ನಿರ್ದೇಶಕ ಸಂತೋಷ್ ಶೆಟ್ಟಿ ಸಾವು: ನಾಲ್ವರ ವಿರುದ್ಧ ಪ್ರಕರಣ
ಮಂಗಳೂರು, ಮೇ 30: ಇಂದು ಬೆಳಿಗ್ಗೆ ದಕ್ಷಿಣ ಕನ್ನಡದ ಬೆಳ್ತಂಗಡಿ ಬಳಿಯ ಎರ್ಮಾಯಿ ಜಲಪಾತಕ್ಕೆ ಬಿದ್ದು ನಿರ್ದೇಶಕ ಸಂತೋಶ್ ಅಸುನೀಗಿದ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಅವರೊಂದಿಗೆ ನಾಲ್ವರು ಸ್ನೇಹಿತರ ತಂಡ ಫೋಟೋಶೂಟ್ ಗಾಗಿ ಎರ್ಮಾಲಿ ಫಾಲ್ಸ್‌ಗೆ ತೆರಳಿದ್ದರು, ಅಲ್ಲಿ ಆಯ ತಪ್ಪಿ ಪ್ರಪಾತಕ್ಕೆ ಬಿದ್ದು ಅವರು ಅಸುನೀಗಿದ್ದರು.
ಸೂಕ್ತ ಅನುಮತಿ ಪಡೆಯದೇ ಫೋಟೊಶೂಟ್‌ಗೆ ತೆರಳಿದ್ದ ಕಾರಣ ಸಂತೋಶ್ ಅವರ ನಾಲ್ವರು ಸ್ನೇಹಿತರ ಮೇಲೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಂತೋಶ್ ಸೇರಿ ನಾಲ್ವರು ತಮ್ಮ 'ಕನಸು' ಚಿತ್ರಕ್ಕಾಗಿ ಫೋಟೊಶೂಟ್‌ಗೆ ತೆರಳಿದ್ದರು. ಆ ವೇಳೆ ಜೋರು ಮಳೆ ಬಂದಿದೆ. ಆಗ ಕಾಲು ಜಾರಿ ಜಲಪಾತದ ಕೆಳಕ್ಕೆ ಸಂತೋಶ್ ಬಿದ್ದಿದ್ದಾರೆ.












Click it and Unblock the Notifications