National Highway: ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಂಬಂಧ ಯೋಜನೆಗಳ ಅನುಮೋದನೆ ಕುರಿತು ಬಿಗ್ ಅಪ್‌ಡೇಟ್
National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಹಾಗೆಯೇ ಇದೀಗ ಹೆದ್ದಾರಿ ಸಂಬಂಧ ಕೇಂದ್ರ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಮೂರು ಯೋಜನೆಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 35 ಕಿಲೋ ಮೀಟರ್ ಮಂಗಳೂರು ಬೈಪಾಸ್, ಸುರತ್ಕಲ್ - ಬಿ.ಸಿ.ರೋಡ್ ಅಪ್‌ಗ್ರೇಡ್, ತಲಪಾಡಿಯಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರ್ವಿಸ್ ರಸ್ತೆಗಳ ನಿರ್ಮಾಣ ಸೇರಿ ಬಹುಕಾಲದಿಂದ ಬಾಕಿ ಇದ್ದ ಈ ಮೂರು ಯೋಜನೆಗಳ ಡಿಪಿಆರ್‌ಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದಿಂದ ಅನುಮೋದನೆ ನೀಡಿದೆ.

ಈ ಹೆದ್ದಾರಿ ಕಾರಿಡಾರ್ ಮಂಗಳೂರಿಗೆ ಪ್ರಮುಖ ಪ್ರವೇಶ ದ್ವಾರ ಆಗಿದೆ. ಇದು ಬಂದರು ಪ್ರವೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಎನ್‌ಎಚ್‌ಎಐ ಈ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಂಡಿದ್ದಾರೆ. ಇದು ಆತ್ಮನಿರ್ಭರ ಮತ್ತು ವಿಕಸಿತ ಭಾರತ್ ಪರಿಕಲ್ಪನೆಯ ಅಡಿಯಲ್ಲಿ ಪ್ರಾದೇಶಿಕ ಬೆಳವಣಿಗೆಗೆ ಪೂರಕ ಆಗಲಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಅಭಿವೃದ್ಧಿ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು, "ಮಂಗಳೂರು ಬೈಪಾಸ್ ಮತ್ತು ಸುರತ್ಕಲ್ - ಬಿ.ಸಿ. ರಸ್ತೆ ಮೇಲ್ದರ್ಜೆಗೇರಿಸುವಿಕೆಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಡಿಪಿಆರ್‌ಗಳು ಮಂಜೂರಾಗಿದೆ. ತಲಪಾಡಿಯಿಂದ ಕುಂದಾಪುರದವರೆಗಿನ ಎನ್‌ಎಚ್ - 66 ರ ಸರ್ವಿಸ್ ರಸ್ತೆಗಳಿಗೂ ಮಂಜೂರಾತಿ ದೊರೆತಿದೆ ಎಂದು ಹಂಚಿಕೊಳ್ಳಲು ಸಂತೋಷವಾಗುತ್ತಿದೆ," ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಯಾವೆಲ್ಲಾ ಯೋಜನೆಗಳ ಡಿಪಿಆರ್‌ಗಳಿಗೆ ಅನುಮೋದನೆ?
* ಮಂಗಳೂರು ಬೈಪಾಸ್
* ಸುರತ್ಕಲ್ - ಬಿ.ಸಿ. ರಸ್ತೆ
* ತಲಪಾಡಿಯಿಂದ ಕುಂದಾಪುರದವರೆಗಿನ NH - 66ರ ಸರ್ವಿಸ್ ರಸ್ತೆ
ಸಂಸದರು ಹೇಳಿದ್ದೇನು?: "ಪ್ರಯಾಣಿಕರು ಎದುರಿಸುತ್ತಿರುವ ದೈನಂದಿನ ಮಸ್ಯೆಗಳು ಮತ್ತು ನಮ್ಮ ಪ್ರದೇಶದ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಮೂಲಸೌಕರ್ಯ ಅಡಚಣೆಗಳ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ನಾನು ಈ ಸಮಸ್ಯೆಗಳನ್ನು ನಿರಂತರವಾಗಿ ಸರ್ಕಾರದ ಗಮನಕ್ಕೆ ತಂದಿದ್ದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಬೇಡಿಕೆಗಳ ಮೇಲೆ ಕ್ರಮ ಕೈಗೊಂಡಿದ್ದಕ್ಕಾಗಿ ಹಾಗೂ ಪ್ರಾದೇಶಿಕ ಬೆಳವಣಿಗೆಗೆ ಶಕ್ತಿ ನೀಡುವ ಹೆದ್ದಾರಿಯನ್ನು ಬಲಪಡಿಸಿದ್ದಕ್ಕಾಗಿ ಪ್ರಧಾನಿ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಧನ್ಯವಾದಗಳು," ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಕೆಲವು ರಾಷ್ಟ್ರೀಯ ಹೆದ್ದಾರಿಗಳು ಉದ್ಘಾಟನೆ ಹಂತದಲ್ಲಿದ್ದರೆ, ಇನ್ನೂ ಹಲವು ಕಾಮಗಾರಿ ಹಂತದಲ್ಲಿವೆ. ಅದರಲ್ಲೂ ದಕ್ಷಿಣ ಕನ್ನಡ ಭಾಗದಲ್ಲಿ ಮಳೆ ಬಂದರೆ ಸಾಕು ರಸ್ತೆಗಳಿಗೆ ಗುಡ್ಡದ ಮಣ್ಣು ಕುಸಿತು ವಾಹನ ಸವಾರರಿಗೆ ಅಡಚಣೆ ಉಂಟಾಗಿರುವ ಘಟನೆಗಳು ನಡೆದಿವೆ. ಈಗಲೂ ಕೂಡ ಈ ಭಾಗದ ಹಲವೆಡೆ ಪ್ರಮುಖ ಹೆದ್ದಾರಿಗಳ ದರಸ್ತಿ ಕಾರ್ಯ ಮುಂದುವರೆದಿದೆ. ಇನ್ನೂ ಇದೀಗ ಬಹುದಿನಗಳಿಂದ ಬಾಕಿ ಇದ್ದ ಮಂಗಳೂರು ಬೈಪಾಸ್, ಸುರತ್ಕಲ್ - ಬಿ.ಸಿ.ರೋಡ್ ಅಪ್‌ಗ್ರೇಡ್, ತಲಪಾಡಿಯಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರ್ವಿಸ್ ರಸ್ತೆಗಳ ನಿರ್ಮಾಣ ಸೇರಿ ಈ ಮೂರು ಯೋಜನೆಗಳ ಡಿಪಿಆರ್‌ಗಳಿಗೆ ಕೇಂದ್ರ ಅನುಮೋದನೆ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆ ಜನರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.












Click it and Unblock the Notifications