• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಟಿ ಕಚೇರಿ ವಿಲೀನದ ಕುರಿತು ವಿತ್ತ ಸಚಿವೆಗೆ ಸಚಿವ ಕೋಟ ಪತ್ರ

By ಮಂಗಳೂರು ಪ್ರತಿನಿಧಿ
|

ಮಂಗಳೂರು‌, ಸೆಪ್ಟೆಂಬರ್ 3: ಮಂಗಳೂರು ಆದಾಯ ತೆರಿಗೆ ಆಡಳಿತದ ಪ್ರಧಾನ ಆಯುಕ್ತ ಕಚೇರಿಯನ್ನು ಗೋವಾದ ಪಂಜಿಮ್ ಆದಾಯ ತೆರಿಗೆ ಆಡಳಿತದ ಪ್ರಧಾನ ಆಯುಕ್ತ ಕಚೇರಿಯೊಂದಿಗೆ ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

ಕಚೇರಿಯನ್ನು ವಿಲೀನಗೊಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೇ ಆಗಸ್ಟ್‌ 28ರಂದು ಈ ಬಗ್ಗೆ ಉಡುಪಿ ಇನ್‌ ಕಾರ್ಪೊರೇಟೆಡ್ ಎರಡು ಪತ್ರಗಳನ್ನು ಸಚಿವಾಲಯಕ್ಕೆ ಕಳುಹಿಸಿದೆ. ಈ ಪತ್ರದಲ್ಲಿ ಉಲ್ಲೇಖಿಸಿರುವ ಅಂಶವನ್ನು ಪರಿಗಣಿಸುವಂತೆ ಉಸ್ತುವಾರಿ ಸಚಿವರು ಒತ್ತಾಯಿಸಿದ್ದಾರೆ.

ದೇವಸ್ಥಾನಗಳಲ್ಲಿ ಸೆಪ್ಟೆಂಬರ್ ನಿಂದ ಆರಂಭವಾಗುತ್ತಾ ಸೇವೆಗಳು?

ಪತ್ರದಲ್ಲಿ ಉಲ್ಲೇಖಿಸಿರುವಂತೆ ಎರಡು ಆದಾಯ ತೆರಿಗೆಯ ಆಡಳಿತ ಕಚೇರಿಯನ್ನು ವಿಲೀನಗೊಳಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋಟ ಶ್ರೀನಿವಾಸ್‌ ಪೂಜಾರಿ ಅವರು ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿದ್ದಾರೆ.

English summary
Minister Kota srinivasa pujari has written letter to Nimrala Seetharaman in relation to merging of mangaluru income tax office
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X