ಮಂಗಳೂರಿನಲ್ಲಿ ಆರ್ ಎಎಫ್ ಘಟಕ ಸ್ಥಾಪನೆ: ಗಲಭೆಕೋರರಿಗೆ ನಡುಕ ಶುರು
ಮಂಗಳೂರು, ಅಕ್ಟೋಬರ್. 09: ಕೋಮು ಘರ್ಷಣೆ, ಗಲಭೆಗಳಿಂದ ದೇಶದಲ್ಲಿ ಕುಖ್ಯಾತಿ ಗಳಿಸಿರುವ ಮಂಗಳೂರಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಆರ್ ಎಎಫ್ ತುಕಡಿಯನ್ನು ಖಾಯಂ ಆಗಿ ನಿಯೋಜನೆಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.
ದೇಶದಲ್ಲಿರುವ ಒಟ್ಟು 10 ಆರ್‌ಎಎಫ್ ತುಕಡಿಗಳನ್ನು ಕೇಂದ್ರವಾಗಿರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗ ಮತ್ತೆ 5 ಹೊಸ ಬೆಟಾಲಿಯನ್ ಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕಳೆದ ಜನವರಿಯಲ್ಲೇ 5 ಆರ್‌ಎಎಫ್ ಘಟಕವನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಈಗ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ.
ಉತ್ತರಪ್ರದೇಶದ ವಾರಾಣಸಿ, ರಾಜಸ್ಥಾನದ ಜೈಪುರ, ಬಿಹಾರ ಹಾಜಿಪುರ ಹರಿಯಾಣದ ನುಹ್ ಸೇರಿದಂತೆ ಕರ್ನಾಟಕದ ಮಂಗಳೂರಿನಲ್ಲಿ ಹೊಸ ಆರ್‌ಎಎಫ್ ಘಟಕ ಪ್ರಾರಂಭಿಸಲು ಕೇಂದ್ರ ತೀರ್ಮಾನಿಸಿದೆ.
ಈಗಾಗಲೇ ದೇಶದ ಹೈದರಾಬಾದ್, ಅಹಮದಾಬಾದ್, ಅಲಹಾಬಾದ್, ಮುಂಬೈ, ದೆಹಲಿ, ಆಲಿಘರ್, ಕೊಯಮತ್ತೂರ್, ಜಮ್ಶೆಡ್ ಪುರ್, ಭೋಪಾಲ್ ಹಾಗೂ ಮೀರತ್ ನಲ್ಲಿ ಆರ್‌ಎಎಫ್ ಪಡೆ ಕಾರ್ಯಾಚರಣೆ ನಡೆಸುತ್ತಿವೆ.

ಕಠಿಣ ತರಬೇತಿ ಪಡೆದ ಯೋಧರು
ದೇಶದಲ್ಲಿ ಎಲ್ಲೇ ಗಲಭೆ, ಕೋಮು ಘರ್ಷಣೆಯಾದರೂ ಆರ್ ಎಎಫ್ ಪಡೆಯ ಸಿಬ್ಬಂದಿಗಳು ಈ ಕೇಂದ್ರಗಳಿಂದಲೇ ನಿಗದಿತ ಸ್ಥಳಕ್ಕೆ ತಲುಪ ಬೇಕಾಗಿತ್ತು. ಪ್ರತಿ ಆರ್ ಎಎಫ್ ಘಟಕದಲ್ಲಿ 1 ಸಾವಿರ ಆರ್ ಎಎಫ್ ನ ಅತ್ಯಂತ ಕಠಿಣ ತರಬೇತಿ ಪಡೆದ ಯೋಧರಿರುತ್ತಾರೆ .

ಆರ್ ಎಎಫ್ ಘಟಕಗಳು ಆರಂಭ
ಇವರ ಬಳಿ ಗಲಭೆ ನಿಯಂತ್ರಣಕ್ಕೆ ಬಳಸಲಾಗುವ ಪಂಪ್ ಆಕ್ಷನ್ ಗನ್, ಟಿಯರ್ ಗ್ಯಾಸ್ ಶೆಲ್ ಸಿಡಿಸುವ ಗ್ರೆನೆಡ್ ಲಾಂಚರ್ ಸೇರಿದಂತೆ ಗಲಭೆ ನಿಯಂತ್ರಣಕ್ಕೆ ಬೇಕಾಗುವ ಎಲ್ಲಾ ಆಯುಧಗಳಿರುತ್ತವೆ .
ಆದರೆ ಈ ಪಡೆ ದೇಶದ ನಾನಾ ಭಾಗಗಳಿಗೆ ಸೂಕ್ತ ಸಮಯದಲ್ಲಿ ತಲುಪಲಾಗದ ಕಾರಣ ಗಲಭೆ ಪೀಡಿತ ಪ್ರದೇಶದಲ್ಲಿ ಸಾವು ನೋವು ಮತ್ತು ನಷ್ಟದ ಪ್ರಮಾಣ ಹೆಚ್ಚಾಗುತ್ತಿತ್ತು. ಇದನ್ನು ಮನಗಂಡ ಕೇಂದ್ರ ಸರಕಾರ ಈಗ ಮತ್ತೆ ಹೆಚ್ಚುವರಿ 5 ನೂತನ ಆರ್ ಎ ಎಫ್ ಘಟಕ ಗಳನ್ನು ಆರಂಭಿಸಲು ನಿರ್ಧರಿಸಿದೆ.

ಸರ್ಕಾರಕ್ಕೆ ಪ್ರಸ್ತಾವನೆ
ಮಂಗಳೂರಿನಲ್ಲಿ ನಿಯೋಜನೆಗೊಳ್ಳಲಿರುವ ಈ ನೂತನ ಆರ್ ಎಎಫ್ ಘಟಕಕ್ಕೆ ಎಲ್ಲಿ ಸ್ಥಳಾವಕಾಶ ನೀಡಲಾಗುವುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆರ್‌ಎಎಫ್ ಸ್ಥಾಪನೆ ಸಂಬಂಧ ಈ ಹಿಂದೆ ಮಂಗಳೂರು ಹೊರವಲಯದ ಬಜಪೆ ಮತ್ತು ಪಾವೂರಿನಲ್ಲಿ ಜಾಗ ಗುರುತಿಸಿ 2 ವರ್ಷದ ಹಿಂದೆ ಸರ್ಕಾರ ಪ್ರಸ್ತಾವನೆ ಕಳುಹಿಸಲಾಗಿದೆ.

ಮಂಗಳೂರಿನಿಂದ ಶೀಘ್ರ ರವಾನೆ
ಮಂಗಳೂರಿನಲ್ಲಿ ಆರ್ ಎ ಎಫ್ ಘಟಕ ಸ್ಥಾಪನೆಯ ವಿಚಾರ ಗಲಭೆ ಕೋರರಲ್ಲಿ ನಡುಕ ಹುಟ್ಟಿಸಿದೆ. ಮಂಗಳೂರು ಸೇರಿದಂತೆ ರಾಜ್ಯದ ಯಾವ ಮೂಲೆಯಲ್ಲೂ ಘರ್ಷಣೆ ಸಂಭವಿಸಿದರೂ ಈ ಪಡೆ ಮಂಗಳೂರಿನಿಂದ ಶೀಘ್ರವಾಗಿ ರವಾನೆಯಾಗಲಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications