ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗಪಾತ್ರಿ ನಾಗರಾಜ್ ಭಟ್ ಗೆ ಪ್ರೊ.ನರೇಂದ್ರ ನಾಯಕ್ ಹಾಕಿದ ಸವಾಲೇನು?

|
Google Oneindia Kannada News

ಮಂಗಳೂರು, ನವೆಂಬರ್. 28: ಉಡುಪಿಯ ಹೆಬ್ರಿ ತಾಲೂಕಿನ ಮುದ್ರಾಡಿ ಎಂಬಲ್ಲಿ ಇತ್ತೀಚೆಗೆ ನಾಗ ಪವಾಡ ನಡೆಯಿತು. ಮಣ್ಣಲ್ಲಿ ಹುದುಗಿದ್ದ ಸಾವಿರಾರು ವರ್ಷ ಹಳೆಯ ನಾಗವಿಗ್ರಹವೊಂದು ಪವಾಡ ಸದೃಶವಾಗಿ ಪತ್ತೆಯಾಗಿದ್ದು, ಶಿವಮೊಗ್ಗದ ತೀರ್ಥಹಳ್ಳಿಯ ಆಧ್ಯಾತ್ಮಿಕ ಚಿಂತಕ ನಾಗಪಾತ್ರಿ ನಾಗರಾಜ್ ಭಟ್ ಹೇಳಿದ ನುಡಿ ಸತ್ಯವಾಗಿತ್ತು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ನಾಗ ಪವಾಡದ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ಪವಾಡ ನಡೆಸಿದ ನಾಗಪಾತ್ರಿ ನಾಗರಾಜ್ ಭಟ್ ಅವರಿಗೆ ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಸವಾಲು ಹಾಕಿದ್ದಾರೆ. ತಾವು ಒಡ್ಡುವ ಸವಾಲನ್ನು ನಾಗರಾಜ್ ಭಟ್ ಜಯಿಸಿದರೆ ತನ್ನ ಆಸ್ತಿಯನ್ನು ಸಂಪೂರ್ಣ ಅವರಿಗೆ ‌ನೀಡಿ, ಸಾಯುವವರೆಗೆ ಅವರ ಗುಲಾಮನಾಗುವೆ ಎಂದು ಘೋಷಿಸಿದ್ದಾರೆ.

ನಾಗಪಾತ್ರಿ ನಾಗರಾಜ್ ಭಟ್ ಮುದ್ರಾಡಿಯಲ್ಲಿ ಉದ್ಯಮಿ ಗಂಗಾಧರ ಶೆಟ್ಟಿ ಎಂಬುವವರ ಮನೆಯ ಒಳಗೆ ಅಗೆಸಿ ಸಾವಿರಾರು ವರ್ಷ ಹಳೆಯ ನಾಗನ ಮೂರ್ತಿಯನ್ನು ಹೊರತೆಗೆದು ಪವಾಡ ಸೃಷ್ಟಿಸಿದ್ದರು. ಅಷ್ಟೇ ಅಲ್ಲ, ಇದರ ಸತ್ಯಾಸತ್ಯತೆ ಬಗ್ಗೆ ಚರ್ಚೆ ಆರಂಭವಾದ ಬೆನ್ನಿಗೆ ಮಾಧ್ಯಮಗಳ ಮುಂದೆ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮಪಂಚಾಯ್ತಿಯ ಮರಗಳಲೆ ಗ್ರಾಮದ ವೆಂಕಟಪ್ಪ ಪೂಜಾರಿಯವರ ಮಗ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗರ ಬನದಲ್ಲಿ ನಾಗಬಿಂಬ ಮತ್ತು ತ್ರಿಶೂಲ ಹೊರತೆಗೆದಿದ್ದರು.

ಚರ್ಚೆಗೆ ಗ್ರಾಸವಾಗಿದ್ದ ಉಡುಪಿಯ ನಾಗ ಪವಾಡದ ಬಗ್ಗೆ ಸ್ಪಷ್ಟನೆ ಕೊಟ್ಟ ನಾಗರಾಜ್ ಭಟ್ಚರ್ಚೆಗೆ ಗ್ರಾಸವಾಗಿದ್ದ ಉಡುಪಿಯ ನಾಗ ಪವಾಡದ ಬಗ್ಗೆ ಸ್ಪಷ್ಟನೆ ಕೊಟ್ಟ ನಾಗರಾಜ್ ಭಟ್

ಈ ಹಿನ್ನೆಲೆಯಲ್ಲಿ ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಈಗ ನಾಗಪಾತ್ರಿ ನಾಗರಾಜ್ ಭಟ್ ಅವರಿಗೆ ಸವಾಲು ಹಾಕಿದ್ದಾರೆ. ಮುಂದೆ ಓದಿ...

ಯಾವ ಪೆಟ್ಟಿಗೆಯಲ್ಲಿ ನಾಗನ ಮೂರ್ತಿ ಇದೆ?

ಯಾವ ಪೆಟ್ಟಿಗೆಯಲ್ಲಿ ನಾಗನ ಮೂರ್ತಿ ಇದೆ?

ನಾಗರಾಜ್ ಭಟ್ ನೀಡುವ ನಾಗನ ಕಲ್ಲನ್ನು ಒಂದು ಪೆಟ್ಟಿಗೆಗೆ ಹಾಕಿ ಅದರಲ್ಲಿ ಮಣ್ಣು ತುಂಬಿ. ನಂತರ ಅಷ್ಟೇ ಭಾರವಿರುವ ಅಂತಹದ್ದೇ ಹತ್ತು ಪೆಟ್ಟಿಗೆ ಇಡಲಾಗುವುದು. ನಾಗನ ಮೂರ್ತಿ ಇರುವ ಪೆಟ್ಟಿಗೆಯಲ್ಲಿ ನಾಗನ ಮೂರ್ತಿಗೆ ಒಂದು ಕರೆನ್ಸಿ ನೋಟು ಅಂಟಿಸಲಾಗುವುದು. ಸವಾಲು ಸ್ವೀಕರಿಸಿದ ‌ಜ್ಯೋತಿಷಿ ಯಾವ ಪೆಟ್ಟಿಗೆಯಲ್ಲಿ ನಾಗನ ಮೂರ್ತಿ ಇದೆ ಎಂದು ಹೇಳಬೇಕು.

ಉಡುಪಿಯಲ್ಲಿ 'ಪವಾಡ' : ಸಾವಿರಾರು ವರ್ಷ ಹಳೆಯ ನಾಗರಕಲ್ಲು ಪತ್ತೆಉಡುಪಿಯಲ್ಲಿ 'ಪವಾಡ' : ಸಾವಿರಾರು ವರ್ಷ ಹಳೆಯ ನಾಗರಕಲ್ಲು ಪತ್ತೆ

ಕರೆನ್ಸಿ ಮೌಲ್ಯ ತಿಳಿಸಲಿ

ಕರೆನ್ಸಿ ಮೌಲ್ಯ ತಿಳಿಸಲಿ

ಜ್ಯೋತಿಷಿಗೆ ಭೂಮಿಯ ಒಳಗಿದ್ದ ನಾಗನ ಮೂರ್ತಿ ಹೇಗಿರುತ್ತದೆ ಎಂದು ಚಿತ್ರ ಬರೆಯುವಷ್ಟು ತಿಳಿದಿರುವುದರಿಂದ ನಾಗನ ಮೂರ್ತಿ ಇಡಲಾದ ಪೆಟ್ಟಿಗೆಯಲ್ಲಿರುವ ಕರೆನ್ಸಿ ಯಾವ ದೇಶದ್ದು, ಅದರ ಮೌಲ್ಯ ಎಷ್ಟು ಮತ್ತು ಅದರ ಸೀರಿಯಲ್ ನಂಬರ್ ಏನು ಎಂಬುದನ್ನು ತಿಳಿಸಬೇಕು.

30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್

ಆಸ್ತಿಯನ್ನು ಕೊಡುತ್ತೇನೆ

ಆಸ್ತಿಯನ್ನು ಕೊಡುತ್ತೇನೆ

ಜ್ಯೋತಿಷಿ ಅವರು ಇದನ್ನು ಮಾಡಲು ಸಾಧ್ಯವಾದರೆ ತನ್ನ ಆಸ್ತಿಯನ್ನು ಪೂರ್ತಿ ಅವರಿಗೆ ಕೊಡುತ್ತೇನೆ ಎಂದು ನರೇಂದ್ರ ನಾಯಕ್ ಸವಾಲು ಹಾಕಿದ್ದಾರೆ.

ಈ ಕೆಲಸವನ್ನು ಬಿಡಬೇಕು

ಈ ಕೆಲಸವನ್ನು ಬಿಡಬೇಕು

ಒಂದು ವೇಳೆ ನಾಗರಾಜ್ ಭಟ್ ಇದರಲ್ಲಿ ವಿಫಲರಾದರೆ ಅವರು ನಾನು ಹೇಳಿದ್ದೆಲ್ಲ ಸುಳ್ಳು ಎಂದು ಘೋಷಿಸಿ ಈ ಕೆಲಸವನ್ನು ಬಿಡಬೇಕು ಎಂದು ಹೇಳಿದ್ದಾರೆ.

English summary
Famous Rationalist Prof . Narendra Nayak challenged Naga Pathri Nagaraj Bhat on Naga Miracle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X