ಮಂಗಳೂರು: ಮಾಲಿನ್ಯದಿಂದ ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿದ ಫಲ್ಗುಣಿ
ಮಂಗಳೂರು, ಮೇ 30: ಗುರುಪುರದ ಮಲವೂರು ಅಣೆಕಟ್ಟೆಯ ಬಳಿ ಹರಿಯುವ ಫಲ್ಗುಣಿ ನದಿ ನೀರು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿದೆ. ಆದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾತ್ರ ಇನ್ನೂ ಮಾಲಿನ್ಯಕ್ಕೆ ಕಾರಣ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ನದಿ ನೀರು ಮಲಿನವಾಗಲು ಕಾರಣ ಕಂಡುಕೊಳ್ಳಲು ಮಾಲಿನ್ಯ ಮಂಡಳಿ ಜೊತೆಗೂಡಿ ಸುರತ್ಕಲ್ ಎನ್‍ಐಟಿಕೆಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಜಿ ಶ್ರೀನಿಕೇತನ್ ಕೆಲಸಮಾಡುತ್ತಿದ್ದಾರೆ. ಅವರು, ಫೇಕಲ್ ಕಾಲಿಫಾರ್ಮ್ ಕಾರಣದಿಂದ ನದಿ ನೀರು ಮಾಲಿನ್ಯ ಆಗಿರುವ ಸಾಧ್ಯತೆಯಿದೆ ಎಂದಿದ್ದಾರೆ.[ಮೂಲ್ಕಿಯಲ್ಲೊಬ್ಬರು ಅಮೆರಿಕಾದಿಂದ ಬಂದ 'ಸರ್ಫಿಂಗ್ ಸ್ವಾಮಿ']

ಸಂಸ್ಕರಿಸದೆ ಕೊಳಚೆ ನೀರನ್ನು ಧೀರ್ಘ ಸಮಯದಿಂದ ನದಿಗೆ ಬಿಟ್ಟಿರುವ ಕಾರಣ ಬೇಸಗೆಯಲ್ಲಿ ಸ್ಥಿರವಾಗಿ ನಿಲ್ಲುವ ಅಣೆಕಟ್ಟೆಯ ನೀರು ಮಲಿನವಾಗಿರಬಹುದು,' ಎಂದು ಅವರು ಹೇಳುತ್ತಾರೆ.
ಅಣೆಕಟ್ಟೆಯ ಗೇಟುಗಳು ಮುಚ್ಚಿರುವ ಕಾರಣ ತಾಜಾ ನೀರು ಹರಿಯಲು ಅವಕಾಶವಿಲ್ಲದೆ ನೀರು ಕಲುಷಿತವಾಗಿರಬಹುದು. ಸರ್ಕಾರ ಮಾಡಿರುವ ಹೈಡ್ರೋಗ್ರಫಿ ಪರೀಕ್ಷೆ ನೀರು ಮಲಿನವಾಗಲು ಸ್ಪಷ್ಟ ಕಾರಣವನ್ನು ತಿಳಿಸಲಿದೆ' ಎಂದು ಶ್ರೀನಿಕೇತನ್ ಹೇಳಿದ್ದಾರೆ.
ಕೈಗಾರಿಕಾ ತ್ಯಾಜ್ಯದ ಪ್ರಭಾವವೂ ನದಿ ನೀರನ್ನು ಮಲಿನಗೊಳಿಸಿರುವ ಸಾಧ್ಯತೆಯಿದೆ ಎಂದೂ ಅವರು ಹೇಳಿದ್ದಾರೆ.[ಮಂಗಳೂರು: ಈಜಲು ತೆರಳಿದ ಬಾಲಕರಿಬ್ಬರು ನೀರುಪಾಲು]
ಮಾಲಿನ್ಯ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಪ್ರಕಾರ ಅಣೆಕಟ್ಟೆ ಬಳಿ ಕೆಳಹರಿಯುವ ನೀರಿನಲ್ಲಿ ಆಮ್ಲಜನಕದ ಪ್ರಮಾಣ 0.5 ಎಂಜಿಡಿ ಇದೆ. ಸಾಮಾನ್ಯವಾಗಿ ಜೀವರಾಶಿಗಳು ಬೆಳೆಯಲು ನೀರಿನಲ್ಲಿ ಕನಿಷ್ಠ 3.5 ಎಂಜಿಡಿ ಆಮ್ಲಜನಕ ಅಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಮಾಲಿನ್ಯ ಮಂಡಳಿ ಈಗ ಬೈಕಂಪಾಡಿಯ ಪ್ರತೀ ಉದ್ಯಮದ ತ್ಯಾಜ್ಯವನ್ನೂ ಪರಿಶೀಲಿಸುತ್ತಿದೆ. ಬೋಲೂರ್ ಮತ್ತು ಕುದ್ರೋಳಿಯಂತಹ ಹಲವು ಸ್ಥಳಗಳಲ್ಲಿ ಚರಂಡಿ ನೀರನ್ನು ಸಂಸ್ಕರಿಸದೆ ನದಿಗೆ ಬಿಡಲಾಗುತ್ತಿದೆ. ಮಹಾನಗರಪಾಲಿಕೆ ಸೇರಿದಂತೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಿದರೆ ಈ ಮಾಲಿನ್ಯ ಸಮಸ್ಯೆಯನ್ನು ತಡೆಯಬಹುದು ಎಂದು ಪುರಾಣಿಕ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications