ಬಿಸಿ ರೋಡ್‌ನಲ್ಲಿ ಹಸಿರು ಧ್ವಜ ರ‍್ಯಾಲಿ: ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಮತ್ತೆ ಕೆಣಕಿದ ಕಿಡಿಗೇಡಿಗಳು
ಮಂಗಳೂರು ಸೆಪ್ಟೆಂಬರ್ 16: ಈದ್ ಮಿಲಾದ್ ಮೆರವಣಿಗೆ ತಡೆಯುವಂತೆ ಮುಸ್ಲಿಂ ಮುಖಂಡನ ಹೆಸರಿನಲ್ಲಿ ಸವಾಲು ಹಾಕಿದ್ದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಇದಕ್ಕೆ ಪ್ರತಿಯಾಗಿ ಸೋಮವಾರ ಬಿಸಿ ರೋಡ್ ಚಲೋಗೆ ಬಜರಂಗದಳ ಕರೆ ನೀಡಿತ್ತು. ಉದ್ವಿಗ್ನಗೊಂಡಿದ್ದ ಪ್ರತಿಭಟನಾಕಾರರನ್ನು ಶಾಂತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಮಂಗಳೂರಿನ ಬಿಸಿ ರೋಡ್‌ನಲ್ಲಿ ಹಸಿರು ಧ್ವಜ ಹಿಡಿದು ರ‍್ಯಾಲಿ ಮಾಡಿರುವುದು ಮತ್ತಷ್ಟು ಕಿಡಿಯನ್ನು ಹೊತ್ತಿಸಿದೆ.
ಹೌದು... ಮುಸ್ಲಿಂ ಮತ್ತು ಹಿಂದೂ ನಾಯಕರ ಪ್ರಚೋದನಾಕಾರಿ ಹೇಳಿಕೆಗಳಿಂದ ಮತ್ತು ನಡೆಗಳಿಂದ ಉದ್ವಿಗ್ನಗೊಂಡಿದ್ದ ಪ್ರತಿಭಟನಾಕಾರರನ್ನು ಬಿಸಿ ರೋಡ್‌ನಲ್ಲಿ ಪೊಲೀಸರು ಶಾಂತಗೊಳಿಸಿದ್ದರು. ಆದರೆ ಅವರನ್ನು ಶಾಂತಗೊಳಿಸಿ ವಾಪಸ್ಸು ಕಳುಹಿಸುತ್ತಿರುವಾಗ ಇತ್ತ ಕಿಡಿಗೇಡಿಗಳು ಹಸಿರು ಧ್ವಜ ಹಿಡಿದು ರ‍್ಯಾಲಿ ಮಾಡಿದ್ದಾರೆ. ಇದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಮತ್ತೆ ಪರಿಸ್ಥಿತಿ ಹದಗೆಟ್ಟಿದೆ.

ನಮಗೆ ಮೆರವಣಿಗೆಗೆ ಅವಕಾಶ ನೀಡಲಿಲ್ಲ. ಆದರೆ ಮುಸ್ಲಿಂರಿಗೆ ಯಾಕೆ ಅವಕಾಶ ನೀಡಲಾಗಿದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ನಾವು ಸಂಜೆವರೆಗೂ ಇಲ್ಲಿಂದ ಹೋಗುವುದಿಲ್ಲ. ಮುಸ್ಲಿಂಮರಿಗೆ ಬೈಕ್ ರ‍್ಯಾಲಿಗೆ ಅವಕಾಶ ನೀಡಿದಂತೆ ನಮಗೂ ಅವಕಾಶ ನೀಡಿ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಕೆಲ ಕಿಡಿಗೇಡಿಗಳು ಶಾಂತವಾಗಿದ್ದ ವಾತಾವರಣವನ್ನು ಮತ್ತೆ ಹದಗೆಡಿಸಿದ್ದಾರೆ. ಬೈಕ್‌ನಲ್ಲಿ ಬಂದ ಗುಂಪೊಂದು ಹಸಿರು ಬಾವುಟ ಹಿಡಿದು ಹಾರ್ನ್ ಮಾಡುತ್ತಾ, ಜೋರಾಗಿ ಎಕ್ಸಲೇಟರ್ ಕೊಟ್ಟು ಹಿಂದೂ ಕಾರ್ಯಕರ್ತರನ್ನು ಕೆಣಕಿಸಿದ್ದಾರೆ. ಇದರಿಂದ ಶಾಂತವಾಗಿದ್ದ ವಾತಾವರಣ ಮತ್ತೆ ಹಾಳಾಗಿದೆ. ಕೋಪಗೊಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಪ್ರತಿಭಟನೆಗೆ ಕಾರಣವೇನು?
ನಾಗಮಂಗಲದಲ್ಲಿ ಗಣೇಶ ಮೆರವಣಿಗೆಯಲ್ಲಿ ಗಲಭೆ ನಡೆದ ಹಿನ್ನೆಲೆಯಲ್ಲಿ ಈದ್ ಮೆರವಣಿಗೆ ಮೇಲೆ ದಾಳಿ ನಡೆದರೆ ಏನಾಗುತ್ತದೆ ಎಂಬರ್ಥದ ಎಚ್ಚರಿಕೆಯನ್ನು ಶರಣ್ ಪಂಪ್‌ವೆಲ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಮುಖಂಡನ ಹೆಸರಿನಲ್ಲಿ ಆಡಿಯೋ ಹರಿಬಿಡಲಾಗಿದ್ದು, ತಾಕತ್ತಿದ್ದರೆ ಬಿಸಿ ರೋಡ್್ನಲ್ಲಿ ಈದ್ ಮೆರವಣಿಗೆ ತಡೆಯುವಂತೆ ಸವಾಲು ಹಾಕಲಾಗಿತ್ತು. ಹೀಗಾಗಿ ಇಂದು ಬಿಸಿ ರೋಡ್ ಚಲೋಗೆ ಬಜರಂಗದಳ ಕರೆ ನೀಡಿದೆ.
ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ವಿಶ್ವ ಹಿಂದು ಪರಿಷತ್ತಿನ ರಾಜ್ಯ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರಿಗೆ ಬಿಸಿ ರೋಡಿಗೆ ಬನ್ನಿ ಎಂದು ಆಡಿಯೋ ಸಂದೇಶ ಹಾಕಿದ ವಿಚಾರದ ನಂತರ ನಡೆದ ಬೆಳವಣಿಗೆಯಲ್ಲಿ ಸೋಮವಾರ ಬೆಳಗ್ಗೆ ಹಿಂದೂ ಸಂಘಟನೆಗಳು ಬಿಸಿ ರೋಡ್ ಚಲೋಗೆ ಕರೆ ನೀಡಿದ್ದರು. ಇದರಲ್ಲಿ ಸ್ವತ: ಶರಣ್ ಪಂಪ್‌ವೆಲ್ ಅವರೇ ಬಿಸಿ ರೋಡಿಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣ್ ಪಂಪ್‌ವೆಲ್, ಇವರ ಸವಾಲು ನಮಗೆ ಹೊಸದಲ್ಲ. ಆದರೆ ಮೊನ್ನ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಹೋಗುವ ಸಂದರ್ಭ ಅಲ್ಲಿ ಕಲ್ಲು ತೂರಾಟ ಮಾಡಿದ್ದಾರೆ, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ, ಚಪ್ಪಲಿ ಹಾರ ಹಾಕಿದ್ದಾರೆ, ಅಷ್ಟೇ ಅಲ್ಲದೆ ಗಣೇಶನ ಭಕ್ತರ ಮೇಲೆಹಲ್ಲೆ ಮಾಡಿದ್ದಾರೆ. ಇದನ್ನು ವಿರೋಧಿಸಿದ್ದು ತಪ್ಪಾ? ನಾವು ಪ್ರತಿಭಟನೆ ಮಾಡುವ ವೇಳೆ ಒಂದು ಮಾತು ಹೇಳಿದೆ. ಗಣೇಶೋತ್ಸವವನ್ನು ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬದುಕಲಿ ಎಂಬುದು ಕಲ್ಪನೆ. ನಾವು ಯಾವುತ್ತೂ ಗಣೇಶೋತ್ಸವ ಮುಖಾಂತರ ಇನ್ನೊಬ್ಬರಿಗೆ ತೊಂದರೆ ಕೊಟ್ಟಿಲ್ಲ. ಆದರೆ ನಾವು ಮಾಡುವ ಗಣೇಶೋತ್ಸವಕ್ಕೆ ನೀವು ತೊಂದರೆ ಕೊಟ್ರಿ. ಒಮದು ವೇಳೆ ನಿಮ್ಮದೇ ಕಾರ್ಯಕ್ರಮ ರಸ್ತೆಯಲ್ಲಿ ಹೋಗುವಾಗ ಹಿಂದು ಸಮಾಜ ನಿಲ್ಲಿಸಿದರೆ ಏನಾಗಬಹುದು ಎಂದು ಪ್ರಶ್ನೆ ಮಾಡಿದ್ದೆ. ಆ ಪ್ರಶ್ನೆ ಮಾಡಿದ್ದು ತಪ್ಪಾ ಎಂದು ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ಇವರು ತಾಕತ್ತಿದ್ದರೆ ಮೆರವಣಿಗೆ ತಡೆಯಿರಿ ಎಂದು ಸವಾಲು ಹಾಕಿದ್ದಾರೆ. ನಾವು ಯಾರ ತಂಟೆಗೂ ಹೋಗುವವರಲ್ಲ. ಆದರು ಅವರು ನಮ್ಮನ್ನು ಕೆಣಕಿದ್ದಾರೆ. ಅವರು ಹಾಕಿದ ಸವಾಲಿಗೆ ನಾವು ಇವತ್ತು ಸಾವಿರಾರು ಜನ ಸೇರಿದ್ದೇವೆ. ಈ ಸವಾಲುಗಳು ಮುಂದುಂದು ದಿನ ಬರಬಹುದು ಅದಕ್ಕೆ ನಾವು ತಯಾರಿರಬೇಕು ಎಂದರು.
ಕೆಲ ಕಾಲ ಪರಿಸ್ಥಿಯನ್ನು ನಿಭಾಯಿಸುವಲ್ಲಿ ಪೊಲೀಸರು ಸಾಕಷ್ಟು ಹರಸಾಹಸ ಪಡಬೇಕಾಯಿತು. ಆದರೆ ಕೊಂಚ ಸಮಯದ ಬಳಿಕ ಪ್ರತಿಭಟನಾಕಾರರನ್ನು ತಡೆದು ಪೊಲೀಸರು ಶಾಂತಗೊಳಸಿವಲ್ಲಿ ಯಶಸ್ವಿಯಾಗಿದ್ದರು. ಇದೇ ವೇಳೆ ಕೆಲ ಕಿಡಿಗೇಡಿಗಳ ಗುಂಪು ಹಸಿರು ಧ್ವಜ ಹಿಡಿದು ಹಾರ್ನ್ ಮಾಡುತ್ತಾ, ರೇಸ್ ಕೊಡುತ್ತಾ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕೆಣಕಿಸಿದೆ. ಇದರಿಂದಾಗಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಾಗಿದೆ.












Click it and Unblock the Notifications