ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇತ್ರಾವತಿ ನದಿ ತಿರುವು ವಿರೋಧಿಸಿ ದ.ಕ ಬಂದ್

By Mahesh
|
Google Oneindia Kannada News

ಪುತ್ತೂರು, ಫೆ.28: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ತಿರುವು, ಎತ್ತಿನ ಹೊಳೆ ಯೋಜನೆಯ ವಿರುದ್ಧ ಕರಾವಳಿ ಜೀವನದಿ ಸಂರಕ್ಷಣಾ ಸಮಿತಿ, ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮಾ.3 ರಂದು ಜಿಲ್ಲಾ ಬಂದ್ ಗೆ ಕರೆ ನೀಡಿವೆ. ವಿವಾದಿತ ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಮುಂದಾಗಿದೆ.

ನೇತ್ರಾವತಿ ನದಿ ತಿರುವು ಯೋಜನೆಯನ್ನು ಕೈಬಿಡದಿದ್ದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡದಂತೆ ಚುನಾವಣೆ ಬಹಿಷ್ಕರಿಸುವಂತೆ ಜಿಲ್ಲೆಯಾದ್ಯಂತ ಜನರಿಗೆ ಮನವರಿಕೆ ಮಾಡಲಾಗುವುದು ಎಂದು ಸಹ್ಯಾದ್ರಿ ಸಂರಕ್ಷಣಾ ಸಂಚಯ ಎಚ್ಚರಿಕೆ ನೀಡಿದೆ. ಯೋಜನೆ ವಿರೋಧಿಸಿ ಸುಬ್ರಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಕೇಮಾರು ಸ್ವಾಮೀಜಿಗಳು ದನಿ ಎತ್ತಿದ್ದಾರೆ.

ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿ, ಕೇಂದ್ರ ಪರಿಸರ ಸಚಿವರು, ಹಾಗೂ ಮಾಜಿ ಮುಖ್ಯಮಂತ್ರಿ ಯೋಜನೆಯನ್ನು ಕೈಬಿಡುವುದಾಗಿ ಭರವಸೆ ನೀಡಬೇಕು ಎಂದು ಸಂಚಯದ ಸಂಚಾಲಕ ದಿನೇಶ್ ಹೊಳ್ಳ ಆಗ್ರಹಿಸಿದ್ದಾರೆ.[ನೇತ್ರಾವತಿ ಗೋಳು ಕೇಳುವವರು ಯಾರು?]

ನೇತ್ರಾವತಿ ನದಿ ತಿರುವು (ಎತ್ತಿನ ಹೊಳೆಯು ಇದರ ಅಂಗ) ಯೋಜನೆಯಿಂದ ಪಶ್ಚಿಘಟ್ಟಕ್ಕೆ ಹಾನಿಯಾಗುವ ಕಾರಣ ದಕ್ಷಿಣ ಭಾರತಕ್ಕೆ ಮಳೆ ಪ್ರಮಾಣದಲ್ಲಿ ಕುಸಿತವಾಗುವ ಸಾಧ್ಯತೆ ಇದೆ ಎಂದು ಸುರತ್ಕಲ್ ಎನ್ ‌ಐಟಿಕೆಯ ಪ್ರಾಧ್ಯಾಪಕ ಪ್ರೊ.ಡಾ.ಎಸ್.ಜಿ. ಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Opposition mounts against Yettinahole

ದಾರಿ ಕಿರಿ ಕಿರಿ ಹೋರಾಟ: ದಕ್ಷಿಣ ಕನ್ನಡ ಜಿಲ್ಲೆಯ ಜನರ ಸ್ವಾಭಿಮಾನದ "'ಪ್ರತೀಕ" ನಮ್ಮ ನೇತ್ರಾವತಿ ನದಿಯನ್ನು ಕಳೆದು ಕೊಳ್ಳಲು ಜನತೆ ಯಾರೂ ಸಿದ್ದರಿಲ್ಲ . ಎತ್ತಿನ ಹೊಳೆ ಯೋಜನೆ ಜ್ಯಾರಿ ದ.ಕ ಜಿಲ್ಲೆಯ ನರ ನಾಡಿ ಗಳಿಗೆ ಹಾಕುವ ಕೊಡಲಿ ಏಟು, ಜನರು ಈ ಯೋಜನೆಯಿಂದ ಸಾಯುದಿಲ್ಲ. ಆದ್ರೆ ಗಾಯಗೊಂಡ ಹುಲಿಯಗಿರುತ್ತಾರೆ.

ಜಿಲ್ಲೆ ಜನ ಪ್ರತಿನಿದಿಗಳು ಗಾಯಗೊಂಡ ಹುಲಿಯ ಬಗ್ಗೆ ಸ್ವಲ್ಪ ಯೋಚಿಸಲಿ, ಎಂಬ ಸಂದೇಶ ದೊಂದಿಗೆ ಈ ಕೆಳಗೆ ನಮೂದಿಸಿದ ಫೋನ್ ನಂಬರ್ ಕ್ಕೆ ಸಂಪರ್ಕ ಮಾಡುವ ಉದ್ದೇಶದಿಂದ ಜನ ವಿರೋದಿ ಯೋಜನೆ ಸರ್ಕಾರ ಕೈಬಿಡಲು ''ಜಿಲ್ಲೆಯ ಜನತೆ vs ಜನ ಪ್ರತಿನಿದಿಗಳು (?)'' ಎಂಬ ಅಭಿಯಾನ ದಾರಿ ಸಂಘಟನೆ ಹಮ್ಮಿಕೊಂಡಿದೆ.

ದ.ಕ ಜಿಲ್ಲೆಯ ಜನತೆ ಯು ನಮಗೆ ಬಾರತ ದ ಸಂವಿದಾನ ಕೊಟ್ಟ ವಾಕ್ ಸ್ವಾತಂತ್ರ article 19 ಉಪಯೋಗಿಸಿ ಜನಪ್ರತಿನಿಧಿ(?) ಗಳನ್ನು ನೇರ ಸಂಪರ್ಕಿಸಿ, ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ದ ಹಿತ ಧೃಷ್ಠಿ ಇಂದ ಈ ಯೋಜನೆ ಯನ್ನು ಕೈ ಬಿಡಲು ಹೇಳಿ ಮಂಗಳೂರು ಜನತೆ ಮೂರ್ಖ ರಲ್ಲ ಎಂಬ ಸಂದೇಶ ರವಾನಿಸಿ ದ.ಕ ಜಿಲ್ಲೆಯ ಜನತೆಯಲ್ಲಿ DAARI(Democratic ambassador for all india rural integrity) ದ.ಕ ಜಿಲ್ಲೆ ಘಟಕ ಮನವಿ ಮಾಡುತ್ತದೆ .

ಜನ ಪ್ರತಿನಿಧಿಗಳ ದೂರವಾಣಿ ಸಂಖ್ಯೆ : ಒಂದು ವೇಳೆ ಸ್ವಿಚ್ ಆಫ್ ಮಾಡಿದರೆ ಜನರಿಂದ ಹೆದರಿ ಹೋಗಿದ್ದಾರೆ ಎಂದು ಅರ್ಥ

1) ಸಿದ್ದರಾಮಯ್ಯ, ಮುಖ್ಯ ಮಂತ್ರಿ : 94480 54400/94481 93903 p.a 99451 47429/ 080-2311 1155/080-2225 7244/
2). ಸದಾನಂದ ಗೌಡ :- ಮೊಬೈಲ್, 98681 80269, 94481 23249. ಮನೆ: 080-2341 2999 ಕಚೇರಿ :080-2204 1976, 2356 9999
ನಳಿನ್ ಕುಮಾರ್ ಕಟೀಲ್ :94481 93399 /94485 45445 ಕಚೇರಿ 0824- 2421570
3) ವೀರಪ್ಪ ಮೊಯ್ಲಿ :-ಮೊಬೈಲ್ 98455 36333 ಮನೆ :,080-2343 0491 ಕಚೇರಿ 011-2338 7557,011-2307 0045,011-2301 6764,011-2301 8347
4) ರಮನಾಥ ರೈ :ಮೊಬೈಲ್ 94484 68579 . p.a 97425 53516 ಮನೆ (08255) 234 238 ಕಚೇರಿ(08255) 234 948
5.)ಯು. ಟಿ ಖಾದರ್ : ಮೊಬೈಲ್ 94483 83919 ,P.a 990193 8133 ಮನೆ 0824-2437277
6)ಅಭಯ ಚಂದ್ರ ಜೈನ್ : ಮೊಬೈಲ್ :-98452 81852 ಮನೆ 0825-736483/738333 /080-2235 3375
7}ವಸಂತ ಬಂಗೇರ : ಮೊಬೈಲ್:- 944815 3233
8)ಜೆ ಅರ್ ಲೋಬೋ : ಮೊಬೈಲ್ 94483 75245
9)ಮೊಹಿದ್ದೀನ್ ಬಾವ 92433 35555

English summary
Sri Vidyaprasannateertha Swamiji of Subrahmanya Mutt, Kemaru Seer both termed the decision of the government to implement Yettinahole river diversion project as having been taken in haste, without taking the people of the region into confidence. Dakshina Kannada district protest against project inauguration on March.3
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X