ಮೂಲ್ಕಿಯಲ್ಲೊಬ್ಬರು ಅಮೆರಿಕಾದಿಂದ ಬಂದ 'ಸರ್ಫಿಂಗ್ ಸ್ವಾಮಿ'
ಮಂಗಳೂರು, ಮೇ 30: ನೀರಿನಲ್ಲಿ ಆಟ ಆಡುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲಾ ಮಕ್ಕಳಿಗೂ ಸಣ್ಣ ವಯಸ್ಸಿನಲ್ಲಿ ನೀರಿನಲ್ಲಿ ಆಟ ಆಡುವುದೆಂದರೆ ಪಂಚಪ್ರಾಣ. ಈ ಬಗ್ಗೆ ಪ್ರಪಂಚದಾದ್ಯಂತ ಆಟಗಳೂ ಇವೆ. ಇದರಲ್ಲಿ ಸರ್ಫಿಂಗ್ ಕೂಡಾ ಒಂದು. ಸರ್ಫಿಂಗ್ ಒಂದು ರೋಮಾಂಚಕಾರಿ ಜನಪ್ರಿಯ ಆಟ.
ಈ ಆಟಕ್ಕೆ ಮಂಗಳೂರಿನ ಮೂಲ್ಕಿಯಲ್ಲೊಬ್ಬರು "ಸರ್ಫಿಂಗ್ ಸ್ವಾಮಿ" ಅಂತಾನೇ ಖ್ಯಾತಿ ಹೊಂದಿದವರಿದ್ದಾರೆ. ಇವರು ಮೂಲತಃ ಅಮೆರಿಕಾದವರು. ಅವರ ಹೆಸರು ಜ್ಯಾಕ್ ಹೆಬ್ನಾರ್ ಅಂತ. ಅಮೇರಿಕಾದ ಜ್ಯಾಕ್ಸೋನ್ವಿಲ್ ಎಂಬ ಊರಿನವರು.[ದೇಶದ ಅತಿ ದೊಡ್ಡ ಸರ್ಫಿಂಗ್ ಸಾಹಸಕ್ಕೆ ಸಜ್ಜಾದ ಸಸ್ಲಿಹಿತ್ಲು]
ತಮ್ಮ ಎಳವೆಯಲ್ಲೇ ಸರ್ಫಿಂಗ್ ಕ್ರೀಡೆಯ ಬಗ್ಗೆ ಹುಚ್ಚು ಹತ್ತಿಸಿಕೊಂಡವರು ಜ್ಯಾಕ್. 1970ರ ಹೊತ್ತಿಗೆ ಭಾರತದ ಧಾರ್ಮಿಕತೆಯತ್ತ ಆಕರ್ಷಿತರಾಗಿ ಚೆನ್ನೈಗೆ ಬಂದರು.

'ಮಂತ್ರ' ಸರ್ಫಿಂಗ್ ಕ್ಲಬ್ನ ಸ್ಥಾಪಕರು
ಜ್ಯಾಕ್ ಹೇಳುವಂತೆ ಅವರಿಗೆ ಮೊದಲಿನಿಂದಲೂ ಪರಿಸರದತ್ತ ಹೆಚ್ಚು ಒಲವು. ಅದರಲ್ಲೂ ಕಡಲಬದಿಗೆ ಮುಕುಟದಂತಿರುವ ಬಾನೆತ್ತರದ ತೆಂಗಿನ ಮರಗಳೆಂದರೆ ಬಲು ಇಷ್ಟ. "ನಾನು ಚೆನ್ನೈನ ಕಡಲ ತೀರದಲ್ಲಿ ಸರ್ಫಿಂಗ್ ಕ್ರೀಡೆಯನ್ನು ಆಟವಾಡುತ್ತಾ ಸಮುದ್ರದಿಂದ ಮೇಲೆ ಬರುವಾಗ ಒಂದೇ ಒಂದು ತೆಂಗಿನ ಮರಗಳು ನನ್ನನ್ನು ಸ್ವಾಗತಿಸುತ್ತಿರಲಿಲ್ಲ. ಆದ್ದರಿಂದ ಕಡಲ ಬದಿಯಲ್ಲಿ ತೆಂಗಿನ ಮರಗಳಿರುವ ಹೊಸ ಜಾಗ ಹುಡುಕುವಾಗ ಸಿಕ್ಕಿದ್ದೇ ಮೂಲ್ಕಿ ಎಂಬ ಊರು. 70ರ ದಶಕದಲ್ಲಿ ಭಾರತದಲ್ಲಿ ಸರ್ಫಿಂಗ್ ಕ್ರೀಡೆ ಹೆಚ್ಚು ಪ್ರಸಿದ್ದಿಯಾಗಿರಲಿಲ್ಲ. ಅದೇ ಹೊತ್ತಿಗೆ ಈ ಕ್ರೀಡೆಯ ಬಗ್ಗೆ ತಿಳುವಳಿಕೆ ಮತ್ತು ತರಬೇತಿ ನೀಡುವ ದೃಷ್ಟಿಯಿಂದ 'ಮಂತ್ರ' ಎಂಬ ಸರ್ಫಿಂಗ್ ಕ್ಲಬ್ ತೆರೆದೆ," ಎನ್ನುತ್ತಾರೆ ಜ್ಯಾಕ್ ಹೆಬ್ನಾರ್.

