ಮಂಗಳೂರು: ಭೂತಾರಾಧನೆ ಜಾಗದಲ್ಲಿ ಕ್ರೀಡಾಂಗಣ?

ಮಂಗಳೂರು, ಫೆ. 5 : ಮಂಗಳೂರು ಮಹಾನಗರ ಪಾಲಿಕೆ ಮತ್ತೊಂದು ಮೈದಾನ ನಿರ್ಮಾಣಕ್ಕೆ ಮುಂದಾಗಿದೆ. ಕೋಡಿಕಲ್ ಬಳಿ ಫಲ್ಗುಣಿ ನದಿ ತೀರಕ್ಕೆ ಸಮೀಪದಲ್ಲಿರುವ ಕಲ್ಲಕಂಡದ ಐದು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ.

ಮಂಗಳೂರು ನಗರದಲ್ಲಿ ಮಂಗಳಾ ಕ್ರೀಡಾಂಗಣ ವನ್ನು ಹೊರತು ಪಡಿಸಿದರೆ ಉಳಿದ ಮೈದಾನಗಳು ಕ್ರೀಡಾ ತರಬೇತಿಗೆ ಬೇಕಾದ ಮೂಲಸೌಕರ್ಯ ಹೊಂದಿಲ್ಲ. ಇಂಥ ಕೊರತೆ ನೀಗಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕೆಂಜಾರು ಬಳಿ 100 ಎಕರೆ ಪ್ರದೇಶವನ್ನು ಕ್ರೀಡಾ ಸಂಕೀರ್ಣಕ್ಕೆ ಮೀಸಲಿಡಬೇಕು ಎಂಬ ಪ್ರಸ್ತಾಪವನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಮೇಯರ್ ಮಹಾಬಲ ಮಾರ್ಲ ತಿಳಿಸಿದ್ದಾರೆ.[ಮಂಗಳೂರು : ಜೆಟ್ ಏರ್‌ವೇಸ್‌ನಿಂದ ಅಬುಧಾಬಿಗೆ ನೇರ ವಿಮಾನ]

mangaluru

ಪ್ರಥಮ ಹಂತದಲ್ಲಿ ಆವರಣಗೋಡೆ ನಿರ್ಮಾಣಕ್ಕೆ 95 ಲಕ್ಷ ರೂ. ಮೀಸಲಿಡಲಾಗಿದೆ. ಬಳಿಕ ಜಾಗವನ್ನು ಸಮತಟ್ಟುಗೊಳಿಸಿ ಯಾವ ಕ್ರೀಡೆಗೆ ಸೂಕ್ತ ಎಂಬುದನ್ನು ನಿರ್ಣಯಿಸಿ ಅದಕ್ಕೆ ತಕ್ಕಂತೆ ಮೈದಾನ ರಚಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಎಸ್‌ಎಫ್‌ಸಿ ವಿಶೇಷ ನಿಧಿಯಲ್ಲಿ 2.50 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಇದರಿಂದ ಮೈದಾನ ರಚನೆಗೆ ಸಿದ್ಧತೆ ನಡೆಸಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್ ಕಾಂತರಾಜು ತಿಳಿಸಿದ್ದಾರೆ.

ದೊಂಪದ ಬಲಿಯ ಜಾಗ: ಮೈದಾನಕ್ಕೆ ಗುರುತು ಮಾಡಿರುವ ಜಾಗ ಭೂತಾರಾಧನೆಯ ಕೇಂದ್ರವಾಗಿದ್ದು ಕಾಮಗಾರಿ ವೇಳೆ ಗೊಂದಲ ಉಂಟಾದರೂ ಆಶ್ಚರ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+