ಮಂಗಳೂರು: ವೇಣೂರು ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ

ಮಂಗಳೂರು, ಜ.4 : ವೇಣೂರಿನ ಶ್ರೀ ಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ- ಅಂಗರಕರಿಯ ಶ್ರೀ ಮಹಾಗಣಪತಿ ಹವನದ ಉದ್ಯಾಪನಾ ಸಮಾರಂಭ ಜನವರಿ 3ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಕೈಮಾರು ಸುಬ್ರಹ್ಮಣ್ಯ ಉಡುಪರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪೂರ್ವಾಹ್ನ ವಾಗೀಶ್ವರೀ ಹವನ, ಗಣಪತಿ ಹವನ ,ಶ್ರೀ ಸತ್ಯನಾರಾಯಣ ಪೂಜೆ , ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಿತು.[ದೇವಾಲಯಕ್ಕೆ ಹೋಗುವುದರಿಂದ ಏನು ಲಾಭ?]

temple

ಶ್ರೀಮಹಾಗಣಪತಿ ಹವನದ ಉದ್ಯಾಪನಾ ಸಮಿತಿಯ ಅಧ್ಯಕ್ಷ ಕೈದೊಟ್ಟು ಆನಂದ, ಕಾರ್ಯದರ್ಶಿ ನಾಗೇಶ್ ಕೋಟ್ಯಾನ್, ಕೋಶಾಧಿಕಾರಿ ಸತೀಶ್ ಶೆಟ್ಟಿ, ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಉದಯ ಕುಮಾರ್, ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಯನ್.ಸೀತಾರಾಮ ರೈ, ಕಾರ್ಯದರ್ಶಿ ಪಿ.ಹರಿಪ್ರಸಾದ್ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.[ಲಕಮನಹಳ್ಳಿ ಸೋಮೇಶ್ವರ ದೇಗುಲ ಜೀರ್ಣೋದ್ಧಾರ ಆರಂಭ]

ಇದಕ್ಕೂ ಮುನ್ನ ಅಂದರೆ ಜನವರಿ 1 ರಂದು ಅಳದಂಗಡಿ ಅರಮನೆಯ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದೊಂದಿಗೆ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ದೈವಜ್ಞ ಪಿ.ವೆಂಕಟ್ರಮಣ ಭಟ್ ಮಾಡಾವು ಮತ್ತು ದೈವಜ್ಞ ಕೇಶವ ಆಚಾರ್ಯ ಇವರಿಂದ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ನಡೆದಿತ್ತು.

temple
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+