ಮೋದಿ ಉಡುಗೊರೆಯನ್ನು ಹರಾಜಿನಲ್ಲಿ ಖರೀದಿಸಿದ ಮಂಗಳೂರಿನ ಅಭಿಮಾನಿಗಳು

ಮಂಗಳೂರ ಏಪ್ರಿಲ್ 24:ದೇಶದಾದ್ಯಂತ ಲೋಕಸಭಾ ಚುನಾವಣೆಯ ಕಾವು ಏರುತ್ತಲೇ ಇದೆ. ಲೋಕಸಭಾ ಚುನಾವಣೆಯ 3 ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಿದೆ. ಈ ನಡುವೆ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ದೇಶಾದ್ಯಂತ ಧೂಳೆಬ್ಬಿಸಿದೆ.

ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ಮೋದಿ ಧರಿಸುವ ವಸ್ತ್ರಗಳು ಅವರಷ್ಟೇ ಆಕರ್ಷಕ . ಮೋದಿ ಧರಿಸಿದ ವಸ್ತ್ರ , ಪೇಟಾ, ಶಾಲುಗಳಿಗೆ ಈಗ ಭಾರೀ ಡಿಮಾಂಡ್ ಬಂದಿದೆ. ಇತ್ತೀಚೆಗೆ ನರೇಂದ್ರ ಮೋದಿ ಅವರಿಗೆ ಪ್ರವಾಸಗಳಲ್ಲಿ ದೊರೆತ ಉಡುಗೊರೆಗಳನ್ನು ಹರಾಜು ಹಾಕಲಾಗಿತ್ತು.

ಈ ಪ್ರಕ್ರಿಯೆಯಲ್ಲಿ ಮೋದಿ ಅವರು ಧರಿಸಿದ್ದ ಎರಡು ಪೇಟಾ ಹಾಗೂ ಎರಡು ಶಾಲುಗಳನ್ನು ಮಂಗಳೂರಿನ ಮೋದಿ ಅಭಿಮಾನಿಗಳಿಬ್ಬರು ಖರೀದಿಸಿದ್ದಾರೆ.

ಪ್ರಧಾನಿ ಮೋದಿ ಅಭಿಮಾನಿಗಳಾದ ನಗರದ ಖಾಸಗಿ ಕಂಪೆನಿ ಉದ್ಯೋಗಿ ದೀಪಾ ಶೆಣೈ ಹಾಗೂ ಮಮತಾ ಶೆಣೈ ಪೇಟಾ ಮತ್ತು ಶಾಲುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ . ಹರಾಜು ಪ್ರಕ್ರಿಯೆ ಬಗ್ಗೆ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಗಮನಿಸಿ ಈ ಇಬ್ಬರು ಬಿಡ್ ನ‌ಲ್ಲಿ ಭಾಗಿಯಾಗಿದ್ದರು.ಹೀಗೆ ಹರಾಜಿನಲ್ಲಿ ಖರೀದಿಸಿರುವ ಪೇಟಾ ಹಾಗೂ ಬಾಂದನಿ ಶಾಲುಗಳು ದೀಪಾ ಮತ್ತು ಮಮತಾರ ಕೈ ಸೇರಿವೆ.

 ಇ- ಹರಾಜು ಪ್ರಕ್ರಿಯೆ ಮೂಲಕ ಮಾರಾಟ

ಇ- ಹರಾಜು ಪ್ರಕ್ರಿಯೆ ಮೂಲಕ ಮಾರಾಟ

ಕಳೆದ ಜನವರಿಯಲ್ಲಿ ದೆಹಲಿಯ ಆರ್ಟ್‌ ಗ್ಯಾಲರಿಯಲ್ಲಿ ಮೋದಿ ಅವರಿಗೆ ಉಡುಗೊರೆಯಾಗಿ ಸಿಕ್ಕ ಕಲಾಕೃತಿಗಳು, ವಾಸ್ತುಶಿಲ್ಪಗಳು, ಶಾಲು, ಜಾಕೆಟ್, ಸಂಗೀತ ಉಪಕರಣಗಳು ಸೇರಿದಂತೆ ಹಲವು ವಸ್ತುಗಳನ್ನು ಹರಾಜು ಹಾಕಲಾಗಿತ್ತು. ಆ ಬಳಿಕವೂ ಉಳಿದವುಗಳನ್ನು ಇ- ಹರಾಜು ಪ್ರಕ್ರಿಯೆ ಮೂಲಕ ಮಾರಲಾಗಿತ್ತು.

