ಮಂಗಳೂರು: ಈಜಲು ತೆರಳಿದ ಬಾಲಕರಿಬ್ಬರು ನೀರುಪಾಲು

ಮಂಗಳೂರು, ಮೇ 30: ನದಿಗೆ ಈಜಲು ತೆರಳಿದ ಬಾಲಕರಿಬ್ಬರು ನೀರುಪಾಲಾದ ಘಟನೆ ಮಂಗಳೂರಿನ ಅಡ್ಯಾರ್ ನಲ್ಲಿ ನಿನ್ನೆ ನಡೆದಿದೆ. ಇಂದು ಬೆಳಿಗ್ಗೆ ಬಾಲಕರ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ.

ಸಾವಿಗೀಡಾದವರನ್ನು ರಾಮಣ್ಣ ಶೆಟ್ಟಿ ಎಂಬವರ ಪುತ್ರ ನಿಖಿತ್ ರಾಜ್(16) ಹಾಗೂ ಕುಂಪನಮಜಲು ನಿವಾಸಿ ಭವಾನಿ ಶಂಕರ್ ಎಂಬವರ ಪುತ್ರ ಯಜ್ಞೇಶ್(17) ಎಂದು ಗುರುತಿಸಲಾಗಿದೆ.

Two teenagers drown in Netravati river at Adyar in mangaluru

ಸೋಮವಾರ ಸಂಜೆ ಅಡ್ಯಾರ್‌ನಲ್ಲಿರುವ ಅರವಿಂದ್ ಮೋಟಾರ್ಸ್‌ ಶೋರೂಂ ಬಳಿ ನೇತ್ರಾವತಿ ನದಿಯಲ್ಲಿ ಈಜಲೆಂದು ಬಾಲಕರಿಬ್ಬರು ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ.

ನಿನ್ನೆ ತೀವ್ರ ಶೋಧ ಕಾರ್ಯ ನಡೆಸಿದರೂ ಇಬ್ಬರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+