ಬಿಕೋ ಎನ್ನುತ್ತಿದ್ದ ಕ್ಲಬ್
ಆರಮಭದಲ್ಲಿ ತಾನು 'ಮಂತ್ರ' ಕ್ಲಬ್ ತೆರೆದು ಹಲವು ವರ್ಷಗಳವರೆಗೆ ಯಾರೂ ನನ್ನತ್ತ ಸುಳಿಯಲಿಲ್ಲ. ನಂತರ ಈ ಬಗ್ಗೆ ತಾನೇ ಶಾಲಾ-ಕಾಲೇಜುಗಳಿಗೆ ಹೋಗಿ ಈ ಆಟದ ಬಗ್ಗೆ ಜಾಗೃತಿ ಮೂಡಿಸಿದೆ. ಅಷ್ಟಾದರೂ ಯಾವುದೇ ಮಕ್ಕಳನ್ನು ಈ ಕ್ರೀಡೆಗೆ ಕಳುಹಿಸುತ್ತಿರಲಿಲ್ಲ. ಕಾಲಕ್ರಮೇಣ ಅಲ್ಲೊಬ್ಬರು ಇಲ್ಲೊಬ್ಬರು ಇದರತ್ತ ಆಕರ್ಷಿತಾದರು.[ಇಂಡಿಯನ್ ಓಪನ್ ಸರ್ಫಿಂಗ್: 2ನೇ ದಿನ ಚೆನ್ನೈ ಸರ್ಫರ್ ಗಳ ಪಾರಮ್ಯ]
ಈಗಾಗಲೇ ಈ ಕ್ಲಬ್ಗೆ ಮಂಗಳೂರು ಮತ್ತು ಮೈಸೂರಿನಿಂದ ಸದಸ್ಯರಿದ್ದಾರೆ. ಕಳೆದ ವರ್ಷ ಬೆಂಗಳೂರು, ಮುಂಬೈ, ಪುಣೆಯಿಂದ 1000 ವಿದ್ಯಾರ್ಥಿಗಳು ಸರ್ಫಿಂಗ್ ತರಬೇತಿಗಾಗಿ ಬಂದಿದ್ದರು ಎನ್ನುತ್ತಾರೆ ಜ್ಯಾಕ್.

