ತುಳುನಾಡು ಛಾಯಾಚಿತ್ರ ಸ್ಪರ್ಧೆಗೆ ಫೋಟೋ ಕಳಿಸಿ
ಮಂಗಳೂರು, ಡಿ. 4: ತುಳುನಾಡು ಛಾಯಾಚಿತ್ರ ಸ್ಪರ್ಧೆಗೆ ಫೋಟೋ ಕಳುಹಿಸಿ ಕೊಡಲು ಡಿಸೆಂಬರ್ 8ನೇ ಕೊನೆ ದಿನ ಎಂದು ತುಳುನಾಡು ಛಾಯಾಚಿತ್ರ ಸ್ಪರ್ಧೆ ಸಂಚಾಲಕ ವಸಂತ ಕೇದಿಗೆ ತಿಳಿಸಿದ್ದಾರೆ.
ತುಳುನಾಡಿನ ಸಂಸ್ಕೃತಿ, ಕೃಷಿ, ಪ್ರವಾಸೋದ್ಯಮ, ಧಾರ್ಮಿಕ, ಕ್ರೀಡೆ ಮುಂತಾದ ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ಆನ್ ಲೈನ್ ಮುಖಾಂತರ ಛಾಯಾಚಿತ್ರ ಕಳುಹಿಸಿ ಕೊಡಬಹುದಾಗಿದೆ.[ವಿಶ್ವತುಳು ಪರ್ಬಕ್ಕೆ 50 ಲಕ್ಷ ಅನುದಾನ]

ಡಿಸೆಂಬರ್ 10ರಂದು ಛಾಯಾಚಿತ್ರ ಸ್ಪರ್ಧೆಯ ವಿಜೇತರ ಪಟ್ಟಿ ಮತ್ತು ಛಾಯಾಚಿತ್ರಗಳನ್ನು ಸಹ್ಯಾದ್ರಿ ಆವರಣದಲ್ಲಿ ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 12 ರಂದು ಸಂಜೆ 7 ಕ್ಕೆ ನಮ್ಮ ತುಳುನಾಡು ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಎ.ಈಶ್ವರಯ್ಯ ನೆರವೇರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ pixel12life.in ಅಂತರ್ಜಾಲ ತಾಣ ಅಥವಾ ವಸಂತ ಕೇದಿಗೆ ನಿರ್ವಹಣಾ ಕಾರ್ಯದರ್ಶಿ ದೂರವಾಣಿ : 9448262204 ಇಮೇಲ್ : [email protected] ಇವರನ್ನು ಸಂಪರ್ಕಿಸಬಹುದು.












Click it and Unblock the Notifications