌ ಮತ್ತು ಬೆಂಚ್‌ಗಳನ್ನು ಒಳಗೊಂಡಿದೆ. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಮಂಗಳೂರು ರೈಲು ನಿಲ್ದಾಣ, ಶಾಲೆ ಮತ್ತು ಕಾಲೇಜುಗಳ ಸಂಪರ್ಕಕ್ಕೆ ಹತ್ತಿರವಿದೆ.

ಆಸಕ್ತರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಗೆ ಕಛೇರಿ ಸಮಯದಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು. ಮಾರ್ಚ್ 10, 2025ರ ತನಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ಸಂಖ್ಯೆಗಳು 0824-2459565, 2459545.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಗರ ಯೋಜನಾ ಪ್ರಾಧಿಕಾರವಾಗಿದೆ. ಮುಡಾದ ಅಧ್ಯಕ್ಷರು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿರುತ್ತಾರೆ. ಮಂಗಳೂರು ನಗರ ಯೋಜನಾ ಪ್ರಾಧಿಕಾರವು 29-11-1965ರಿಂದ ಜಾರಿಗೆ ಬಂದಿತು, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ 1987ರ ಅಡಿಯಲ್ಲಿ ಸರ್ಕಾರವು 1988ರಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪನೆ ಮಾಡಿತು.

ವಿವಿಧ ವಸತಿ ಯೋಜನೆಯಡಿ ಮೂಲ ಸೌಕರ್ಯವನ್ನು ಹೊಂದಿರುವ ಬಡಾವಣೆಗಳನ್ನು ನಿರ್ಮಾಣ ಮಾಡಿ, ಸೈಟುಗಳನ್ನು ಜನರಿಗೆ ಮಾರಾಟ ಮಾಡಲಾಗುತ್ತದೆ. ಜನರ ಕೈಗೆಟುಕುವ ದರದಲ್ಲಿ ಸೈಟುಗಳನ್ನು ಮಾರಾಟ ಮಾಡಲಾಗುತ್ತದೆ.

ಮುಡಾದ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ವೆಬ್‌ಸೈಟ್‌ಗೆ ಭೇಟಿ ನೀಡಿ. http://mudamangaluru.com/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+