'ಮೋದಿ ಚುನಾವಣಾ ಪ್ರಚಾರಕ್ಕೆ 5 ಸಾವಿರ ಕೋಟಿ ಖರ್ಚು ಮಾಡುತ್ತಿದ್ದಾರೆ'
ಮಂಗಳೂರು, ಫೆಬ್ರವರಿ 25: ಮೋದಿ ಸುಳ್ಳಿನಿಂದ ದೇಶ ಕಟ್ಟಲು ಹೊರಟಿದ್ದು, ಕೇವಲ ಚುನಾವಣಾ ಪ್ರಚಾರಕ್ಕಾಗಿ 5 ಸಾವಿರ ಕೋಟಿ ಖರ್ಚು ಮಾಡುತ್ತಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತ ವ್ಯಯವಾಗ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಲ್ವಾಮಾ ಉಗ್ರರ ದಾಳಿ ಘಟನೆಗೆ ಮೋದಿ ಸರ್ಕಾರದ ವೈಫಲ್ಯವೇ ಕಾರಣ. ಸರ್ಕಾರದ ಇಂಟೆಲಿಜೆನ್ಸ್ ವೈಫಲ್ಯ ಆಗಿದ್ದರಿಂದ ಯೋಧರು ಸಾವು ಕಂಡಿದ್ದಾರೆ. ದೇಶಪ್ರೇಮದ ನಾಟಕವಾಡುವ ಬಿಜೆಪಿಗೆ ಮತ ಕೇಳುವ ಹಕ್ಕಿಲ್ಲ ಎಂದರು.
ಪುಲ್ವಾಮಾ ಉಗ್ರರ ದಾಳಿ ಬಗ್ಗೆ ಮೊದಲು ಕರಂದ್ಲಾಜೆ ಮಾತನಾಡಲಿ: ಕೆಪಿಸಿಸಿ ಅಧ್ಯಕ್ಷ
ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಯಿಸಿ ಸರಕಾರ ಅಂದ್ಮೇಲೆ ಮೈತ್ರಿ ಧರ್ಮ ಪಾಲಿಸುವುದು ಮುಖ್ಯ. ಒಂದು ವಾರದೊಳಗೆ ಯಾವೆಲ್ಲ ಸೀಟುಗಳನ್ನು ಬಿಟ್ಟು ಕೊಡಬೇಕೆಂದು ನಿರ್ಣಯಿಸಲಿದ್ದೇವೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
'ಪ್ರಕಾಶ್ ರೈ ಕಾಂಗ್ರೆಸ್ ಸೇರದಿದ್ರೆ ನಾವೇನು ಮಾಡೋಕಾಗುತ್ತೆ?'
ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ತನಗೆ ಆ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ.
ಯಾವುದೇ ನಿರ್ಲಕ್ಷ್ಯ ಇದ್ದಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅರಣ್ಯ ದುರಂತದ ಬಗ್ಗೆ ಖಂಡ್ರೆ ಪ್ರತಿಕ್ರಯಿಸಿದರು.