ಜ.5 ರಂದು ಕೊಚ್ಚಿ-ಮಂಗಳೂರು GAIL ಪೈಪ್‌ಲೈನ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಮಂಗಳೂರು, ಡಿಸೆಂಬರ್ 24: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 5 ರಂದು ಕೊಚ್ಚಿ-ಮಂಗಳೂರು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಪೈಪ್‌ಲೈನ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ತಿಳಿಸಿದರು.
ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಕರೆ ಮಾಡಿ ವಿಷಯ ತಿಳಿಸಿದ್ದು, ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆಯನ್ನು ಪ್ರಾರಂಭಿಸಲು ಪ್ರಧಾನಿ ಒಪ್ಪಿಗೆ ಸೂಚಿಸಿರುವುದು ಸಂತೋಷದ ವಿಷಯ ಎಂದು ಸಿಎಂ ಪಿಣರಾಯಿ ವಿಜಯನ್ ಸುದ್ದಿಗಾರರಿಗೆ ತಿಳಿಸಿದರು.
ಜನವರಿ 5 ರಂದು ಕೊಚ್ಚಿ-ಮಂಗಳೂರು GAIL ಪೈಪ್‌ಲೈನ್ ಅನ್ನು ಅಧಿಕೃತವಾಗಿ ಉದ್ಘಾಟಿಸಲು ಪ್ರಧಾನಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದರು. ಎಂದಿಗೂ ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ನಂಬಲಾಗಿದ್ದ ಒಂದು ಯೋಜನೆ ಅಂತಿಮವಾಗಿ ಸಿದ್ಧವಾಗಿದೆ ಮತ್ತು ಪ್ರಧಾನಮಂತ್ರಿಯೇ ಅದನ್ನು ಉದ್ಘಾಟಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಸುಮಾರು 444 ಕಿ.ಮೀ ಉದ್ದದ ಪೈಪ್‌ಲೈನ್ ಅನ್ನು 2009 ರಲ್ಲಿ 2,915 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪ್ರಾರಂಭಿಸಲಾಯಿತು. ಮತ್ತು ಇದು 2014 ರಲ್ಲಿ ಕಾರ್ಯಾರಂಭ ಮಾಡಬೇಕಾಗಿತ್ತು. ಆದರೆ ಸುರಕ್ಷತೆ ಮತ್ತು ವಾಣಿಜ್ಯ ಆಧಾರದ ಮೇಲೆ ವಿರೋಧ. ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರಿಂದ ವಿರೋಧ ಹಾಗೂ ಭೂಮಿಯ ಬೆಲೆ ಮುಖ್ಯ ಅಡಚಣೆಯಾಗಿ, ಈ ಯೋಜನೆಯನ್ನು ನೇತುಹಾಕಲಾಗಿತ್ತು ಎಂದರು.
GAIL ಪೈಪ್‌ಲೈನ್ ಯೋಜನೆ ಕಾಮಗಾರಿ ವಿಳಂಬವಾಗಿದ್ದರಿಂದ, ಇದೀಗ ಇದರ ಯೋಜನಾ ದ್ವಿಗುಣಗೊಂಡಿದೆ. ಅಂದರೆ ಸುಮಾರು 5,750 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.












Click it and Unblock the Notifications