ಮಂಗಳೂರು ದಸರಾ: ಕ್ರೀಡಾ ಸಾಧಕರಿಗೆ ಸನ್ಮಾನ, ಗೋಕರ್ಣನಾಥ ಆರೋಗ್ಯ ಕಾರ್ಡ್ ಬಿಡುಗಡೆ

ಮಂಗಳೂರು, ಅಕ್ಟೋಬರ್. 18: ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 18ರಂದು 10 ಕ್ರೀಡಾ ಸಾಧಕರಿಗೆ ಸನ್ಮಾನ ಹಾಗೂ ಗೋಕರ್ಣನಾಥ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಲಾಗುವುದೆಂದು ಕ್ಷೇತ್ರದ ಆಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಹೇಳಿದರು.

ಮೈಸೂರು ದಸರಾ - ವಿಶೇಷ ಪುರವಣಿ

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ತೋರಿದ ಎಂಆರ್ ಪೂವಮ್ಮ, ಗುರುರಾಜ್, ಜಗದೀಶ್, ಪ್ರದೀಪ್ ಆಚಾರ್ಯ, ಪಂಚಮಿ ಸೇರಿದಂತೆ 10 ಮಂದಿಗೆ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಗೋಕರ್ಣನಾಥ ಆರೋಗ್ಯ ಕಾರ್ಡ್ ನಿಂದಾಗಿ 2 ಸಾವಿರ ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದೆ. ಆರೋಗ್ಯ ಕಾರ್ಡ್ ಮೂಲಕ ಚಿಕಿತ್ಸೆಗಾಗಿ ನಗರದ ಎಜೆ ಆಸ್ಪತ್ರೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

MR Poovamma will be honored at Mangalore Dasara

ಈ ಬಾರಿಯ ಮಂಗಳೂರು ದಸರಾ ಉತ್ಸವ ಮೆರವಣಿಗೆಯಲ್ಲಿ 75ಕ್ಕೂ ಅಧಿಕ ಸ್ತಬ್ಧಚಿತ್ರಗಳು, 100ಕ್ಕೂ ಅಧಿಕ ಕಲಾತಂಡಗಳು ಭಾಗವಹಿಸಲಿವೆ. ಮೆರವಣಿಗೆ ಸುಸಾಂಗವಾಗಿ ನಡೆಯಲು ಪ್ರತಿಯೊಂದು ಟ್ಯಾಬ್ಲೋ ತಂಡಕ್ಕೆ ಒಬ್ಬರು ಎಎಸ್ಸೈ, 4 ಕಾನ್‌ಸ್ಟೇಬಲ್ ಗಳನ್ನು ನಿಯೋಜಿಸುವುದಾಗಿ ಪೊಲೀಸ್ ಅಧಿಕಾರಿಗಳು ಭವರಸೆ ನೀಡಿದ್ದಾರೆ ಎಂದು ಪದ್ಮರಾಜ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+