ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳ್ವಾಸ್ ನುಡಿಸಿರಿಗೆ ದಿನಗಣನೆ ಆರಂಭ, ಭರದಿಂದ ಸಾಗಿದ ಸಿದ್ಧತೆ

|
Google Oneindia Kannada News

ಮಂಗಳೂರು, ನವೆಂಬರ್. 13:ಕನ್ನಡ ನಾಡು, ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ 2018'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 16 ರಿಂದ ಆರಂಭ ಗೊಳ್ಳಲಿರುವ ನುಡಿಸಿರಿ ಸಮ್ಮೇಳನಕ್ಕೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಮೂರು ದಿನಗಳ ಕಾಲ ನಡೆಯಲಿರುವ ಈ ನುಡಿಸಿರಿ ಸಮ್ಮೇಳನ ಈ ಬಾರಿ 'ಕರ್ನಾಟಕ ದರ್ಶನ- ಬಹುರೂಪಿ ಆಯಾಮಗಳು' ಎಂಬ ಪರಿಕಲ್ಪನೆಯಲ್ಲಿ ನಡೆಯಲಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಸಾಹಿತಿ, ಸಂಶೋಧಕಿ ಡಾ. ಮಲ್ಲಿಕಾ ಎಸ್.ಘಂಟಿ ವಹಿಸಲಿದ್ದಾರೆ. ಸಂಶೋಧಕ ಡಾ.ಷ.ಶೆಟ್ಟರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಈ ಬಾರಿ ಪ್ರಮುಖವಾಗಿ ಒಟ್ಟು 4 ಗೋಷ್ಠಿಗಳು ನಡೆಯಲಿದ್ದು, 'ರಾಮಾಯಣ:ಸಮಕಾಲೀನ ನೆಲೆಗಳು' ಕುರಿತು ಲಕ್ಷ್ಮೀಶ ತೋಳ್ಪಾಡಿ, 'ಮಹಾಭಾರತ: ಸಮಕಾಲೀನ ನೆಲೆಗಳು' ಕುರಿತು ಉಮಾಕಾಂತ ಭಟ್ಟ ವಿಷಯ ಮಂಡಿಸಲಿದ್ದಾರೆ.

15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್‌. ಘಂಟಿ ಆಯ್ಕೆ15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್‌. ಘಂಟಿ ಆಯ್ಕೆ

ಎರಡನೇ ಗೋಷ್ಠಿಯಲ್ಲಿ 'ವಚನ' ಕುರಿತು ಡಾ. ವಿಜಯ ಕುಮಾರ ಎಸ್. ಕಟಗಿಹಳ್ಳಿಮಠ, 'ಕೀರ್ತನ' ಕುರಿತು ಡಾ.ಎಚ್.ಎನ್.ಮುರಳೀಧರ, 'ಸೂಫಿ' ಕುರಿತು ರಂಜಾನ್ ದರ್ಗಾ, 'ತತ್ತ್ವಪದ' ಕುರಿತು ಡಾ.ಬಸವರಾಜ ಸಬರದ ವಿಷಯ ಮಂಡಿಸಲಿದ್ದಾರೆ.

ಮೂರನೆಯ ಗೋಷ್ಠಿಯಲ್ಲಿ 'ಶಿಕ್ಷಣ ಮತ್ತು ಸಾಮರಸ್ಯ'ದ ಕುರಿತು ಬಿ.ಗಣಪತಿ ಹಾಗೂ ನಾಲ್ಕನೆಯ ಗೋಷ್ಠಿಯಲ್ಲಿ 'ಜನಪದ ಸಾಹಿತ್ಯ'ದ ಕುರಿತು ಡಾ. ಪಿ.ಕೆ.ರಾಜಶೇಖರ, 'ಜನಪದ ಆರಾಧನೆ'ಯ ಕುರಿತು ಡಾ.ಅಂಬಳಿಕೆ ಹಿರಿಯಣ್ಣ ಹಾಗೂ 'ಜನಪದ ಕಲಾ ಪರಂಪರೆ'ಯ ಕುರಿತು ಡಾ.ಡಿ.ಬಿ.ನಾಯಕ ವಿಚಾರ ಮಂಡಿಸಲಿದ್ದಾರೆ.

 ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ

ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ

ಸಮ್ಮೇಳನದಲ್ಲಿ ಈ ಬಾರಿ ಒಟ್ಟು 8 ವಿಶೇಷೋಪನ್ಯಾಸಗಳು ನಡೆಯಲಿವೆ. ಕನ್ನಡ ಪದ ಸೃಷ್ಟಿ ಸ್ವೀಕರಣ ಮತ್ತು ಬಳಕೆ ಕುರಿತು ಪ್ರೊ.ಎಂ.ಕೃಷ್ಣೇ ಗೌಡ, ಇತ್ತೀಚಿನ ಮಹತ್ವದ ಪ್ರಕಟಣೆಗಳ ಕುರಿತು ರಘುನಾಥ ಚ.ಹ, ಅಖಂಡ ಕರ್ನಾಟಕದ ಕುರಿತು ವೈ.ಎಸ್.ವಿ.ದತ್ತ, ಸಮಾಜಾಭಿವೃದ್ಧಿಯಲ್ಲಿ ವ್ಯಕ್ತಿ ಹೊಣೆಗಾರಿಕೆ ಕುರಿತು ಪ್ರೊ.ಜಿ.ಬಿ.ಶಿವರಾಜ್, ಜೀವನ ಪದ್ಧತಿಯ ಆತಂಕದ ನೆಲೆಗಳು ಕುರಿತು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಸಮಕಾಲೀನ ಸಂದರ್ಭ: ಮಹಿಳಾ ಬಿಕ್ಕಟ್ಟುಗಳು ಕುರಿತು ಡಾ.ಎಂ.ಉಷಾ, ಸಾಮಾಜಿಕ ಜಾಲತಾಣ ಕುರಿತು ರೋಹಿತ್ ಚಕ್ರತೀರ್ಥ ಹಾಗೂ ಐಟಿಯಿಂದ ಮೇಟಿಗೆ ಕುರಿತು ವಸಂತ ಕಜೆ ವಿಚಾರಗಳನ್ನು ಮಂಡಿಸಲಿದ್ದಾರೆ.

 ನವೆಂಬರ್ 16 ರಂದು ಮೂಡಬಿದ್ರೆಯಲ್ಲಿ 15 ನೇ ಆಳ್ವಾಸ್ ನುಡಿಸಿರಿ ನವೆಂಬರ್ 16 ರಂದು ಮೂಡಬಿದ್ರೆಯಲ್ಲಿ 15 ನೇ ಆಳ್ವಾಸ್ ನುಡಿಸಿರಿ

 ನುಡಿ ನಮನ ಸಲ್ಲಿಕೆ

ನುಡಿ ನಮನ ಸಲ್ಲಿಕೆ

ಕನ್ನಡ ನಾಡು -ನುಡಿ-ಸಂಸ್ಕೃತಿಗಾಗಿ ಸೇವೆ ಸಲ್ಲಿಸಿ ವರ್ತಮಾನದಲ್ಲಿ ನಮ್ಮೊಂದಿಗೆ ಇಲ್ಲದ ವಿದ್ವಾಂಸರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ. ಪ್ರಭುಶಂಕರ ಅವರ ಕುರಿತು ಡಾ. ಎನ್.ಎಸ್.ತಾರಾನಾಥ, ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರ ಕುರಿತು ಡಾ.ಜಿ.ಎಂ.ಹೆಗಡೆ ಹಾಗೂ ಕವಿ ಡಾ. ಸುಮತೀಂದ್ರ ನಾಡಿಗರ ಕುರಿತು ಮಹಾಬಲಮೂರ್ತಿ ಕೊಡ್ಲಕೆರೆ ನುಡಿನಮನ ಸಲ್ಲಿಸಲಿದ್ದಾರೆ.

 ಮಾತಿನ ಗೌರವಾರ್ಪಣೆ

ಮಾತಿನ ಗೌರವಾರ್ಪಣೆ

ಕನ್ನಡದ ಖ್ಯಾತ ತತ್ತ್ವಪದಗಾರರೂ ಸೂಫಿ ಸಂತರೂ ಆಗಿರುವ ಸಂತ ಶಿಶುನಾಳ ಶರೀಫರ ಇನ್ನೂರನೆಯ ವರ್ಷಾಚರಣೆಯ ವರ್ಷದ ಹಿನ್ನೆಲೆಯಲ್ಲಿ ನಾಡೋಜ ಡಾ.ಮಹೇಶ್ ಜೋಶಿಯವರು ಸಂತ ಶಿಶುನಾಳ ಶರೀಫರ ಕುರಿತು ಮಾತಿನ ಗೌರವಾರ್ಪಣೆ ನಡೆಸಿಕೊಡಲಿದ್ದಾರೆ.

 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ

ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ

ರತ್ನಾಕರವರ್ಣಿ ವೇದಿಕೆ, ಸಂತ ಶಿಶುನಾಳ ಶರೀಫ ಸಭಾಂಗಣ, ಕು.ಶಿ.ಹರಿದಾಸ ಭಟ್ಟ ವೇದಿಕೆ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ವೇದಿಕೆಗಳಲ್ಲಿ ಮುಸ್ಸಂಜೆಯಿಂದ ತಡರಾತ್ರಿಯವರೆಗೆ ಹಾಗೂ ಡಾ.ವಿ.ಎಸ್.ಆಚಾರ್ಯ ಸಭಾಭವನದ ಮಿಜಾರುಗುತ್ತು ಭಗವಾನ್ ಶೆಟ್ಟಿ ವೇದಿಕೆ, ಕೆ.ವಿ.ಸುಬ್ಬಣ್ಣ ಬಯಲುರಂಗ ಮಂದಿರ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಕೃಷಿ ಆವರಣದ ಆನಂದ ಬೋಳಾರ್ ವೇದಿಕೆಗಳಲ್ಲಿ ಹಗಲು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

English summary
Alva's education foundation organised the 15th Alvas Nudisiri for three days from November 16th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X