ಸಿದ್ಧರಾಮಯ್ಯ ಒಬ್ಬ ಕ್ರೂರಿ, ಧರ್ಮ, ಜಾತಿ, ಸಮಾಜ ಒಡೆದ ಸಿಎಂ: ಕರಂದ್ಲಾಜೆ

Recommended Video

      ಸಿದ್ದರಾಮಯ್ಯನವರನ್ನ ನಿಂದಿಸಿದ ಶೋಭಾ ಕರಂದ್ಲಾಜೆ | Oneindia Kannada

      ಮಂಗಳೂರು, ಏಪ್ರಿಲ್ 20: ರಾಜ್ಯದಲ್ಲಿ 3,715 ರೈತರು ಆತ್ಮಹತ್ಯೆ ಮಾಡಿದ್ದರೂ ರಾಜ್ಯ ಸರಕಾರ ರೈತರಿಗೆ ಪರಿಹಾರ ನೀಡಿಲ್ಲ. ಆದರೆ ದನಗಳ್ಳರಿಗೆ ಕೂಡಲೇ ಪರಿಹಾರವನ್ನು ಈ ಸರಕಾರ ಘೋಷಣೆ ಮಾಡುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

      ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ರಾಜ್ಯ ಸರಕಾರ ಕಾರಣ ಎಂದು ಆರೋಪಿಸಿದರು.

      ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

      ಸಿದ್ಧರಾಮಯ್ಯ ಒಬ್ಬ ಕ್ರೂರಿ, ಧರ್ಮ,ಜಾತಿ,ಸಮಾಜ ಒಡೆದ ಮುಖ್ಯಮಂತ್ರಿ ಎಂದು ಕಿಡಿಕಾರಿದ ಅವರು ಟಿಪ್ಪು ಹೆಸರಿನಲ್ಲಿ ಅಲ್ಪಸಂಖ್ಯಾತರ ಓಲೈಕೆ ಮಾಡಿದ ಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

      ರಾಜ್ಯದಲ್ಲಿ 70 ವರ್ಷಗಳಲ್ಲಿ ಸಾಕಷ್ಟು ಕಾಂಗ್ರೆಸ್ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಆದರೆ ಅದ್ಯಾವ ಮುಖ್ಯಮಂತ್ರಿಗಳಿಗೂ ಟಿಪ್ಪುವಿನ ಹೆಸರಿನಲ್ಲಿ ರಾಜಕೀಯ ಮಾಡಲು ತೋಚಲಿಲ್ಲ. ಆದರೆ ಸಿದ್ಧರಾಮಯ್ಯ ಕೇವಲ ರಾಜಕೀಯಕ್ಕೋಸ್ಕರ ಟಿಪ್ಪುವಿನ ಹೆಸರಿನಲ್ಲಿ ರಾಜಕೀಯ ಮಾಡಿದರು ಹಾಗೂ ಜಾತಿ, ಧರ್ಮ ಒಡೆದರು ಎಂದು ಅವರು ಕಿಡಿಕಾರಿದರು.

      ಕೇಂದ್ರ ದಿಂದ ಬಂದ ಅನುದಾನವನ್ನು ಜನರಿಗೆ ನೀಡದೆ ರಾಜ್ಯ ಸರಕಾರ ತಿಂದು ನೀರು ಕುಡಿದಿದೆ ಎಂದು ದೂರಿದ ಅವರು, ಯುದ್ಧ ಆರಂಭವಾಗಿದೆ. ಕಣದಲ್ಲಿ ಹಲವು ಪಕ್ಷಗಳಿವೆ. ಆದರೆ ಇದು ಧರ್ಮ-ಅಧರ್ಮ, ಸತ್ಯ - ಸುಳ್ಳು, ಸಿದ್ದು-ಯಡಿಯೂರಪ್ಪ ನಡುವಿನ ಚುನಾವಣೆ ಎಂದು ಹೇಳಿದರು.

      ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ರಾಜ್ಯದಲ್ಲಿ ಸರಕಾರ ರಚಿಸಲಿದೆ ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+