ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ ಮೇಲೆ ದಾಳಿ, 11 ಯುವತಿಯರ ರಕ್ಷಣೆ

ಮಂಗಳೂರು, ಆಗಸ್ಟ್ 31: ಮಂಗಳೂರಿನ ಎರಡು ಮಸಾಜ್ ಪಾರ್ಲರ್ ಗಳ ಮೇಲೆ ಬುಧವಾರ ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ 11 ಮಂದಿ ಯುವತಿಯರನ್ನು ರಕ್ಷಿಸಲಾಗಿದ್ದು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ .

ನಗರದ ಶಿವಬಾಗ್ ನ ಇಂಡಿಯನ್ ಸ್ಯಾಂಡಲ್ ಎಂಬ ಆಯುರ್ವೇದಿಕ್ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮಸಾಜ್ ಪಾರ್ಲರ್ ನಲ್ಲಿದ್ದ 5 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.

Raid on 2 massage parlours 11 girls rescued

ಮಸಾಜ್ ಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ . ಬಂಧಿತರನ್ನು ಮಸಾಜ್ ಪಾರ್ಲರ್ ಮಾಲೀಕ ಪ್ರದೀಪ್ ತೊಕ್ಕೊಟ್ಟು, ರೇಷ್ಮಾ ,ಅಭಿಷೇಕ್ ಮುಳಿಹಿತ್ಲು , ಚಂದ್ರನಾಥ್ ಬೊಕ್ಕಾಪಟ್ನ ಎಂದು ಗುರುತಿಸಲಾಗಿದೆ . ಬಂಧಿತರಿಂದ 1500 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ .

ನಗರದ ಕೆ.ಎಸ್ .ರಾವ್ ರಸ್ತೆಯಲ್ಲಿರುವ ಸಂಜೀವಿನಿ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರ ತಂಡ ಅಲ್ಲಿದ್ದ 6 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ . ಥೆರಪಿ ಕ್ಲಿನಿಕ್ ನ ಮಾಲೀಕ ಹರೀಶ್ ಶೆಟ್ಟಿ ,ವೀಣಾ ,ರವಿ ಎಂಬುವರನ್ನು ಬಂಧಿಸಲಾಗಿದೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+