ಒಂದು ಧಾರ್ಮಿಕ ಅನುಭವ
ಹೆಬ್ನರ್ ಪ್ರಕಾರ ಸರ್ಫಿಂಗ್ ಎನ್ನುವುದು ಒಂದು ಧಾರ್ಮಿಕ ಅನುಭವ. ಹಣಕ್ಕಾಗಿ ಅದನ್ನು ಮಾಡಿದರೆ ಅದರಿಂದ ಪ್ರೇರಣೆ ಸಿಗದು. ನನ್ನ ಗುರುಗಳೂ ಸಹ ಇದೊಂದು ಧಾರ್ಮಿಕ ಅನುಭವ ಎಂದು ತಿಳಿಸಿಕೊಟ್ಟಿದ್ದಾರೆ. ಆದ್ದರಿಂದ ಇಲ್ಲಿನ ಸ್ಥಳೀಯ ಮಕ್ಕಳಿಗೆ ಇದರ ಬಗ್ಗೆ ಹೇಳಿಕೊಡುತ್ತಿದ್ದೇನೆ.
ಜ್ಯಾಕ್ ಹೆಬ್ನಾರ್ಗೆ ಸರ್ಫಿಂಗ್ ಸ್ವಾಮಿ ಅಂತ ಹೆಸರು ಕೊಟ್ಟಿರುವುದೇ ಇಲ್ಲಿನ ಜನ. ಸರ್ಫಿಂಗ್ನಲ್ಲಿ ಹೆಚ್ಚು ಪರಿಣಿತಿ ಹೊಂದಿದ ಮತ್ತು ಅತ್ಯಂತ ಧಾರ್ಮಿಕ ಮನೋಭಾವದಿಂದ ಈ ಕ್ರೀಡೆಯನ್ನು ಪೂಜಿಸುತ್ತಿರುವುದರಿಂದ ಈ ಹೆಸರು ಬಂತು ಎನ್ನುತ್ತಾರೆ ಸ್ಥಳೀಯರೊಬ್ಬರು.[ಮಂಗ್ಳೂರಿನ ಫಲ್ಗುಣಿ ನದಿ ಬಳಿ ತಲೆಯೆತ್ತಲಿದೆ ಸಾಹಸ ಕ್ರೀಡೆಗಳ ತಾಣ]

ಸರ್ಫಿಂಗ್ಗೆ ಹೇಳಿ ಮಾಡಿಸಿದ ಜಾಗ
ವಿದೇಶಗಳಲ್ಲಿರುವಂತೆ ಭಾರತದಲ್ಲಿ ಸರ್ಫಿಂಗ್ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲ. ಭಾರತೀಯರು ರಜಾ ದಿನಗಳಲ್ಲಿ ಬೀಚ್ ಬದಿಗೆ ಹೋಗಿ ಕಾಲ ಕಳೆಯುತ್ತಾರೆ. ಈ ಪ್ರದೇಶದಲ್ಲಿ ಜನರೂ ಅತ್ಯಂತ ವಿರಳ ಹಾಗೂ ಶಾರ್ಕ್ನಂತಹ ದೈತ್ಯ ಮೀನುಗಳಿಲ್ಲದಿರುವುದರಿಂದ ಭಾರತ ಸರ್ಫಿಂಗ್ಗೆ ಹೇಳಿ ಮಾಡಿಸಿದ ಜಾಗ ಎನ್ನುತ್ತಾರೆ ಜ್ಯಾಕ್ ಹೆಬ್ನಾರ್

'ಮಂತ್ರ' ಕ್ಲಬ್ ಬಗ್ಗೆ ಒಂದಿಷ್ಟು
ಈ ಕ್ಲಬ್ ಹೋಮ್ ಸ್ಟೇ ಆಗಿ ನೋಂದಣಿಯಾಗಿದ್ದು, ಸರಕಾರಕ್ಕೆ ತೆರಿಗೆ ಕಟ್ಟುತ್ತಿದೆ. ಜೊತೆಗೆ ಪ್ರಮಾಣಿಕೃತ ತರಬೇತುದಾರರು ಇಲ್ಲಿ ಆಸಕ್ತರಿಗೆ ತರಬೇತಿ ನೀಡುತ್ತಾರೆ. ಅತ್ಯಂತ ಸುರಕ್ಷಿತವಾಗಿ ತರಬೇತಿ ನೀಡುತ್ತಿದ್ದಾರೆ. ಈಗ ಹೆಣ್ಣುಮಕ್ಕಳೂ ಈ ಬಗ್ಗೆ ಆಸಕ್ತಿ ಹೊಂದಿ ಸರ್ಫಿಂಗ್ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications