ಕೊಡಗು, ಕೇರಳ ಸಂತ್ರಸ್ತರಿಗಾಗಿ ಮಿಡಿದ ಕಡಲ ತಡಿಯ ಹೃದಯ
Recommended Video

ಮಂಗಳೂರು, ಆಗಸ್ಟ್ 21: ಕೊಡಗು ಹಾಗು ಕೇರಳದ ಜನರು ಜಲಪ್ರಳಯಕ್ಕೆ ತುತ್ತಾಗಿ ಮನೆ, ಆಸ್ತಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇದೀಗ ಕಷ್ಟದಲ್ಲಿರುವ ಸಂತ್ರಸ್ತರ ನೆರವಿಗೆ ಕಡಲ ತಡಿಯ ಜನರು ಮುಂದಾಗಿದ್ದಾರೆ. ಉದಾರ ನೆರವು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ .
ಕರಾವಳಿಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗು ರಾಜಕೀಯ ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಮುಂದಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಮಂಗಳೂರು ಜನರು ಅಗತ್ಯ ವಸ್ತುಗಳು, ಆಹಾರ ಸಾಮಗ್ರಿಗಳು, ಹೊಸ ಬಟ್ಟೆ, ಪಾತ್ರೆ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಕೊಡುಗೆಯನ್ನು ನೀಡುತ್ತಿದ್ದಾರೆ.
ಕುಡಿಯುವ ನೀರು ಸೇರಿದಂತೆ ಅನಗತ್ಯ ವಸ್ತುಗಳನ್ನು ಮಂಗಳೂರಿನಿಂದ ರವಾನಿಸಲಾಯಿತು. ನವ ಮಂಗಳೂರು ಬಂದರಿನಿಂದ ಅಗತ್ಯ ವಸ್ತುಗಳನ್ನು ಕೋಸ್ಟ್ ಗಾರ್ಡ್ ನ ಎರಡು ಹಡಗು ಮತ್ತು ಮೂರು ವಿಮಾನದ ಮೂಲಕ ಪಕ್ಕದ ಕೇರಳಕ್ಕೆ ಸಾಗಿಸಲಾಗಿದೆ.

ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯದಿಂದ ವಿವಿಧ ಸಾಮಾಜಿಕ ಕಾರ್ಯಕರ್ತರು ಮತ್ತು ವೈಯಕ್ತಿಕವಾಗಿ ಕೆಲವು ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ. ಕೆಲವರು ವೈಯಕ್ತಿಕವಾಗಿ ಅಲ್ಲಿಗೆ ಭೇಟಿ ನೀಡಿ ತಮ್ಮಿಂದಾಗುವ ಸಹಾಯ ಮಾಡುತ್ತಿದ್ದಾರೆ.

ಕೇರಳ ಹಾಗೂ ಕೊಡಗಿನ ನೆರೆಪೀಡಿತರ ನೆರವಿಗೆ ಶ್ರೀ ಕಾಶೀಮಠ ಸಂಸ್ಥಾನ ಹಾಗು ಜಿ.ಎಸ್.ಬಿ ದೇವಾಲಯಗಳ ಒಕ್ಕೂಟ ಮುಂದಾಗಿದೆ. ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನ ವತಿಯಿಂದ ಕಾಶೀ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆದೇಶದ ಮೇರೆಗೆ ಕೇರಳ ಹಾಗೂ ಕೊಡಗಿನ ಪ್ರವಾಹಪೀಡಿತ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕೊಟ್ಟಿರುವುದಲ್ಲದೆ, ಧನ ಸಹಾಯ ಮಾಡಲಾಗಿದೆ.
ಇದೇ ರೀತಿ ಬೆಂಗಳೂರು ಕಾಶಿಮಠ, ಕೋಟ ಶ್ರೀ ಕಾಶಿ ಮಠದ ವತಿಯಿಂದಲೂ ಕಳುಹಿಸಲಾಗಿದೆ.

5 ಸಾವಿರ ಕೆಜಿ ಅಕ್ಕಿ , 1 ಸಾವಿರ ಧಾನ್ಯ ಹಾಗು ಬೇಳೆ ಕಾಳುಗಳು, 4೦೦ ಕೆಜಿ ಚಹಾ, ಕಾಫಿ ಪುಡಿ, 750 ಕೆಜಿ ಸಕ್ಕರೆ, 20 ಸಾವಿರ ದಿನನಿತ್ಯ ಉಪಯೋಗಿಸುವ ಸಾಮಗ್ರಿ, 25,500 ಹೊಸ ಬಟ್ಟೆಗಳನ್ನು ನೆರೆ ಸಂತ್ರಸ್ತರಿಗಾಗಿ ಕೊಚ್ಚಿಯ ತಿರುಮಲ ವೆಂಕಟರಮಣ ದೇವಳಕ್ಕೆ ಕಳುಹಿಸಲಾಗಿದೆ.












Click it and Unblock the Notifications