 ಇದೇ ಮೋದಿ ಅವರ ಉದ್ದೇಶ

ಇದೇ ಮೋದಿ ಅವರ ಉದ್ದೇಶ

ತಮಗೆ ದೊರೆತ ಉಡುಗೊರೆಗಳನ್ನು ಹರಾಜಿಗೆ ಹಾಕಿ ನಂತರ ಬಂದ ಹಣವನ್ನು ಗಂಗಾ ನದಿ ಸ್ವಚ್ಛಗೊಳಿಸುವ ಉದ್ದೇಶ ಮೋದಿ ಅವರದ್ದಾಗಿತ್ತು. ಹರಾಜಿನಲ್ಲಿ ದೊರೆತ ಹಣವನ್ನು ನವಾಮಿ ಗಂಗೆ ಯೋಜನೆಗೆ ಬಳಸುವ ಮೋದಿ ಅವರ ಉದ್ದೇಶದ ಬಗ್ಗೆ ಮಾಹಿತಿ ಪಡೆದ ಮಮತಾ ಹಾಗು ದೀಪಾ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿಲು ತೀರ್ಮಾನಿಸಿದರು.

 ಪೇಟಾದ ಮೂಲ ಬೆಲೆ 800 ರೂ.

ಪೇಟಾದ ಮೂಲ ಬೆಲೆ 800 ರೂ.

ಇ-ಹರಾಜಿನಲ್ಲಿ ಹಲವು ವಸ್ತುಗಳಿಗೆ ಬಿಡ್ ಮಾಡಿದರೂ ಎಲ್ಲವುಗಳ ಬೆಲೆ ಸಾವಿರದಿಂದ ಲಕ್ಷದವರೆಗೆ ಏರಿತು. ಕೊನೆಗೆ ಇವರ ಕಣ್ಣಿಗೆ ಬಿದ್ದದ್ದು ಪೇಟಾ ಹಾಗೂ ಬಾಂದಿನಿ ಶಾಲು. ದೀಪಾ ಅವರು ಆಯ್ಕೆ ಮಾಡಿದ ಪೇಟಾದ ಮೂಲ ಬೆಲೆ 800 ರೂಪಾಯಿ ಇತ್ತು. ಬಿಡ್ಡಿಂಗ್ ಆದ ಬಳಿಕ 1600 ಕ್ಕೆ ಏರಿತು. ಕೂಡಲೇ ದೀಪಾ ಅದನ್ನು ಖರೀದಿಸಿದರು.

 7 ಸಾವಿರ ರೂ.ಕೊಟ್ಟು ಖರೀದಿ

7 ಸಾವಿರ ರೂ.ಕೊಟ್ಟು ಖರೀದಿ

200 ರೂಪಾಯಿ ಕೊರಿಯರ್ ಚಾರ್ಜ್‌, 94 ರೂಪಾಯಿ ವಿಮೆ ಎಲ್ಲವೂ ಸೇರಿ ಒಟ್ಟು 1,894 ರೂಪಾಯಿಗೆ ಮೋದಿ ಅವರು ಧರಿಸಿದ್ದ ಪೇಟಾ ದೀಪಾ ಅವರಿಗೆ ದೊರೆತಿದೆ. ಮಮತಾ ಅವರು ಎರಡು ಬಾಂದಿನಿ ಶಾಲು ಹಾಗೂ ಒಂದು ಪೇಟಾವನ್ನು ಸುಮಾರು 7 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+