ಮಂಗಳೂರು:ಬಲ್ಮಠ, ಬೆಂದೂರುವೆಲ್ ಸಂಚಾರ ಬದಲಾವಣೆ
ಮಂಗಳೂರು, ಜೂ.30: ನಗರದ ಬಲ್ಮಠ ಸರ್ಕಲ್ ಮತ್ತು ಬೆಂದೂರುವೆಲ್ ಜಂಕ್ಷನ್‌ನಲ್ಲಿ ವಾಹನಗಳ ಸಂಚಾರ ದಟ್ಟನೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ಸಂಚಾರ ಪೊಲೀಸರು ವಾಹನ ಸಂಚಾರದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದಾರೆ.
ಹೊಸ ಬದಲಾವಣೆ ಸೋಮವಾರದಿಂದಲೇ ಜಾರಿಗೆ ಬಂದಿದ್ದು ಸವಾರರು ಈ ಕೆಳಕಂಡ ರಸ್ತೆಯ ಮೂಲಕ ಸಂಚರಿಸಬಹುದಾಗಿದೆ.

ಈ ಹಿಂದೆ ಬಲ್ಮಠ ವೃತ್ತದಿಂದ ಬೆಂದೂರುವೆಲ್ ಜಂಕ್ಷನ್‌ಗೆ ಬರುತ್ತಿದ್ದ ವಾಹನಗಳು ಈಗ ಎಸ್‌ಸಿಎಸ್ ಆಸ್ಪತ್ರೆ ರಸ್ತೆ, ಹಾರ್ಟಿಕಲ್ಚರ್ ಜಂಕ್ಷನ್ ಮೂಲಕ ಬೊಂದೂರ್‌ವೆಲ್‌ಗೆ ಸಂಚರಿಸುವುದು.
ಈ ಹಿಂದೆ ಹಾರ್ಟಿಕಲ್ಚರ್ ಜಂಕ್ಷನ್, ಎಸ್‌ಸಿಎಸ್ ರಸ್ತೆ ಬಳಸಿ ಬಲ್ಮಠಕ್ಕೆ ಬರುತ್ತಿದ್ದ ವಾಹನಗಳು ಬೆಂದೂರುವೆಲ್ ಜಂಕ್ಷನ್‌ನಲ್ಲಿ ಬಲಗಡೆಗೆ ತಿರುಗಿ ಬಲ್ಮಠ ಸರ್ಕಲ್‌ಗೆ ಸಂಚರಿಸುವುದು.
ಕರಾವಳಿ ಜಂಕ್ಷನ್(ಕಂಕನಾಡಿ ವೃತ್ತ) ವೃತ್ತದ ಕಡೆಗೆ ಬರುವ ಎಲ್ಲಾ ವಾಹನಗಳು ಬೆಂದೂರುವೆಲ್ ಜಂಕ್ಷನ್‌ನಿಂದ ಬಲ್ಮಠ ವೃತ್ತಕ್ಕೆ ತಿರುಗಿ ಎಸ್‌ಇಎಸ್ ಆಸ್ಪತ್ರೆಯ ಮೂಲಕ ಹಾರ್ಟಿಕಲ್ಚರ್ ವೃತ್ತದ ಕಡೆಗೆ ಸಂಚರಿಸವುದು.
ಬಲ್ಮಠ ಸರ್ಕಲ್‌ನಿಂದ ಹಾರ್ಟಿಕಲ್ಚರ್ ಜಂಕ್ಷನ್ ರಸ್ತೆ, ಹಾರ್ಟಿಕಲ್ಚರ್ ಜಂಕ್ಷನ್‌ನಿಂದ ಬೊಂದೂರ್‌ವೆಲ್ ರಸ್ತೆ ಮತ್ತು ಬೆಂದೂರುವೆಲ್ ರಸ್ತೆಯಿಂದ ಬಲ್ಮಠ ಸರ್ಕಲ್ ವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಸುಗಮ ಸಂಚಾರ ವ್ಯವಸ್ಥೆಗೆ ಹಾರ್ಟಿಕಲ್ಚರ್ ಜಂಕ್ಷನ್‌ನಿಂದ ಎಸ್‌ಸಿಎಸ್ ಆಸ್ಪತ್ರೆಯ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಮತ್ತು ಬಲ್ಮಠ ವೃತ್ತ ಬಳಿಯ ಹಳೆಯ ಕೆನರಾ ಬ್ಯಾಂಕ್ ಕಟ್ಟಡದ ಸುತ್ತಮುತ್ತ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.












Click it and Unblock the Notifications